ಶಾಲೆಗಳಲ್ಲಿ ಹಿಜಾಬ್: ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ರಾಜ್ಯ ದೇಶದಲ್ಲಿ ಬುರ್ಖಾ ನಿಷೇಧಿಸಬೇಕು ಎಂದ ರಿಷಿ ಕುಮಾರ ಸ್ವಾಮೀಜಿ

ಶಾಲೆಗಳಲ್ಲಿ ಹಿಜಾಬ್: ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ರಾಜ್ಯ ದೇಶದಲ್ಲಿ ಬುರ್ಖಾ ನಿಷೇಧಿಸಬೇಕು ಎಂದ  ರಿಷಿ ಕುಮಾರ ಸ್ವಾಮೀಜಿ
ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ

ಶ್ರೀರಂಗಪಟ್ಟಣದಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು. ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ. ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ. ಗುಂಪಿನ ಜೊತೆ ಹೋಗುವುದಿಲ್ಲ. ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ ಎಂದು ರಿಷಿ ಕುಮಾರ ಸ್ವಾಮೀಜಿ ಹೇಳಿದ್ದಾರೆ.

TV9kannada Web Team

| Edited By: sadhu srinath

Jan 28, 2022 | 12:16 PM

ಮೈಸೂರು: ಕರ್ನಾಟಕದ ಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ತಲೆಗೆ ಹಿಜಾಬ್ ಧರಿಸುವ (hijab) ವಿಚಾರದ ವಿವಾದ ಇನ್ನೂ ಮುಂದಿರುವಾಗಲೇ ರಾಜ್ಯ ಮತ್ತು ದೇಶದಲ್ಲಿ ಬುರ್ಖಾವನ್ನು (burkha) ನಿಷೇಧಿಸಬೇಕು ಎಂದು ಮೈಸೂರಿನಲ್ಲಿ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ (kali mutt rishikumar swamiji) ಒತ್ತಾಯ ಮಾಡಿದ್ದಾರೆ. ಕೇವಲ ಶಾಲೆಗಳಲ್ಲಿ ಮಾತ್ರ ಬುರ್ಖಾ ನಿಷೇಧ ಮಾಡುವುದಲ್ಲ, ದೇಶ ಮತ್ತು ರಾಜ್ಯದಲ್ಲೂ ತ್ರಿವಳಿ ತಲಾಕ್ ನಿಷೇಧ ಮಾಡಿದಂತೆ ಮಾಡಬೇಕು. ನೀವು ಬುರ್ಖಾ ಧರಿಸಿ ಬಂದರೆ ನಿಮ್ಮ ಗುರುತು ಪತ್ತೆಯಾಗುವುದಿಲ್ಲ. ವಿದ್ಯಾರ್ಥಿನಿಯೇ ಬರುತ್ತಾರೋ, ಅವರ ಅಕ್ಕ ತಂಗಿ ಅಮ್ಮ ಬರುತ್ತಾರೋ ಹೇಗೆ ಗೊತ್ತಾಗುತ್ತದೆ? ಪರೀಕ್ಷೆ ಯಾರು ಬರೆಯುತ್ತಾರೆ ಅನ್ನೋದು ಹೇಗೆ ಗೊತ್ತಾಗುತ್ತದೆ? ಶಾಲೆಯ ಶಿಕ್ಷಕರು ತಂದೆ-ತಾಯಿಯಂತೆ ಇರುತ್ತಾರೆ. ಸಹಪಾಠಿಗಳು ಸಹೋದರರಂತೆ ಇರುತ್ತಾರೆ. ಅವರನ್ನು ಅನುಮಾನಿಸದರೆ ಹೇಗೆ? ಎಂದು ರಿಷಿ ಕುಮಾರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶ್ರೀರಂಗಪಟ್ಟಣದ ಮಸೀದಿ ತೆರವು ಮಾಡಿ, ದೇವಸ್ಥಾನ ಕಟ್ಟಬೇಕು ಹೇಳಿಕೆಗೆ ಈಗಲೂ ಬದ್ದ: ಶ್ರೀರಂಗಪಟ್ಟಣದ (srirangapattana) ಮಸೀದಿ ತೆರವು ಮಾಡಿ, ಆ ಜಾಗದಲ್ಲಿ ಹನುಮ ದೇವಸ್ಥಾನ ಕಟ್ಟಬೇಕು ಎಂಬ ನನ್ನ ಈ ಹಿಂದಿನ ಹೇಳಿಕೆಗೆ ನಾನು ಈಗಲೂ ಬದ್ದ. ಅಲ್ಲಿ ನನ್ನ ಹನುಮನ ದೇವಸ್ಥಾನ ಕಟ್ಟಲೇ ಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಇದೆ ವೇಳೆ ಒತ್ತಾಯ ಮಾಡಿದ್ದಾರೆ. ಇದು ಕೇವಲ ಶ್ರೀರಂಗಪಟ್ಟಣ ಮಾತ್ರವಲ್ಲ. ರಾಜ್ಯದ ಪ್ರತಿ ಹಳ್ಳಿಗೂ ಹೋಗುತ್ತೇನೆ. ನಾನು ಒಬ್ಬನೇ ಹೋಗುತ್ತೇನೆ. ಗುಂಪಿನ ಜೊತೆ ಹೋಗುವುದಿಲ್ಲ. ಲಂಕೆಯನ್ನು ಸುಟ್ಟಿದ್ದು ಒಬ್ಬನೇ ಹನುಮ ಎಂದೂ ಅವರು ಹೇಳಿದ್ದಾರೆ.

ಇನ್ನು, ಆಜಾನ್ ಕೂಗುವ ಲೌಡ್ ಸ್ಪೀಕರ್‌ಗಳನ್ನು ತೆಗೆದು ಹಾಕಬೇಕು. ಈ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದೇನೆ. ‘ಕೈ ಕಡಿಯುತ್ತೇವೆ ಕಾಲು ಕಡಿಯುತ್ತೇನೆ’ ಎಂಬ ನಿಮ್ಮ ಬೆದರಿಕೆಗೆ ಹೆದರುವುದಿಲ್ಲ. ಈ ರೀತಿ ಹೇಳುವುದು ಪ್ರಚೋದನೆಯಾದೀತು. ರಾಜ್ಯ ಸರ್ಕಾರವು ದೇವಸ್ಥಾನ ಒಡೆದು‌ ಮಸೀದಿ ಕಟ್ಟಿರುವುದನ್ನು ಪತ್ತೆ ಹಚ್ಚಬೇಕು. ಈ ರೀತಿಯ ದೇಗುಲಗಳನ್ನು ನಾವು ಪತ್ತೆ ಹಚ್ಚುತ್ತೇವೆ. ಅದಕ್ಕಾಗಿ ಸಮಿತಿ ರಚಿಸಿ ನಮಗೆ ರಕ್ಷಣೆ ಕೊಡಬೇಕು ಎಂದು ರಿಷಿ ಕುಮಾರ ಸ್ವಾಮೀಜಿ ಆಗ್ರಹಿಸಿದರು.

ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಲ್ಲ; ವಸ್ತ್ರಸಂಹಿತೆ ನಿಗದಿ ಬಗ್ಗೆ ಚಿಂಥನ- ಮಂಥನಕ್ಕೆ ಮುಂದಾದ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು: ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಕೆಲ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭಾರಿ ಸದ್ದು ಮಾಡ್ತಿದೆ. ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ತರಗತಿಗಳಲ್ಲಿ ಹಿಜಾಬ್ ಹಾಕ್ಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ಕುಳಿತುಕೊಳ್ಳೋದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಾಲೇಜು ಆಡಳಿತ ಮಂಡಳಿ ಹಿಜಾಬ್ ಹಾಕಲು ವಿರೋಧಿಸ್ತಿದ್ದು, ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಸದ್ಯ ವಸ್ತ್ರ ಸಂಹಿತೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆ ಪದವಿಪೂರ್ವ ಕಾಲೇಜುಗಳಲ್ಲಿ ಸಮ ವಸ್ತ್ರ ನಿಗದಿಗೊಳಸಿ ಕಡ್ಡಾಯ ಮಾಡಿಲ್ಲ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಸ್ಥೆಯ ಹಂತದಲ್ಲಿ ಶೈಕ್ಷಣಿಕ ಏಕತೆ, ಸದ್ದುದೇಶದಿಂದ ವಸ್ತ್ರ ಸಂಹಿತೆ ನಿಗದಿಮಾಡಿಕೊಂಡಿವೆ. ಅನೇಕ ವರ್ಷಗಳಿಂದ ಕೆಲವು ಕಾಲೇಜುಗಳು ಅನುಷ್ಠಾನ ಮಾಡಿಕೊಂಡು ಬಂದಿವೆ. ಆದ್ರೆ ಉಡಪಿಯ ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ವಸ್ತ್ರ ತೊಡಲು ಅವಕಾಶಕ್ಕೆ ಒತ್ತಾಯ ಮಾಡ್ತೀದ್ದಾರೆ. ವಿದ್ಯಾರ್ಥಿಗಳ ಒತ್ತಡ ಕಾಲೇಜಿನಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ.

Also Read:

ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆಗೆ ಈಗಲೂ ಬದ್ದ-ರಿಷಿಕುಮಾರ್ ಸ್ವಾಮಿ: ಕಾಳಿ ಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ

Follow us on

Related Stories

Most Read Stories

Click on your DTH Provider to Add TV9 Kannada