ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆಗೆ ಈಗಲೂ ಬದ್ದ-ರಿಷಿಕುಮಾರ್ ಸ್ವಾಮಿ: ಕಾಳಿ ಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ

ಶ್ರೀರಂಗಪಟ್ಟಣ ಮಸೀದಿ ಕೆಡವಬೇಕೆಂಬ ಹೇಳಿಕೆಗೆ ಈಗಲೂ ಬದ್ದ-ರಿಷಿಕುಮಾರ್ ಸ್ವಾಮಿ: ಕಾಳಿ ಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ
ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ

Srirangapatna Masjid: ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರಿಷಿ ಕುಮಾರ್ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗ್ತಿದ್ದಾರೆ.

TV9kannada Web Team

| Edited By: sadhu srinath

Jan 18, 2022 | 1:56 PM

ಮಂಡ್ಯ: ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ (Srirangapatna Masjid) ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ಪೊಲೀಸರು (chikkamagalur police) ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಿಷಿ ಕುಮಾರ್ ಸ್ವಾಮೀಜಿ ಮಸೀದಿ ಮುಂದೆ ನಿಂತು ವಿಡಿಯೋ ಮಾಡಿ ಹಿಂದೂಗಳಿಗೆ ಕರೆ ನೀಡಿದ್ದರು. ಶ್ರೀರಂಗಪಟ್ಟಣದ ದೇವಾಲಯವನ್ನು ಕೆಡವಿ ಮಸೀದಿ ಮಾಡಿದ್ದಾರೆ. ಇದು ಮೊದಲು ದೇವಾಲಯವಿತ್ತು. ಇದನ್ನು ಕೆಡವಿದ್ದಾರೆ ಅಂತಾ ಆರೋಪಿಸಿ, ಇದನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕೆಂದು ರಿಷಿ ಕುಮಾರ್ ಸ್ವಾಮೀಜಿ (Kali Mutt Rishi Kumar Swami) ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.

ಹಿಂದೂಗಳು ಅತಿ ಬೇಗ ಜಾಗೃತರಾಗಿ ಹೊಡೆಯಬೇಕಾದ ಮಸೀದಿಯಲ್ಲಿ ಇದೂ ಒಂದು ಎಂದು ವಿಡಿಯೋ ಮಾಡಿದ್ದರು. ಇಂದು ಬೆಳಿಗನ ಜಾವ 4-30ಕ್ಕೆ ಚಿಕ್ಕಮಗಳೂರು ಮಠದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರಿಷಿ ಕುಮಾರ್ ಸ್ವಾಮೀಜಿಯನ್ನು ಪೊಲೀಸರು ಶ್ರೀರಂಗಪಟ್ಟಣ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗ್ತಿದ್ದಾರೆ.

ನನ್ನ ಹೇಳಿಕೆಗೆ ಈಗಲೂ ನಾನು ಬದ್ದ- ಮಾಧ್ಯಮಗಳ ಮುಂದೆ ರಿಷಿಕುಮಾರ್ ಸ್ವಾಮೀಜಿ ಹೇಳಿಕೆ ಶ್ರೀರಂಗಪಟ್ಟಣ: ವಿವಾದಾತ್ಮಕ ಹೇಳಿಕೆ ವಿಚಾರವಾಗಿ ರಿಷಿಕುಮಾರ್ ಸ್ವಾಮೀಜಿಯನ್ನು ಬೆಳಗ್ಗೆ ವಶಕ್ಕೆ ಪಡೆದಿದ್ದ ಪೊಲೀಸರ ಶ್ರೀರಂಗಪಟ್ಟಣ ಠಾಣೆಗೆ ಕರೆತಂದಿದ್ದಾರೆ. ಪೊಲೀಸ್ ಠಾಣೆಗೆ ಕರೆತರುವ ಮುನ್ನ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ರಿಷಿಕುಮಾರ್ ಆರೋಗ್ಯ ತಪಾಸಣೆ ಮಾಡಲಾಗಿದೆ.

ಆರೋಗ್ಯ ತಪಾಸಣೆ ವೇಳೆ‌ ಮಾಧ್ಯಮಗಳ ಮುಂದೆ‌ ಮಾತನಾಡಿದ ರಿಷಿಕುಮಾರ್ ಸ್ವಾಮೀಜಿ ನನ್ನ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದಂತೆ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ. ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ ಎಂದು ರಿಷಿಕುಮಾರ್ ವರ್ಣಿಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಪೊಲೀಸರು ರಿಷಿಕುಮಾರ್​ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಕಾಳಿಸ್ವಾಮಿ ಬಿಡುಗಡೆಗೆ ಜಾಮೀನು ಅರ್ಜಿ, ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ: ವಕೀಲ ವಿವಾದಾತ್ಮಕ ಹೇಳಿಕೆ ಸಲುವಾಗಿ ಬಂಧನಕ್ಕೀಡಾಗಿರುವ ರಿಷಿಕುಮಾರ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ವಕೀಲ ಬಾಲರಾಜ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಬಾಲರಾಜ್ ಅವರು ರಿಷಿಕುಮಾರ ಸ್ವಾಮೀಜಿ ಪರ ವಕೀಲ.

ರಿಷಿಕುಮಾರ ಸ್ವಾಮೀಜಿಯವರ ಹೇಳಿಕೆ ವಿವಾದಾತ್ಮಕ ಅಲ್ಲ. ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸಮನ್ವಿ ಅಸ್ತಿ ವಿಸರ್ಜನೆಗೆ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದಿದ್ರು. ವಾಪಾಸ್ ತೆರಳುವ ವೇಳೆ ಮಸೀದಿಯಲ್ಲಿನ ದೇವಾಲಯದ ಕುರುಹು ಕಂಡು ಮನಸ್ಸಿನ ನೋವು ಹೊರಹಾಕಿದ್ದಾರೆ. ಕಾನೂನು ಹೋರಾಟದ ಮೂಲಕ ಮಸೀದಿ ಕೆಡವಿ ಮಂದಿರ ಕಟ್ಟುತ್ತೇವೆ ಎಂಬುದು ಅವರ ಹೇಳಿಕೆಯ ಭಾವ. ಒಡೆಯುವುದು ಎಂದರೆ ಕಾನೂನಾತ್ಮಕವಾಗಿ ಒಡೆಯುವುದು ಎಂಬುದು ಅವರ ಭಾವನೆ ಎಂದು ರಿಷಿಕುಮಾರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆಯನ್ನು ರಿಷಿಕುಮಾರ ಸ್ವಾಮೀಜಿ ಪರ ವಕೀಲ ಬಾಲರಾಜ್ ಸಮರ್ಥಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿನಿಮಾ ಸ್ಟೈಲ್‌ನಲ್ಲಿ ಮೊಬೈಲ್ ಕಳ್ಳರನ್ನು ಚೇಸ್ ಮಾಡಿ ಹಿಡಿದ ಕಾನ್ಸಟೇಬಲ್ ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿನಿಮಾ ಸ್ಟೈಲ್‌ನಲ್ಲಿ ಇಬ್ಬರು ಮೊಬೈಲ್ ಕಳ್ಳರನ್ನು ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ಕಾನ್ಸಟೇಬಲ್ ಲಿಂಗರಾಜು ಕಳ್ಳರನ್ನ ಹಿಡಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಕಳ್ಳರ ಜೋಡಿ ಉದ್ಯಾನವನದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಕಾನ್ಸಟೇಬಲ್ ಲಿಂಗರಾಜು ಅವರು ಕೂಗಾಟ ಕೇಳಿ ಕಾರ್ಯೋನ್ಮುಖರಾದರು. ಇಬ್ಬರೂ ಕಳ್ಳರನ್ನು ಲಿಂಗರಾಜು ಚೇಸ್ ಮಾಡಿ, ಹಿಡಿದಿದ್ದಾರೆ. ಕಳ್ಳರು ಮೈಸೂರಿನ ಉದ್ಬೂರು ಗ್ರಾಮದ ಯುವಕರು ಎಂದು ತಿಳಿದುಬಂದಿದೆ.

Most Wanted Peddler ಗಳಿಂದ ಗಾಂಜಾ ತರಿಸಿ ಮಾರಾಟ: ಸಿಎಂ ಬೊಮ್ಮಾಯಿ ಮನೆ ಭದ್ರತೆಯಲ್ಲಿದ್ದ ಇಬ್ಬರು ಪೊಲೀಸ್ರು ಅರೆಸ್ಟ್! ಬೆಂಗಳೂರು: ಮೋಸ್ಟ್ ವಾಂಟೆಡ್ ಪೆಡ್ಲರ್​ಗಳಿಂದ ಗಾಂಜಾ ತರಿಸಿಕೊಂಡು, ಮಾರಾಟ ಮಾಡ್ತಿದ್ದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಹಾಗೆ ಇವರಿಬ್ಬರೂ ಕಾನ್ಸ್​ಟೇಬಲ್​ಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಭದ್ರತಾ ಕಾರ್ಯದಲ್ಲಿದ್ದರು. ಶಿವಕುಮಾರ್ ಹಾಗೂ ಸಂತೋಷ್ ಗಾಂಜಾ ತರಿಸಿ ಮಾರಾಟ ಮಾಡ್ತಿದ್ದ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​ಗಳು. ಇಬ್ಬರೂ ಕಾನ್ಸ್​ಟೇಬಲ್​ಗಳು ಕೋರಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ.

ಈ ಶಿವಕುಮಾರ್ ಮತ್ತು ಸಂತೋಷ್ ಕಾನ್ಸ್​ಟೇಬಲ್ ಜೋಡಿಯು ಮೋಸ್ಟ್ ವಾಂಟೆಡ್ ಪೆಡ್ಲರ್ ಬಳಿ ಗಾಂಜಾ ಖರೀದಿಸಿ, ಮಾರಾಟಕ್ಕೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿಗಳ ಮನೆ ಇರುವ ಆರ್. ಟಿ. ನಗರದ 80 ಅಡಿ ರಸ್ತೆ ಬಳಿ ಡೀಲ್ ಮಾಡುತ್ತಿದ್ದರು. ಸಿಎಂ ಮನೆಯ ಬಳಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಸದ್ಯ ಆರ್.ಟಿ. ನಗರ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಇದನ್ನು ಓದಿ: ಉಡುಪಿಯ ಕೃಷ್ಣ ಮಠದ ಪರ್ಯಾಯ ಮಹೋತ್ಸವ; ದ್ವೈವಾರ್ಷಿಕ ಪೂಜಾಧಿಕಾರ ವಹಿಸಿಕೊಂಡ ಕೃಷ್ಣಾಪುರ ಶ್ರೀ

Follow us on

Related Stories

Most Read Stories

Click on your DTH Provider to Add TV9 Kannada