Satyabhama Chandrashekhar Kambar death: ಸಾಹಿತಿ ಚಂದ್ರಶೇಖರ ಕಂಬಾರ್ ಪತ್ನಿ ಸತ್ಯಭಾಮ ಕಂಬಾರ್ ವಿಧಿವಶ
ಸತ್ಯಭಾಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜನವರಿ 3 ರಂದು ಸತ್ಯಭಾಮ ಆಸ್ಪತ್ರೆ ಗೆ ದಾಖಲಾಗಿದ್ದರು.
ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ್ ಪತ್ನಿ ಸತ್ಯಭಾಮ ಕಂಬಾರ್ (76) ಇಂದು ಬೆಳಗ್ಗೆ ವಿಧಿವಶರಾದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸತ್ಯಭಾಮ ಕಂಬಾರ್ ಕೊನೆಯುಸಿರೆಳೆದಿದ್ದಾರೆ. ಸತ್ಯಭಾಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜನವರಿ 3 ರಂದು ಸತ್ಯಭಾಮ ಆಸ್ಪತ್ರೆ ಗೆ ದಾಖಲಾಗಿದ್ದರು. ಬೆಳಗ್ಗೆ 9-30 ಕ್ಕೆ ಕತ್ರಿಗುಪ್ಪೆಯ ಸಿರಿ ಸಂಪಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸತ್ಯಭಾಮ ಚಂದ್ರಶೇಖರ್ ಕಂಬಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ: ಸತ್ಯಭಾಮ ಚಂದ್ರಶೇಖರ್ ಕಂಬಾರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಧರ್ಮ ಪತ್ನಿ ಶ್ರೀಮತಿ ಸತ್ಯಭಾಮ ಕಂಬಾರ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಸಿಎಂ ಬೊಮ್ಮಾಯಿ ಕಂಬನಿ ಮಿಡಿಸಿದ್ದಾರೆ.
ಶಿಕ್ಷಕ ಶಾಲೆಯಿಂದ ವರ್ಗಾವಣೆ; ಸರ್ ಬಿಟ್ ಹೋಗ್ಬೇಡಿ, ಪ್ಲೀಸ್ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು ರಾಯಚೂರು: ನೆಚ್ಚಿನ ಗುರು ವರ್ಗಾವಣೆಯಾಗಿದ್ದಕ್ಕೆ ಶಾಲಾ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 14 ವರ್ಷದ ಶಿಕ್ಷಕನ ಸೇವೆಗೆ ವಿದ್ಯಾರ್ಥಿಗಳು ಮಿಡಿದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕನ್ನಡ ಶಿಕ್ಷಕ ತಿಪ್ಪಣ್ಣ ತಾವರೆಗೆರಾ ಎಂಬುವವರು ವರ್ಗಾವಣೆಯಾಗಿದ್ದಾರೆ.
ಕನ್ನಡ ಬೋಧನೆ ಜೊತೆಗೆ ವಿದ್ಯಾರ್ಥಿಗಳ ಸ್ನೇಹ ಜೀವಿಯಾಗಿದ್ದ ಶಿಕ್ಷಕ ತಿಪ್ಪಣ್ಣ ವರ್ಗಾವಣೆ ಆಗಿರುವುದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಿಕ್ಷಕನ ಕೈಕಾಲು ಹಿಡಿದು ಸರ್ ಬಿಟ್ ಹೋಗ್ಬೇಡಿ, ಸರ್ ಪ್ಲೀಸ್ ಅಂತ ಕಣ್ಣೀರು ಹಾಕಿದ್ದಾರೆ. ವಿದ್ಯಾರ್ಥಿಗಳ ದುಖಃ ಸಹಿಸಲಾಗದೆ ಶಿಕ್ಷಕನೂ ಕಣ್ಣೀರಿಟ್ಟಿದ್ದಾರೆ. ಶಿಕ್ಷಕ ತಿಪ್ಪಣ್ಣ ಗ್ರಾಮದ ಲೆಕ್ಕಪತ್ರಗಳ ಉಸ್ತುವಾರಿಯೂ ಆಗಿದ್ದರು. ಗ್ರಾಮಕ್ಕೆ ಹಿರಿಯನಂತಿದ್ದ ತಿಪ್ಪಣ್ಣ ವರ್ಗಾವಣೆಯಿಂದ ಗ್ರಾಮಸ್ಥರೂ ಬೇಸರಗೊಂಡಿದ್ದಾರೆ. ಬಯ್ಯಾಪುರ ಗ್ರಾಮದಿಂದ ಕುಷ್ಟಗಿ ತಾಲೂಕಿನ ತಾವರಗೆರಾದ ಬಾಲಕಿಯರ ಶಾಲೆಗೆ ವರ್ಗಾವಣೆ ಆಗಿದ್ದಾರೆ.
Also Read: ಮದುವೆಯ ಬಳಿಕವೂ ಸಂಬಂಧಿಕನ ಜೊತೆ ಪ್ರೀತಿ; ಬಾಡಿಗೆ ಮನೆಯಲ್ಲಿ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಮಹಿಳೆ
Published On - 9:21 am, Tue, 18 January 22