ಸದ್ಯದಲ್ಲೇ ಸಿಎಂ ಬೊಮ್ಮಾಯಿ ಕಚೇರಿ ಎದುರೇ ಶಿವಕುಮಾರ್-ಸಿದ್ದರಾಮಯ್ಯ ಪ್ರತಿಭಟನೆ! ಯಾಕೆ?
ಸಿದ್ದರಾಮಯ್ಯ ಮೈಸೂರಿನಿಂದ ವಾಪಸ್ ಆದ ಬಳಿಕ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಇಬ್ಬರೇ ನಾಯಕರು ಕೋವಿಡ್ ನಿಯಮ ಪಾಲಿಸಿ ಅಂತರ ಕಾಪಾಡಿಕೊಂಡು ಸಿಎಂ ಕಚೇರಿಯ ಮುಂಭಾಗದಲ್ಲೇ ಕುಳಿತುಕೊಂಡು ಧರಣಿ ನಡೆಸಲು ನಿರ್ಧಾರ ಮಾಡಿದ್ದಾರೆ.
ಬೆಂಗಳೂರು: ಕೊರೊನಾ ನಿಯಮ ಉಲ್ಲಂಘಿಸಿದರೂ ಬಿಜೆಪಿ ನಾಯಕರ ಮೇಲೆ ಕೇಸ್ ದಾಖಲಿಸದ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಅಥವಾ ವಿಧಾನ ಸೌಧದ ಸಿಎಂ ಕಚೇರಿ ಮುಂಭಾಗ ಇಬ್ಬರೇ ನಾಯಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಕೊರೊನಾ ನಿಯಮ ಉಲ್ಲಂಘನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನೇ ಟಾರ್ಗೇಟ್ ಮಾಡಿ ಕೇಸ್ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು ಬಿಜೆಪಿಯ ಜಗಳೂರು ರಾಮಚಂದ್ರ, ರೇಣುಕಾಚಾರ್ಯ, ಎಸ್.ಆರ್. ವಿಶ್ವನಾಥ್, ಜನಾರ್ಧನ ರೆಡ್ಡಿ, ಶ್ರೀರಾಮುಲು, ಪದೇ ಪದೇ ನಿಯಮ ಉಲ್ಲಂಘಿಸಿದ್ದರೂ ಯಾವುದೇ ಕೇಸ್ ದಾಖಲಿಸಿಲ್ಲ. ಇದನ್ನ ಖಂಡಿಸಿ ಸಿಎಂ ಕಚೇರಿ ಮುಂಭಾಗದಲ್ಲೇ ಪ್ರತಿಭಟನೆ ನಡೆಸಲು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ಬಗ್ಗೆ ನಿನ್ನೆಯಷ್ಟೇ ಸಿದ್ದರಾಮಯ್ಯ ಜೊತೆ ದೂರವಾಣಿ ಮೂಲಕ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮೈಸೂರಿನಿಂದ ವಾಪಸ್ ಆದ ಬಳಿಕ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಇಬ್ಬರೇ ನಾಯಕರು ಕೋವಿಡ್ ನಿಯಮ ಪಾಲಿಸಿ ಅಂತರ ಕಾಪಾಡಿಕೊಂಡು ಸಿಎಂ ಕಚೇರಿಯ ಮುಂಭಾಗದಲ್ಲೇ ಕುಳಿತುಕೊಂಡು ಧರಣಿ ನಡೆಸಲು ನಿರ್ಧಾರ ಮಾಡಿದ್ದಾರೆ. ಬಿಜೆಪಿ ನಾಯಕರ ಮೇಲೆ ಕೇಸ್ ದಾಖಲಿಸದೇ ಇರುವುದನ್ನ ವಿರೋಧಿಸಿ ಮುಖ್ಯಕಾರ್ಯದರ್ಶಿಗೂ ಪತ್ರ ಬರೆಯಲು ಡಿಕೆ ಶಿವಕುಮಾರ್ ಚಿಂತಿಸಿದ್ದು ಅಧಿಕಾರಿಗಳ ವರ್ತನೆಯನ್ನೇ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಡಿಕೆ ಶಿವಕುಮಾರ್ ಕಾನೂನು ತಜ್ಙರ ಜೊತೆ ಕೂಡ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ವೀಕೆಂಡ್ ಕರ್ಫ್ಯೂಗೆ ವಿರೋಧ: ಅರಮನೆ ಮೈದಾನದ ವೈಟ್ ಪೆಟಲ್ಸ್ನಲ್ಲಿ ಸಾಲುಸಾಲು ಸಭೆ! ವಿರೋಧಕ್ಕೆ ಕಾರಣವೇನು? ವಾಸ್ತವ ಇಲ್ಲಿದೆ
Published On - 8:25 am, Tue, 18 January 22