ಶ್ರೀನಗರದ ಬಾಡಿಗೆ ಮನೆಯಲ್ಲಿದ್ದ ಶಿಕ್ಷಕಿಗೆ ಮನೆ ಮಾಲೀಕ ವಿಚಿತ್ರ ಗಿಫ್ಟ್ ಕೊಟ್ಟು ತಗಲಾಕಿಕೊಂಡ! ಎಫ್ಐಆರ್ ದಾಖಲಾಯ್ತು
ಬೆಂಗಳೂರಿನ ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶಿಕ್ಷಕಿಗೆ ಮನೆ ಮಾಲೀಕ ಪದ್ಮನಾಭ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಶಿಕ್ಷಕಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು: ನಗರದ ಬಾಡಿಗೆ ಮನೆಯ ಮಾಲೀಕನೊಬ್ಬನ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಿರುವ ಶಿಕ್ಷಕಿಗೆ ಮಾಲೀಕ ಕಿರುಕುಳ ನೀಡುತ್ತಿದ್ದಾಗಿ ಶಿಕ್ಷಕಿ ಆರೋಪಿಸಿದ್ದಾರೆ.
ಬೆಂಗಳೂರಿನ ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶಿಕ್ಷಕಿಗೆ ಮನೆ ಮಾಲೀಕ ಪದ್ಮನಾಭ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಶಿಕ್ಷಕಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕಿಯ ಹುಟ್ಟುಹಬ್ಬಕ್ಕೆ ಮನೆ ಮಾಲೀಕ ಒಳ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದನಂತೆ. ಹೊರಗೆ ಸುತ್ತಾಡಲು ಆಹ್ವಾನಿಸಿ ಕ್ವಾಟ್ಲೆ ಕೊಟ್ಟಿದ್ದನಂತೆ. ಫೋನ್ ಮಾಡಿ ಬೇರೆ ಅರ್ಥ ಬರುವಂತೆ ಮಾತನಾಡಿದ್ದಾನೆ. ಅಲ್ಲದೆ ರಾತ್ರೋ ರಾತ್ರಿ ಬಾಡಿಗೆಮನೆ ಕಾಂಪೌಂಡ್ ಗೇಟ್ ಹಾರಿ ಮನೆ ಡೋರ್ ಲಾಕ್ ಮಾಡಿ ಕಿರುಕುಳ ನೀಡಿದ್ದಾಗಿ ಶಿಕ್ಷಕಿ ಆರೋಪಿಸಿದ್ದಾರೆ.
ಸದ್ಯ ಮನೆ ಮಾಲೀಕ ಪದ್ಮನಾಭ ದುರ್ವರ್ತನೆಗೆ ಶಿಕ್ಷಕಿ ಅಸಮಾಧಾನಗೊಂಡಿದ್ದಕ್ಕೆ ಮನೆ ಖಾಲಿ ಮಾಡುವಂತೆ ಮೆಂಟಲಿ ಟಾರ್ಚರ್ ಕೊಟ್ಟಿದ್ದಾನಂತೆ. ಮನೆ ಮಾಲೀಕ ಪದ್ಮನಾಭ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಕಾಣಿಸಿಕೊಂಡ ಬಸವ ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಬಸವ ರೂಪಿ ಕಾಣಿಸಿಕೊಂಡಿದ್ದು, ತೆಂಗಿನಕಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಮೈಸೂರಿನ ಹಿನಕಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನಕಾಯಿಗೆ ಭಾವ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಹಿನಕಲ್‌ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವ ಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ. ಸುಲಿದ ತೆಂಗಿನಕಾಯಿ ಮೊಳಕೆ ಒಡೆದು ಬಸವನ ಮೂತಿಯ ರೂಪ ಹೊರಬಂದಿದೆ. ಅದು ಬಸವನ ರೀತಿಯ ಮುಖ ಹಾಗೂ ಕೊಂಬುಗಳ ರೂಪ ಪಡೆದುಕೊಂಡಿದೆ. ಅದನ್ನು ಜನ ಬಸವ ದೇವರ ಸ್ವರೂಪಿ ಎಂದು ಪೂಜೆ ಮಾಡಿದ್ದಾರೆ.
ಇದನ್ನೂ ಓದಿ: ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಕಾಣಿಸಿಕೊಂಡ ಬಸವ, ತೆಂಗಿನಕಾಯಿಗೆ ವಿಶೇಷ ಪೂಜೆ
Published On - 7:28 am, Tue, 18 January 22