ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಕಾಣಿಸಿಕೊಂಡ ಬಸವ! ತೆಂಗಿನಕಾಯಿಗೆ ವಿಶೇಷ ಪೂಜೆ
ಹಿನಕಲ್‌ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವ ಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಬಸವ ರೂಪಿ ಕಾಣಿಸಿಕೊಂಡಿದ್ದು, ತೆಂಗಿನಕಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಮೈಸೂರಿನ ಹಿನಕಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನಕಾಯಿಗೆ ಭಾವ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಹಿನಕಲ್‌ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವ ಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ. ಸುಲಿದ ತೆಂಗಿನಕಾಯಿ ಮೊಳಕೆ ಒಡೆದು ಬಸವನ ಮೂತಿಯ ರೂಪ ಹೊರಬಂದಿದೆ. ಅದು ಬಸವನ ರೀತಿಯ ಮುಖ ಹಾಗೂ ಕೊಂಬುಗಳ ರೂಪ ಪಡೆದುಕೊಂಡಿದೆ. ಅದನ್ನು ಜನ ಬಸವ ದೇವರ ಸ್ವರೂಪಿ ಎಂದು ಪೂಜೆ ಮಾಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿನಿಮಾ ಸ್ಟೈಲ್‌ನಲ್ಲಿ ಮೊಬೈಲ್ ಕಳ್ಳರನ್ನು ಚೇಸ್ ಮಾಡಿ ಹಿಡಿದ ಕಾನ್ಸಟೇಬಲ್ ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿನಿಮಾ ಸ್ಟೈಲ್‌ನಲ್ಲಿ ಇಬ್ಬರು ಮೊಬೈಲ್ ಕಳ್ಳರನ್ನು ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ಕಾನ್ಸಟೇಬಲ್ ಲಿಂಗರಾಜು ಕಳ್ಳರನ್ನ ಹಿಡಿದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಕಳ್ಳರ ಜೋಡಿ ಉದ್ಯಾನವನದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಕಾನ್ಸಟೇಬಲ್ ಲಿಂಗರಾಜು ಅವರು ಕೂಗಾಟ ಕೇಳಿ ಕಾರ್ಯೋನ್ಮುಖರಾದರು. ಇಬ್ಬರೂ ಕಳ್ಳರನ್ನು ಲಿಂಗರಾಜು ಚೇಸ್ ಮಾಡಿ, ಹಿಡಿದಿದ್ದಾರೆ. ಕಳ್ಳರು ಮೈಸೂರಿನ ಉದ್ಬೂರು ಗ್ರಾಮದ ಯುವಕರು ಎಂದು ತಿಳಿದುಬಂದಿದೆ.
ಸಾಹಿತಿ ಚಂದ್ರಶೇಖರ ಕಂಬಾರ್ ಪತ್ನಿ ಸತ್ಯಭಾಮ ವಿಧಿವಶ ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ್ ಪತ್ನಿ ಸತ್ಯಭಾಮ ಕಂಬಾರ್ (76) ಇಂದು ಬೆಳಗ್ಗೆ ವಿಧಿವಶರಾದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸತ್ಯಭಾಮ ಕಂಬಾರ್ ಕೊನೆಯುಸಿರೆಳೆದಿದ್ದಾರೆ. ಸತ್ಯಭಾಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜನವರಿ 3 ರಂದು ಸತ್ಯಭಾಮ ಆಸ್ಪತ್ರೆ ಗೆ ದಾಖಲಾಗಿದ್ದರು. ಬೆಳಗ್ಗೆ 9-30 ಕ್ಕೆ ಕತ್ರಿಗುಪ್ಪೆಯ ಸಿರಿ ಸಂಪಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Coconut Basava: ಸುಲಿದ ತೆಂಗಿನಕಾಯಿಯಲ್ಲಿ ಮೊಳಕೆ ಹೊಡೆದ ಬಸವನ ಮೂರ್ತಿ | Tv9Kannada
Also Read:
ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬುದು ಕಟ್ಟುಪಾಡು! ಇದು ಎಷ್ಟು ಸರಿ, ಇದಕ್ಕೆ ಕಾರಣವೇನು?
Zodiac Signs: ಈ 4 ರಾಶಿಯ ಜನರು ತಮ್ಮ ಪರಿಶ್ರಮ ಮತ್ತು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ
Published On - 7:18 am, Tue, 18 January 22