Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ ನಾಗಮ್ಮ, ಅಂಗಾಗ ದಾನದ ಮೂಲಕ 5 ಜನರ ಬಾಳಿಗೆ ಬೆಳಕಾದ್ರು

Organ Donation: ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ ನಾಗಮ್ಮ, ಅಂಗಾಗ ದಾನದ ಮೂಲಕ 5 ಜನರ ಬಾಳಿಗೆ ಬೆಳಕಾದ್ರು
ನಾಗಮ್ಮ

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ನಾಗಮ್ಮ(45)ರಿಗೆ ಬ್ರೈನ್ ಟ್ಯೂಮರ್ ಆಗಿತ್ತು. ಇವರನ್ನು ಜನವರಿ 13ರಂದು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅವರ ಸ್ಥಿತಿ ಮತ್ತಷ್ಟು ಗಂಭೀರಗೊಂಡ ಪರಿಣಾಮ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.

TV9kannada Web Team

| Edited By: Ayesha Banu

Jan 17, 2022 | 11:50 AM

ಮೈಸೂರು: ಮಳವಳ್ಳಿಯ ನಾಗಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬ್ರೈನ್ ಟ್ಯೂಮರ್ ಆಗಿದ್ದ ನಾಗಮ್ಮ ತಮ್ಮ ಅಂಗಾಂಗ ದಾನದ ಮೂಲಕ 5 ಜನರ ಬಾಳಿಗೆ ಬೆಳಕಾಗಿದ್ದಾರೆ. ಪತಿ, ಮಕ್ಕಳ ಒಪ್ಪಿಗೆ ಮೇರೆಗೆ ನಾಗಮ್ಮ ಅಂಗಾಂಗ ದಾನ ಮಾಡಲಾಗಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ ನಾಗಮ್ಮ(45)ರಿಗೆ ಬ್ರೈನ್ ಟ್ಯೂಮರ್ ಆಗಿತ್ತು. ಇವರನ್ನು ಜನವರಿ 13ರಂದು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅವರ ಸ್ಥಿತಿ ಮತ್ತಷ್ಟು ಗಂಭೀರಗೊಂಡ ಪರಿಣಾಮ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಬಳಿಕ ಮೈಸೂರಿನ ಅಪೋಲೊದಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಗಮ್ಮರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ ಕಾರಣ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದರು.

ಇನ್ನು ನಾಗಮ್ಮರ ಅಂಗಾಂಗ ದಾನದಿಂದ ಬೇರೆಯವರಿಗೆ ಅನುಕೂಲವಾಗಲಿದೆ ಎಂದು ಕುಟುಂಬಸ್ಥರಿಗೆ ವಿವರಿಸಿದ್ದು ನಾಗಮ್ಮ ಪತಿ ಮತ್ತು ಮಕ್ಕಳು ವೈದ್ಯರ ಮಾತಿಗೆ ಒಪ್ಪಿ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಸದ್ಯ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ನಿಯಮದಂತೆ ವೈದ್ಯರು ಮೆದುಳು, ಯಕೃತ್, ಹೃದಯ ಕವಾಟುಗಳು, ಶಾರ್ನಿಯಾ ಅಂಗಾಂಗಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: International Beggar: ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಜರಿದ ಜಮಾಯತ್

Follow us on

Related Stories

Most Read Stories

Click on your DTH Provider to Add TV9 Kannada