ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬುದು ಕಟ್ಟುಪಾಡು! ಇದು ಎಷ್ಟು ಸರಿ, ಇದಕ್ಕೆ ಕಾರಣವೇನು?
Garuda Purana: ಕ್ರಮವಾಗಿ ಮನುಷ್ಯನ ಜನನ, ಜೀವನ, ಮರಣ ಮತ್ತು ಮರಣದ ನಂತರದ ಬಗೆಗಿನ ಹಲವಾರು ಮಾಹಿತಿಗಳನ್ನು ಕೊಡುವ ಏಕೈಕ ಹೊತ್ತಿಗೆಯೇ ಗರುಡ ಪುರಾಣ. ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಈ ಕಟ್ಟುಪಾಡು ಬರಲು ಕಾರಣ ಗರುಡ ಪುರಾಣದ ಬಗ್ಗೆ ಇರುವ ಅಲ್ಪಜ್ಞಾನ.
Garuda Purana: ಸಂಪೂರ್ಣ ಗರುಡ ಪುರಾಣದಲ್ಲಿ ಸರಿ ಸುಮಾರು 19 ಸಾವಿರ ಶ್ಲೋಕಗಳಿದ್ದು, ಅದರಲ್ಲಿ ಜ್ಞಾನಕಾಂಡ, ಧರ್ಮಕಾಂಡ, ಹಾಗು ಕರ್ಮಕಾಂಡ (ಪ್ರೇತಕಾಂಡ) ಎಂಬ 3 ಖಂಡಗಳಿವೆ. ಅವು ಕ್ರಮವಾಗಿ ವಿಶ್ವದ ಸೃಷ್ಠಿ, ಸ್ಥಿತಿ ಹಾಗೂ ಲಯದ ಬಗೆಗಿನ ವಿವರಗಳನ್ನು ತಿಳಿಸುತ್ತದೆ. ಕ್ರಮವಾಗಿ ಮನುಷ್ಯನ ಜನನ, ಜೀವನ, ಮರಣ (Death) ಮತ್ತು ಮರಣದ ನಂತರದ ಬಗೆಗಿನ ಹಲವಾರು ಮಾಹಿತಿಗಳನ್ನು ಕೊಡುವ ಏಕೈಕ ಹೊತ್ತಿಗೆಯೇ ಗರುಡ ಪುರಾಣ. ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬ ಹಿರಿಯರ ಈ ಕಟ್ಟುಪಾಡು ಬರಲು ಕಾರಣ ಗರುಡ ಪುರಾಣದ ಬಗ್ಗೆ ಇರುವ ಅಲ್ಪಜ್ಞಾನ. ಏಕೆಂದರೆ ಗರುಡ ಪುರಾಣ ಎಂದೊಡನೆ ನೆನಪಿಗೆ ಬರುವುದು ಪ್ರೇತಕಾಂಡವೆಂಬ ಅಧ್ಯಾಯ ಮತ್ತು ಅದರಲ್ಲಿ ಬರುವ ಸಾವಿನ ನಂತರದ ಬಗ್ಗೆ ಇರುವ ವಿಚಾರಗಳು. ಆದರೆ ಪ್ರೇತಕಾಂಡವು ವಾಸ್ತವವಾಗಿ ಗರುಡ ಪುರಾಣವೆಂಬ ಮಹಾನ್ ಸಮುದ್ರದಲ್ಲಿ ಒಂದು ಸಣ್ಣ ಚೊಂಬಿನ ನೀರಿನಷ್ಟು ಮಾತ್ರವೇ ಹೊರತು, ಸಂಪೂರ್ಣವಾಗಿ ಅದೇ ಅಲ್ಲ (Hinduism).
ಜನರಿಗೆ ಹೆಚ್ಚು ತಿಳಿದಿರುವುದು ಇಲ್ಲಿನ ಪ್ರೇತಕಾಂಡ ಮತ್ತು ಅದರಲ್ಲಿ ಬರುವ ಕೆಲವು ಸಾವಿನ ನಂತರದ ವರ್ಣನೆಗಳು. ಹಾಗಾಗಿ ಇದನ್ನು ಸಣ್ಣ ವಯಸ್ಸಿನ ವ್ಯಕ್ತಿಗಳು ಕೇಳಿದರೆ ವೈರಾಗ್ಯ ಉಂಟಾಗಿ, ವಂಶಾಭಿವೃದ್ಧಿಗೆ ತೊಂದರೆ ಆಗುವುದೆಂದು ನಮ್ಮ ಹಿರಿಯರು ಈ ಕಟ್ಟುಪಾಡನ್ನು ಹೇರಿದರೆ ಹೊರತು ಬೇರೆ ಯಾವುದೇ ಕಾರಣಕ್ಕಾಗಿಯೂ ಅಲ್ಲ!
ಸಾಮಾನ್ಯವಾಗಿ ಗರುಡ ಪುರಾಣವನ್ನು ಮನೆಯಲ್ಲಿ ಯಾವುದಾದರೋ ಸಾವು ಸಂಭವಿಸಿದಾಗ ಓದಿಸುತ್ತಿದ್ದರು. ಏಕೆಂದರೆ ಇದು ಮಹತ್ತರವಾದ ಪುರಾಣವಾಗಿದ್ದು ಇದರಲ್ಲಿನ ಪ್ರೇತಕಾಂಡವು ಸ್ಮಶಾನ ವೈರಾಗ್ಯವನ್ನು ತರುವಂತಹದು. ಇದನ್ನು ಸಾವು ಸಂಭವಿಸಿದಾಗ ಓದುವುದರಿಂದ 15 ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಭಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಮಹತ್ತರವಾದುದು ಅಲ್ಲ ಎಂಬ ಅರಿವುಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಹಾಗಾಗಿ ಇದು ಕಾಲಾನಂತರದಲ್ಲಿ ವಾಡಿಕೆಯಾಯಿತೇ ಹೊರತು ಬೇರೆ ಏನೂ ಅಲ್ಲ.
ಗರುಡ ಪುರಾಣದಲ್ಲಿ ಮೃತ್ಯು ಸಂಭವಿಸಿದಾಗ ವ್ಯಕ್ತಿಯಲ್ಲಿನ ಪ್ರಾಣ ಹೇಗೆ ಹೋಗುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತಿಳಿಯ ಹೇಳಲಾಗಿದೆ. ಅದರ ಜೊತೆಗೆ ಮೃತ್ಯು ಸಂಭವಿಸಿದ ನಂತರದ ಸ್ಥಿತಿಗಳ ಬಗ್ಗೆ ಕಾಲಘಟ್ಟಗಳು ಅನುಸಾರ ಮಾರ್ಮಿಕವಾಗಿ ತಿಳಿಸಲಾಗಿದೆ. ಜೀವನಕ್ಕೆ ಯಾವುದೇ ಖಾತ್ರಿ ಇಲ್ಲ. ಅದು ನೀರಿನ ಗುಳ್ಳೆಯಂತೆ. ಯಾವ ಕ್ಷಣ ಬೇಕಾದರೂ ಒಡೆಯಬಹುದು. ಜೀವನದ ಬಲೂನು ಠುಸ್ಸ್ ಅನ್ನಬಹುದು. ಪ್ರಾಣವಾಯುಗೆ ಯಾವುದೇ ಖಾತ್ರಿಯಿಲ್ಲ. ಯಾರಿಗೇ ಆಗಲಿ ಒಂದಲ್ಲ, ಒಂದು ದಿನ ಇಹಲೋಕ ತ್ಯಜಿಸಲೇಬೇಕು. ಪರಲೋಕ ಪ್ರಯಾಣ ಶುರು ಮಾಡಲೇಬೇಕು.
ಸಾವು ಎಂಬುದು ನಿಶ್ಚಿತ, ಖಚಿತ. ಆದರೆ ಸಾವಿಗೆ ಯಾರೂ ತಯಾರಿ ಮಾಡಿಕೊಳ್ಳುವುದಿಲ್ಲ. ಅದು ಬಂದಾಗ ಆಯ್ಕೆಗೆ ಅವಕಾಶ ಇರುವುದೇ ಇಲ್ಲ, ಜಸ್ಟ್ ಅದನ್ನು ಫಾಲೋ ಮಾಡಬೇಕು ಅಷ್ಟೇ. ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳು, ಸುಖ ಸಂತೋಷಗಳು ಇದ್ದರೂ ಅವುಗಳನ್ನು ಬಿಡಲು ಸುತರಾಂ ಮನಸ್ಸು ಇಲ್ಲದೇ ಇದ್ದರೂ… ಜಸ್ಟ್ ಪರಲೋಕ ಯಾತ್ರೆ ಕೈಗೊಳ್ಳಲೇಬೇಕು. ವಾಸ್ತವವಾಗಿ ಮೃತ್ಯು ಹತ್ತಿರ ಬಂದಂತೆ ಜೀವನದ ಮೇಲಿನ ಮೋಹ ಜಾಸ್ತಿಯಾಗುತ್ತದೆ. ವಾಸ್ತವ ಹೀಗಿರುವಾಗ ವ್ಯಕ್ತಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಇಚ್ಛಿಸುವುದಿಲ್ಲ. ಇದರ ಬಗ್ಗೆ ಗರುಡ ಪುರಾಣದಲ್ಲಿ ಚೆನ್ನಾಗಿ, ಸವಿವರವಾಗಿ ಹೇಳಲಾಗಿದೆ.
ಗರುಡ ಮಂತ್ರ: ಕುಂಕುಮಾಂಕಿತ ವರ್ಣಾಯ ಕುದೆಂದು ಧವಳಾಯಚ | ವಿಷ್ಣುವಾಹನ ನಮಸ್ತುಭ್ಯಂ ಪಕ್ಷೀರಾಜಾಯ ತೇ ನಮಃ ||
ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ (Garuda Ashtottara Shatanaama Stotram in Kannada)
ಓಂ ಗರುಡಾಯ ನಮಃ ಓಂ ವೈನತೇಯಾಯ ನಮಃ ಓಂ ಖಗಪತಯೇ ನಮಃ ಓಂ ಕಾಶ್ಯಪಾಯ ನಮಃ ಓಂ ಅಗ್ನಯೇ ನಮಃ ಓಂ ಮಹಾಬಲಾಯ ನಮಃ ಓಂ ತಪ್ತಕಾನ್ಚನವರ್ಣಾಭಾಯ ನಮಃ ಓಂ ಸುಪರ್ಣಾಯ ನಮಃ ಓಂ ಹರಿವಾಹನಾಯ ನಮಃ ಓಂ ಛಂದೋಮಯಾಯ ನಮಃ || 10 ||
ಓಂ ಮಹಾತೇಜಸೇ ನಮಃ ಓಂ ಮಹೋತ್ಸಹಾಯ ನಮಃ ಓಂ ಮಹಾಬಲಾಯ ನಮಃ ಓಂ ಬ್ರಹ್ಮಣ್ಯಾಯ ನಮಃ ಓಂ ವಿಷ್ಣುಭಕ್ತಾಯ ನಮಃ ಓಂ ಕುಂದೇಂದುಧವಳಾನನಾಯ ನಮಃ ಓಂ ಚಕ್ರಪಾಣಿಧರಾಯ ನಮಃ ಓಂ ಶ್ರೀಮತೇ ನಮಃ ಓಂ ನಾಗಾರಯೇ ನಮಃ ಓಂ ನಾಗಭೂಶಣಾಯ ನಮಃ || 20 ||
ಓಂ ವಿಜ್ಞಾನದಾಯ ನಮಃ ಓಂ ವಿಶೇಷ ಜ್ಞಾನಾ ಯ ನಮಃ ಓಂ ವಿದ್ಯಾನಿಧಯೇ ನಮಃ ಓಂ ಅನಾಮಯಾಯ ನಮಃ ಓಂ ಭೂತಿದಾಯ ನಮಃ ಓಂ ಭುವನದಾತ್ರೇ ನಮಃ ಓಂ ಭೂಶಯಾಯ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಸಪ್ತಛಂದೋಮಯಾಯ ನಮಃ ಓಂ ಪಕ್ಷಿಣೇ ನಮಃ || 30 ||
ಓಂ ಸುರಾಸುರಪೂಜಿತಾಯ ನಮಃ ಓಂ ಗಜಭುಜೇ ನಮಃ ಓಂ ಕಚ್ಛಪಾಶಿನೇ ನಮಃ ಓಂ ದೈತ್ಯಹಂತ್ರೇ ನಮಃ ಓಂ ಅರುಣಾನುಜಾಯ ನಮಃ ಓಂ ಅಮೃತಾಂಶಾಯ ನಮಃ ಓಂ ಅಮೃತವಪುಶೇ ನಮಃ ಓಂ ಆನಂದನಿಧಯೇ ನಮಃ ಓಂ ಅವ್ಯಯಾಯ ನಮಃ ಓಂ ನಿಗಮಾತ್ಮನೇ ನಮಃ || 40 ||
ಓಂ ನಿರಾಹಾರಾಯ ನಮಃ ಓಂ ನಿಸ್ತ್ರೈಗುಣ್ಯಾಯ ನಮಃ ಓಂ ನಿರವ್ಯಾಯ ನಮಃ ಓಂ ನಿರ್ವಿಕಲ್ಪಾಯ ನಮಃ ಓಂ ಪರಸ್ಮೈಜ್ಯೋತಿಶೇ ನಮಃ ಓಂ ಪರಾತ್ಪರತರಾಯ ನಮಃ ಓಂ ಪರಸ್ಮೈ ನಮಃ ಓಂ ಶುಭಾನ್ಗಾಯ ನಮಃ ಓಂ ಶುಭದಾಯ ನಮಃ ಓಂ ಶೂರಾಯ ನಮಃ || 50 ||
ಓಂ ಸೂಕ್ಷ್ಮರೂಪಿಣೇ ನಮಃ ಓಂ ಬೃಹತ್ತನವೇ ನಮಃ ಓಂ ವಿಶಾಶಿನೇ ನಮಃ ಓಂ ವಿದಿತಾತ್ಮನೇ ನಮಃ ಓಂ ವಿದಿತಾಯ ನಮಃ ಓಂ ಜಯವರ್ಧನಾಯ ನಮಃ ಓಂ ಧಾರ್ಡ್ಯಾನ್ಗಾಯ ನಮಃ ಓಂ ಜಗದೀಶಾಯ ನಮಃ ಓಂ ಜನಾರ್ದನಾಯನಮಃ ಓಂ ಧ್ವಜಾಯ ನಮಃ ಓಂ ಸತಾಂಸಂತಾಪವಿಚ್ಛೇತ್ರೇ ನಮಃ || 60 ||
ಓಂ ಜರಾಮರಣವರ್ಜಿತಾಯ ನಮಃ ಓಂ ಕಲ್ಯಾಣದಾಯ ನಮಃ ಓಂ ಕಾಲಾತೀತಾಯ ನಮಃ ಓಂ ಕಲಾಧರಸಮಪ್ರಭಾಯ ನಮಃ ಓಂ ಸೋಮಪಾಯ ನಮಃ ಓಂ ಸುರಸನ್ಘೇಶಾಯ ನಮಃ ಓಂ ಯಗ್ಯಾನ್ಗಾಯ ನಮಃ ಓಂ ಯಗ್ಯಭೂಶಣಾಯ ನಮಃ ಓಂ ಮಹಾಜವಾಯ ನಮಃ ಓಂ ಜಿತಾಮಿತ್ರಾಯ ನಮಃ || 70 ||
ಓಂ ಮನ್ಮಥಪ್ರಿಯಬಾಂಧವಾಯ ನಮಃ ಓಂ ಶನ್ಖಭ್ಱುತೇ ನಮಃ ಓಂ ಚಕ್ರಧಾರಿಣೇ ನಮಃ ಓಂ ಬಾಲಾಯ ನಮಃ ಓಂ ಬಹುಪರಾಕ್ರಮಾಯ ನಮಃ ಓಂ ಸುಧಾಕುಂಭಧರಾಯ ನಮಃ ಓಂ ಧೀಮತೇ ನಮಃ ಓಂ ದುರಾಧರ್ಶಾಯ ನಮಃ ಓಂ ದುರಾರಿಘ್ನೇ ನಮಃ ಓಂ ವಜ್ರಾನ್ಗಾಯ ನಮಃ || 80 ||
ಓಂ ವರದಾಯ ನಮಃ ಓಂ ವಂದ್ಯಾಯ ನಮಃ ಓಂ ವಾಯುವೇಗಾಯ ನಮಃ ಓಂ ವರಪ್ರದಾಯ ನಮಃ ಓಂ ವಿನುತಾನಂದನಾಯ ನಮಃ ಓಂ ಶ್ರೀದಾಯ ನಮಃ ಓಂ ವಿಜಿತಾರಾತಿಸನ್ಕುಲಾಯ ನಮಃ ಓಂ ಪತದ್ವರಿಶ್ಠರಾಯ ನಮಃ ಓಂ ಸರ್ವೇಶಾಯ ನಮಃ ಓಂ ಪಾಪಘ್ನೇ ನಮಃ || 90 ||
ಓಂ ಪಾಪನಾಶನಾಯ ನಮಃ ಓಂ ಅಗ್ನಿಜಿತೇ ನಮಃ ಓಂ ಜಯಘೋಶಾಯ ನಮಃ ಓಂ ಜಗದಾಹ್ಲಾದಕಾರಕಾಯ ನಮಃ ಓಂ ವಜ್ರನಾಸಾಯ ನಮಃ ಓಂ ಸುವಕ್ತ್ರಾಯ ನಮಃ ಓಂ ಶತ್ರುಘ್ನಾಯ ನಮಃ ಓಂ ಮದಭನ್ಜನಾಯ ನಮಃ ಓಂ ಕಾಲಗ್ಯಾಯ ನಮಃ ಓಂ ಕಮಲೇಷ್ಟಾಯ ನಮಃ || 100 ||
ಓಂ ಕಲಿದೋಶನಿವಾರಣಾಯ ನಮಃ ಓಂ ವಿದ್ಯುನ್ನಿಭಾಯ ನಮಃ ಓಂ ವಿಶಾಲಾನ್ಗಾಯ ನಮಃ ಓಂ ವಿನುತಾದಾಸ್ಯವಿಮೋಚನಾಯ ನಮಃ ಓಂ ಸ್ತೋಮಾತ್ಮನೇ ನಮಃ ಓಂ ತ್ರಯೀಮೂರ್ಧ್ನೇ ನಮಃ ಓಂ ಭೂಮ್ನೇ ನಮಃ ಓಂ ಗಾಯತ್ರಲೋಚನಾಯ ನಮಃ ಓಂ ಸಾಮಗಾನರತಾಯ ನಮಃ ಓಂ ಸ್ರಗ್ವಿನೇ ನಮಃ || 110 ||
ಓಂ ಸ್ವಚ್ಛಂದಗತಯೇ ನಮಃ ಓಂ ಅಗ್ರಣ್ಯೇ ನಮಃ ಓಂ ಶ್ರೀಪಕ್ಷಿರಾಜಪರಬ್ರಹ್ಮಣೇ ನಮಃ || 113 ||
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)