AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನ್ಮಾರ್​​ನ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ; 23 ಜನ ಸಾವು, 30 ಮಂದಿಗೆ ಗಾಯ

ಮ್ಯಾನ್ಮಾರ್​​ನಲ್ಲಿ ಭೀಕರ ದಾಳಿ ನಡೆದಿದೆ. ಇಲ್ಲಿನ ಸಾಗೈಂಗ್ ಪ್ರದೇಶದಲ್ಲಿ ಸಶಸ್ತ್ರ ಪೀಪಲ್ಸ್ ಡಿಫೆನ್ಸ್ ಫೋರ್ಸಸ್ ಸೇರಿದಂತೆ ವಿರೋಧ ಪಡೆಗಳನ್ನು ಎದುರಿಸಲು ಸೇನೆಯು ಹೆಚ್ಚಾಗಿ ವಾಯುದಾಳಿಗಳನ್ನು ಬಳಸುತ್ತಿದೆ. ಇಲ್ಲಿ ಇಂದು ನಡೆದ ವೈಮಾನಿಕ ದಾಳಿಯಲ್ಲಿ 23 ಜನರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಮ್ಯಾನ್ಮಾರ್​​ನ ಬೌದ್ಧ ಮಠದ ಮೇಲೆ ವೈಮಾನಿಕ ದಾಳಿ; 23 ಜನ ಸಾವು, 30 ಮಂದಿಗೆ ಗಾಯ
Myanmar Attack
ಸುಷ್ಮಾ ಚಕ್ರೆ
|

Updated on: Jul 11, 2025 | 10:54 PM

Share

ಮ್ಯಾನ್ಮಾರ್, ಜುಲೈ 11: ಮ್ಯಾನ್ಮಾರ್​​ನ (Myanmar) ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 4 ಮಕ್ಕಳು ಸೇರಿದಂತೆ 23 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾಗೈಂಗ್ ಪಟ್ಟಣದಲ್ಲಿರುವ ಲಿನ್ ಟಾ ಲು ಗ್ರಾಮದಲ್ಲಿ ಇಂದು ಮುಂಜಾನೆ ಈ ದುರಂತ ದಾಳಿ ಸಂಭವಿಸಿದೆ. ಅಲ್ಲಿ ಆ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ತಪ್ಪಿಸಿಕೊಳ್ಳಲು 150ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದರು. ಇಂದು ರಾತ್ರಿ ನಡೆದ ದಾಳಿಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದಾರೆ, ಅವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮಿಲಿಟರಿ ಜೆಟ್ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮಠದ ಆವರಣದೊಳಗಿನ ಕಟ್ಟಡದ ಮೇಲೆ ಬಾಂಬ್ ಹಾಕಿತು. ಇತ್ತೀಚಿನ ಘರ್ಷಣೆಯಲ್ಲಿ ಸಿಲುಕಿದ ಸ್ಥಳಾಂತರಗೊಂಡ ಗ್ರಾಮಸ್ಥರು ಈ ಮಠವನ್ನು ಆಶ್ರಯ ತಾಣವಾಗಿ ಬಳಸುತ್ತಿದ್ದರು. ಕೊಲ್ಲಲ್ಪಟ್ಟವರೆಲ್ಲರೂ ರಕ್ಷಣೆ ಬಯಸಿ ಬಂದಿದ್ದ ನಾಗರಿಕರು. 2021ರಲ್ಲಿ ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ನಡುವೆ ಈ ಘಟನೆಯು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ನೇಪಾಳದ ಮೂಲಕ ಭಾರತದ ಮೇಲೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್, ಜೈಶ್ ದಾಳಿ ಸಾಧ್ಯತೆ

ಮ್ಯಾನ್ಮಾರ್‌ನ ಸ್ವತಂತ್ರ ಡೆಮಾಕ್ರಟಿಕ್ ವಾಯ್ಸ್ ಆಫ್ ಬರ್ಮಾ ಆನ್‌ಲೈನ್ ಮಾಧ್ಯಮವು ಸಾವಿನ ಸಂಖ್ಯೆ 30ರಷ್ಟಿರಬಹುದು ಎಂದು ವರದಿ ಮಾಡಿದೆ. ಆ ಬಗ್ಗೆ ಯಾವುದೇ ದೃಢೀಕರಣ ಸಿಗಲಿಲ್ಲ. ದೇಶದ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ವಾಯುವ್ಯಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ಮಠದಲ್ಲಿ ನಡೆದ ಘಟನೆಯ ಬಗ್ಗೆ ಮಿಲಿಟರಿ ಇನ್ನೂ ಪ್ರತಿಕ್ರಿಯಿಸಲಿಲ್ಲ.

ಫೆಬ್ರವರಿ 2021ರಲ್ಲಿ ಸೈನ್ಯವು ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್​ನಲ್ಲಿ ಪ್ರಕ್ಷುಬ್ಧತೆ ನಿರ್ಮಾಣವಾಗಿದೆ.ಈ ದೇಶದ ಹೆಚ್ಚಿನ ಭಾಗಗಳು ಈಗ ಸಂಘರ್ಷದಲ್ಲಿ ಸಿಲುಕಿಕೊಂಡಿವೆ. ಸಶಸ್ತ್ರ ಪ್ರತಿರೋಧದ ಭದ್ರಕೋಟೆಯಾದ ಸಾಗೈಂಗ್ ಪ್ರದೇಶದಲ್ಲಿ ಸಶಸ್ತ್ರ ಪೀಪಲ್ಸ್ ಡಿಫೆನ್ಸ್ ಫೋರ್ಸಸ್ ಸೇರಿದಂತೆ ವಿರೋಧ ಪಡೆಗಳನ್ನು ಎದುರಿಸಲು ಸೇನೆಯು ವಾಯುದಾಳಿಗಳನ್ನು ಹೆಚ್ಚಾಗಿ ಬಳಸುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು