AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?

Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?

ಗಂಗಾಧರ​ ಬ. ಸಾಬೋಜಿ
|

Updated on:Jul 11, 2025 | 6:52 AM

Share

ಹುತ್ತವಿರುವ ಜಾಗದಲ್ಲಿ ಮನೆ ಕಟ್ಟುವುದರ ಬಗ್ಗೆ ಡಾ. ಬಸವರಾಜ್ ಗುರೂಜಿ ಅವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಹುತ್ತವಿರುವ ನಿವೇಶನವನ್ನು ಖರೀದಿಸುವುದು ಲಾಭದಾಯಕವೇ ಅಥವಾ ನಷ್ಟಕರವೇ ಎಂಬುದರ ಬಗ್ಗೆ ಅವರು ವಿವರಿಸಿದ್ದಾರೆ. ಹುತ್ತಿನ ಸುತ್ತಲೂ ಸ್ಥಳ ಬಿಟ್ಟು ಮನೆ ಕಟ್ಟುವುದು ಶುಭ ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಜುಲೈ 11: ಡಾ. ಬಸವರಾಜ್ ಗುರೂಜಿ ಅವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹುತ್ತಗಳಿರುವ ನಿವೇಶನದಲ್ಲಿ ಮನೆ ಕಟ್ಟುವುದರ ಬಗ್ಗೆ ವಿವರಿಸಿದ್ದಾರೆ. ಮನೆ ನಿರ್ಮಾಣಕ್ಕೆ ಸ್ಥಳ ಆಯ್ಕೆ ಮಾಡುವಾಗ ಹುತ್ತಗಳು ಸಮಸ್ಯೆಯಾಗುತ್ತವೆ ಎಂಬುದು ಸಾಮಾನ್ಯರ ನಂಬಿಕೆ. ಆದರೆ, ಗುರೂಜಿ ಅವರ ಪ್ರಕಾರ, ಹುತ್ತ ಇರುವ ಸ್ಥಳದಲ್ಲಿ ಮನೆ ಕಟ್ಟಬಹುದು. ಆದರೆ, ಹುತ್ತರುವ ಸ್ಥಳವನ್ನು ಬಿಟ್ಟು ಮನೆ ನಿರ್ಮಿಸುವುದು ಉತ್ತಮ. ಚಿಕ್ಕ ಹುತ್ತಗಳಿದ್ದರೆ ಆ ಮಣ್ಣನ್ನು ನೀರಿಗೆ ಅರ್ಪಿಸಿ ಮನೆ ಕಟ್ಟಬಹುದು. ಆದರೆ ದೊಡ್ಡ ಹುತ್ತಗಳನ್ನು ನಾಶಪಡಿಸಬಾರದು. ಇದು ಅಶುಭ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ, ಹುತ್ತವಿರುವ ಜಾಗವನ್ನು ಬಿಟ್ಟು ಮನೆ ಕಟ್ಟುವುದು ಶುಭಕರ ಎಂದು ಡಾ. ಗುರೂಜಿ ಸಲಹೆ ನೀಡಿದ್ದಾರೆ.

Published on: Jul 11, 2025 06:50 AM