Video: ಮಹಾರಾಷ್ಟ್ರ: ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಮಹಾರಾಷ್ಟ್ರದಲ್ಲಿ ಸೇತುವೆಯೊಂದು ಲೋಕಾರ್ಪಣೆಯಾಗಿ ಕೇವಲ ಎರಡು ಗಂಟೆಗಳಲ್ಲೇ ಮುಚ್ಚಲಾಗಿತ್ತು. ಕಲ್ಯಾಣ್-ಶಿಲ್ ರಸ್ತೆಯಲ್ಲಿರುವ ಪಲವಾ ಸೇತುವೆಯನ್ನು ಜುಲೈ 4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಉದ್ಘಾಟನೆಗೊಂಡು ಕೇವಲ 2 ಗಂಟೆಗಳ ಅವಧಿಯಲ್ಲಿ ಮುಚ್ಚುವ ಅನಿವಾರ್ಯತೆ ಎದುರಾಯಿತು. ಸೇತುವೆ ಮೇಲೆ ಮೂರ್ನಾಲ್ಕು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಬಳಿಕ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸೇತುವೆಯಲ್ಲಿ ತುಂಬಾ ಜಾರಿಕೆ ಇದ್ದ ಕಾರಣ ವಾಹನಗಳು ಸ್ಕಿಡ್ ಆಗಿ ಅಪಾಯ ಉಂಟಾಗುತ್ತಿತ್ತು.
ಮಹಾರಾಷ್ಟ್ರ, ಜುಲೈ 11: ಮಹಾರಾಷ್ಟ್ರದಲ್ಲಿ ಸೇತುವೆಯೊಂದು ಲೋಕಾರ್ಪಣೆಯಾಗಿ ಕೇವಲ ಎರಡು ಗಂಟೆಗಳಲ್ಲೇ ಮುಚ್ಚಲಾಗಿತ್ತು. ಕಲ್ಯಾಣ್-ಶಿಲ್ ರಸ್ತೆಯಲ್ಲಿರುವ ಪಲವಾ ಸೇತುವೆಯನ್ನು ಜುಲೈ 4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಉದ್ಘಾಟನೆಗೊಂಡು ಕೇವಲ 2 ಗಂಟೆಗಳ ಅವಧಿಯಲ್ಲಿ ಮುಚ್ಚುವ ಅನಿವಾರ್ಯತೆ ಎದುರಾಯಿತು. ಸೇತುವೆ ಮೇಲೆ ಮೂರ್ನಾಲ್ಕು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಬಳಿಕ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಸೇತುವೆಯಲ್ಲಿ ತುಂಬಾ ಜಾರಿಕೆ ಇದ್ದ ಕಾರಣ ವಾಹನಗಳು ಸ್ಕಿಡ್ ಆಗಿ ಅಪಾಯ ಉಂಟಾಗುತ್ತಿತ್ತು. ಹೀಗಾಗಿ ಮುಚ್ಚಲಾಗಿತ್ತು. ಆದರೆ ನಂತರ ಜಲ್ಲಿಕಲ್ಲುಗಳನ್ನು ಹಾಕಿ ಮತ್ತೆ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

