ಆಷಾಢಮಾಸದ ಮೂರನೇ ಶುಕ್ರವಾರ; ಚಾಮುಂಡಿ ತಾಯಿಗೆ ಬಗೆಬಗೆಯ ಹೂಗಳಿಂದ ಅಲಂಕಾರ
ಮೊದಲ ಶುಕ್ರವಾರ ಕಂಡ ನೂಕುನುಗ್ಗಲು ಈ ಶುಕ್ರವಾರ ಕಾಣುತ್ತಿಲ್ಲ. ಭಕ್ತರು ಸದ್ಯಕ್ಕಂತೂ ಯಾವುದೇ ದೂರು ಹೇಳುತ್ತಿಲ್ಲ. ಕಳೆದ ಶುಕ್ರವಾರ ಕೆಲ ಗಣ್ಯರು ದೇವಿಯ ದರ್ಶನಕ್ಕೆ ತಮ್ಮ ಕುಟುಂಬ ಹಾಗೂ ಬೆಂಬಲಿಗರೊಂದಿಗೆ ಬಂದಾಗ ಸರತಿ ಸಾಲಿನಲ್ಲಿದ್ದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು. ಗಣ್ಯರ ಜೊತೆ ಸುಮಾರು 50-60 ಹಿಂಬಾಲಕರು ನುಗ್ಗಿದಾಗ ಬೆಳಗಿನ ಜಾವದಿಂದ ದರ್ಶನಕ್ಕೆ ನಿಂತವರಿಗೆ ಕೋಪ ಬರೋದು ಸಹಜವೇ.
ಮೈಸೂರು, ಜುಲೈ 11: ಇವತ್ತು ಆಷಾಢ ಮಾಸದ ಮೂರನೇ ಶುಕ್ರವಾರ, (third Friday of Aashaadha Maasa) ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗಲು ಭಕ್ತಸಾಗರ ಬೆಳಗಿನ ಜಾವದಿಂದಲೇ ಲೈನುಗಟ್ಟಿದೆ. ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ಮತ್ತು ಭಕ್ತಗಣ ಚಾಮುಂಡಿತಾಯಿಗೆ ಬಗೆಬಗೆಯ ಹೂಗಳಿಂದ ಗಜಲಕ್ಷ್ಮಿ ಮತ್ತು ಮಹಾಲಕ್ಷ್ಮಿ ಅಲಂಕಾರ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೇವಲ ಮೈಸೂರು ಮತ್ತು ಸುತ್ತಮುತ್ತಲ ಸ್ಥಳಗಳಿಂದ ಮಾತ್ರವಲ್ಲದೆ, ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಭಕ್ತರು ತಂಡೋಪತಂಡವಾಗಿ ಅಗಮಿಸಿ ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Aashada Masa: ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳುವುದೇಕೆ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos