ಸಿದ್ರಾಮಣ್ಣ, ಶಿವಕುಮಾರ್ ಇಬ್ಬರೂ ನಮ್ಮ ನಾಯಕರು, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ: ಕೊತ್ತೂರು ಮಂಜುನಾಥ್
ಶಿವಕುಮಾರ್ ಅವರಲ್ಲ್ಲಿ ಅತ್ಯುತ್ತಮ ನಾಯಕತ್ವದ ಗುಣಗಳಿವೆ, ನಾನೊಬ್ಬ ಅಲೆಮಾರಿ ಜನಾಂಗದವನು, ಅವರು ನನ್ನನ್ನು ಗುರುತಿಸಿ ಕೋಲಾರ ಸಾಮಾನ್ಯ ಕ್ಷೇತ್ರವಾದರೂ ನನಗೆ ಟಿಕೆಟ್ ಕೊಟ್ಟರು, ಇಲ್ಲಿ ನಮ್ಮ ಜನಾಂಗದ ಕೇವಲ 1,200 ವೋಟು ಮಾತ್ರ ಇವೆ. ಆದರೂ ನಾನು ಗೆದ್ದೆ, ಅದಕ್ಕೆಲ್ಲ ಶಿವಕುಮಾರ್ ಅವರೇ ಕಾರಣ, ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಖಂಡಿತ ಇದೆ, ಸ್ವಲ್ಪ ಕಾಯಬೇಕು ಎಂದು ಕೊತ್ತೂರು ಮಂಜುನಾಥ್ ಹೇಳಿದರು.
ಬೆಂಗಳೂರು ದಕ್ಷಿಣ: ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath), ತಮ್ಮ ಪಕ್ಷ ಹೈಕಮಾಂಡ್ ಆದೇಶದಂತೆ ನಡೆಯುತ್ತದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ನಮ್ಮ ನಾಯಕರು, ಪಕ್ಷದ ಎಲ್ಲ ತೀರ್ಮಾನಗಳನ್ನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಂದೀಪ್ ಸುರ್ಜೇವಾಲಾ ತೆಗೆದುಕೊಳ್ಳುತ್ತಾರೆ, ಯಾರೂ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದೆಂದು ನಾಯಕರು ಹೇಳಿದ್ದಾರೆ ಎಂದರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಬಹಳ ಚೆನ್ನಾಗಿ ನಡೆಯುತ್ತಿದೆ, ಯಾರಿಗೂ ಸಮಸ್ಯೆ ಇಲ್ಲ, ಪಕ್ಷ ನೀಡುವ ಆದೇಶವನ್ನು ಎಲ್ಲರ ಪಾಲಿಸಿಕೊಂಡು ಹೋಗುತ್ತೇವೆ ಎಂದು ಕೊತ್ತೂರು ಮಂಜುನಾಥ್ ಹೇಳಿದರು.
ಇದನ್ನೂ ಓದಿ: ಶಾಸಕ ಕೊತ್ತೂರು ಮಂಜುನಾಥ್ಗೆ ಪರೋಕ್ಷವಾಗಿ ಬೆಂಡೆತ್ತಿದ ಹಿರಿಯ ಶಾಸಕ ಕೆಎಂ ಶಿವಲಿಂಗೇಗೌಡ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ