AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಬನದ ಹುಣ್ಣಿಮೆ, ದೇವಿ ಬನಶಂಕರಿಯನ್ನು ಆರಾಧಿಸಿ! ಏನಿದರ ವಿಶೇಷತೆ? ತಿಳಿಯೋಣ

Banashankari hunnime: ಹಿಂದೂ ಧರ್ಮದಲ್ಲಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಿಗೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ವರ್ಷದಲ್ಲಿ ಬರುವಂತಹ 12 ಹುಣ್ಣಿಮೆಗಳಿಗೂ ಒಂದೊಂದು ವಿಶೇಷತೆ ಇರುವಂತೆ ಪುಷ್ಯ ಮಾಸದಲ್ಲಿ ಬರುವಂತಹ ಹುಣ್ಣಿಮೆಗೂ ಇದೆ. ಈ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಇಂದು ಬನದ ಹುಣ್ಣಿಮೆ, ದೇವಿ ಬನಶಂಕರಿಯನ್ನು ಆರಾಧಿಸಿ! ಏನಿದರ ವಿಶೇಷತೆ? ತಿಳಿಯೋಣ
ಇಂದು ಬನದ ಹುಣ್ಣಿಮೆ, ದೇವಿ ಬನಶಂಕರಿಯನ್ನು ಆರಾಧಿಸಿ! ಏನಿದರ ವಿಶೇಷತೆ? ತಿಳಿಯೋಣ
TV9 Web
| Updated By: ಸಾಧು ಶ್ರೀನಾಥ್​|

Updated on:Jan 17, 2022 | 8:11 AM

Share

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹುಣ್ಣಿಮೆಗಳಿಗಿರುವ ವಿಶೇಷತೆಯಂತೆ ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗೂ ಅತ್ಯಂತ ಮಹತ್ವ ನೀಡಲಾಗುತ್ತದೆ. ಈ ಹುಣ್ಣಿಮೆಯಂದು ಯಾವ ಪೂಜೆ, ಪುನಸ್ಕಾರ, ವ್ರತಾಚರಣೆಯನ್ನು ಮಾಡಬೇಕು ಎನ್ನುವುದರ ಕುರಿತು ಇಲ್ಲಿದೆ ಮಾಹಿತಿ.  ಹಿಂದೂ ಧರ್ಮದಲ್ಲಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಿಗೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ವರ್ಷದಲ್ಲಿ ಬರುವಂತಹ 12 ಹುಣ್ಣಿಮೆಗಳಿಗೂ ಒಂದೊಂದು ವಿಶೇಷತೆ ಇರುವಂತೆ ಪುಷ್ಯ ಮಾಸದಲ್ಲಿ ಬರುವಂತಹ ಹುಣ್ಣಿಮೆಗೂ ಇದೆ. ಈ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ( banashankari hunnime) ಕರೆಯುತ್ತಾರೆ. ಈ ಬಾರಿ ಪುಷ್ಯಮಾಸದ ಹುಣ್ಣಿಮೆಯು (full moon day) ಇಂದು ಸೋಮವಾರ ಜನವರಿ 17 ರಂದು ಅಂದರೆ ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದಂದು ನಡೆಯಲಿದೆ. ಅತ್ಯಂತ ಪವಿತ್ರವಾದ ಈ ದಿನ ಪೌರ್ಣಮಿ ಉಪವಾಸ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಶ್ರೇಷ್ಠವೆನ್ನುತ್ತಾರೆ. ಪುಷ್ಯ ಹುಣ್ಣಿಮೆಯ ಇನ್ನೊಂದು ವಿಶೇಷತೆಯೆಂದರೆ ಮಾಘ ಸ್ನಾನವು ಕೂಡಾ ಈ ಹುಣ್ಣಿಮೆಯಿಂದ (banada hunnime) ಆರಂಭವಾಗುತ್ತದೆ.

ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಮಾಡಿದರೆ ಶ್ರೇಷ್ಠವೆಂದು ಹೇಳುತ್ತಾರೆ. ಸತ್ಯನಾರಾಯಣನು ಭಗವಾನ್‌ ಮಹಾವಿಷ್ಣುವಿನ ಪ್ರತಿರೂಪವೇ ಆಗಿರುವುದರಿಂದ ಕುಟುಂಬದ ಸಂತೋಷ ಹಾಗೂ ಸಮೃದ್ಧಿಗಾಗಿ ವಿಶೇಷವಾಗಿ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಕಥೆಯನ್ನು ನೀವೇ ಪಠಿಸಬಹುದು ಅಥವಾ ಬ್ರಾಹ್ಮಣರಿಂದಲೂ ಪೂಜೆ ಮಾಡಿಸಬಹುದು.

ಹುಣ್ಣಿಮೆ ತಿಥಿ ಆರಂಭ: ಜನವರಿ 16, 2022 ಸಮಯ ಮುಂಜಾನೆ: 03:17 ಗಂಟೆಗೆ ಹುಣ್ಣಿಮೆ ತಿಥಿ ಅಂತ್ಯ: ಜನವರಿ 17, 2022 ಸಮಯ ಮುಂಜಾನೆ: 05:17 ಗಂಟೆಯವರೆಗೆ

ಬನದ ಹುಣ್ಣಿಮೆಯು ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗಿರುವ ಇನ್ನೊಂದು ಹೆಸರು. ಈ ತಿಂಗಳಲ್ಲಿ ಕೆಲವೆಡೆ ಪುಷ್ಯ ಮಾಸದ ಶುಕ್ಲಪಕ್ಷದ ಅಷ್ಟಮೀ ದಿನದಿಂದ ಬನದ ಹುಣ್ಣಿಮೆಯ ನವರಾತ್ರಿಯನ್ನು ಆಚರಿಸುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ.

ಶುಕ್ರ ಹಾಗೂ ಚಂದ್ರ ಗ್ರಹಗಳ ದೋಷವನ್ನು ಬನಶಂಕರಿ ದೇವಿಯು ನಿವಾರಿಸುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿರುವುದರಿಂದ ಈ ದಿನ ಶೀತಬಾಧೆ, ಕಿಡ್ನಿ ಸಮಸ್ಯೆ, ರಕ್ತಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ಮಾನಸಿಕ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುವವರು ಪುಷ್ಯ ಮಾಸದ ಹುಣ್ಣಿಮೆಯ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮ ಫಲವನ್ನು ಪಡೆಯಬಹುದು.

ಹುಣ್ಣಿಮೆಯ ಯೋಗದಲ್ಲಿ ಲಕ್ಷ್ಮೀ ಸಮೇತ ಮಹಾವಿಷ್ಣುವನ್ನು ಪೂಜಿಸಿ. ಅರ್ಚನೆಯನ್ನು ಮಾಡುವಾಗ ಕೇಸರಿ ಮಿಶ್ರಿತ ಹಾಲಿನಿಂದ ಶಂಖದಲ್ಲಿ ಅಭಿಷೇಕ ಮಾಡಿದರೆ ಒಳ್ಳೆಯದು. ಪೌರ್ಣಮಿಯ ದಿನದಂದು ಅಥವಾ ಪೌರ್ಣಮಿಯ ಹಿಂದಿನ ದಿನ ಅಂದರೆ ಚತುರ್ದಶಿಯು ಅಂತ್ಯವಾಗಿ ಹುಣ್ಣಿಮೆ ತಿಥಿಯು ಆರಂಭವಾಗುವಾಗ ಉಪವಾಸ ವ್ರತವನ್ನು ಕೈಗೊಳ್ಳಬಹುದು. ಪೌರ್ಣಮಿಯ ದಿನ ಬಾಲಗೋಪಾಲನನ್ನೂ ತುಳಸಿ ದಳಗಳಿಂದ ಆರಾಧಿಸಬಹುದು.

ಪೌರ್ಣಮಿಯ ದಿನ ಸೋಮವಾರ ಶಿವನ ದೇವಾಲಯದಲ್ಲಿ “ಶಿವ ರಕ್ಷಾ‌‌ ಸ್ತೋತ್ರ” ಹಾಗೂ “ಓಂ ನಮಃ ಶಿವಾಯ” ಮಂತ್ರವನ್ನು. ಆಂಜನೇಯ ದೇವಾಲಯದಲ್ಲಿ ದೀಪವನ್ನು ಬೆಳಗಿ ಹನುಮಾನ್‌ ಚಾಲೀಸವನ್ನು ಪಠಿಸಬಹುದು. ಸಮಯವಿದ್ದಲ್ಲಿ ಸುಂದರಕಾಂಡವನ್ನೂ ಓದಬಹುದು. ಜೊತೆಗೆ ‘ಓಂ ಏಂ ಹನುಮತೇ ರಾಮದೂತಾಯ ನಮಃ’ ಮಂತ್ರವನ್ನು ಹೇಳಿದರೆ ಒಳ್ಳೆಯದು. (ಸಂಗ್ರಹ: ನಿತ್ಯಸತ್ಯ)

ತಾಯಿ ಬನಶಂಕರಿಗೆ ಬಗೆಬಗೆಯ ತರಕಾರಿ, ಸೊಪ್ಪು, ಹಣ್ಣುಗಳಿಂದ ಬೆಳಗಿನ ಪೂಜೆ | TV9Kannada

Also Read:

ಬನಶಂಕರಿ- ಆದಿಶಕ್ತಿಯ ಅವತಾರಗಳಲ್ಲಿ ಪ್ರಮುಖ ಅವತಾರಿ ಶಾಕಂಭರಿ: ಇತಿಹಾಸ, ಹಿನ್ನೆಲೆ ಏನು?

Swastika: 6000 ವರ್ಷಗಳ ಇತಿಹಾಸ ಹೊಂದಿರುವ ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ!

Published On - 6:43 am, Mon, 17 January 22

ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್