AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂತ್ರಿಕ ಕಾರಣದಿಂದ 2 ಗಂಟೆಗೆ ಟೇಕ್ ಆಫ್​ ಆಗಬೇಕಿದ್ದ ವಿಮಾನ ವಿಳಂಬ; ಏರ್ ಇಂಡಿಯಾ ವಿರುದ್ಧ ಪ್ರಯಾಣಿಕರ ಪ್ರತಿಭಟನೆ

ಇಂದು (ಜನವರಿ 17) ಮಧ್ಯಾಹ್ನ ಕೆಐಎಬಿಯಿಂದ ಸ್ಯಾನ್ ಪ್ರಾನ್ಸಿಸ್ಕೂಗೆ ತೆರಳಬೇಕಿದ್ದ AI 175 ವಿಮಾನ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಇದರಿಂದಾಗಿ ಕೋಪಗೊಂಡ 150ಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿಭಟನೆ ಮುಂದಾಗಿದ್ದಾರೆ.

ತಾಂತ್ರಿಕ ಕಾರಣದಿಂದ 2 ಗಂಟೆಗೆ ಟೇಕ್ ಆಫ್​ ಆಗಬೇಕಿದ್ದ ವಿಮಾನ ವಿಳಂಬ; ಏರ್ ಇಂಡಿಯಾ ವಿರುದ್ಧ ಪ್ರಯಾಣಿಕರ ಪ್ರತಿಭಟನೆ
ಏರ್ ಇಂಡಿಯಾ, ಏರ್ ಲೈನ್ಸ್ ವಿರುದ್ಧ ಪ್ರಯಾಣಿಕರ ಆಕ್ರೋಶ
TV9 Web
| Updated By: preethi shettigar|

Updated on:Jan 17, 2022 | 9:59 PM

Share

ಬೆಂಗಳೂರು: ತಾಂತ್ರಿಕ ಕಾರಣದಿಂದ 2 ಗಂಟೆಗೆ ಟೇಕ್ ಆಫ್​ ಆಗಬೇಕಿದ್ದ ವಿಮಾನ ವಿಳಂಬವಾಗಿದ್ದು, 5 ಗಂಟೆಗೂ ಅಧಿಕ ಕಾಲ ವಿಮಾನ ಸಂಚಾರವಿಲ್ಲದೇ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Kempegowda International Airport) ಇರುವಂತಾಗಿದೆ. ಇದರಿಂದ ಬೇಸತ್ತ ಪ್ರಯಾಣಿಕರು (Passengers) ಏರ್ ಇಂಡಿಯಾ (Air india), ಏರ್ ಲೈನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು (ಜನವರಿ 17) ಮಧ್ಯಾಹ್ನ ಕೆಐಎಬಿಯಿಂದ ಸ್ಯಾನ್ ಪ್ರಾನ್ಸಿಸ್ಕೂಗೆ ತೆರಳಬೇಕಿದ್ದ AI 175 ವಿಮಾನ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಇದರಿಂದಾಗಿ ಕೋಪಗೊಂಡ 150ಕ್ಕೂ ಹೆಚ್ಚು ಪ್ರಯಾಣಿಕರು ಪ್ರತಿಭಟನೆ ಮುಂದಾಗಿದ್ದಾರೆ.

ಏರ್ ಇಂಡಿಯಾ ವಿಮಾನದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಕೊಡುತ್ತಿಲ್ಲ. ಊಟ, ತಿಂಡಿಯ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಏರ್ ಇಂಡಿಯಾ ಡೌನ್ ಡೌನ್ ಎಂದು ಕೂಗಿ, ಟರ್ಮಿನಲ್​ನ ಒಳ ಭಾಗದಲ್ಲಿ ಪ್ರಯಾಣಿಕರು ಪ್ರತಿಭಟನೆ ಮಾಡಿದ್ದಾರೆ.

ರಾಮನಗರ: ಅರಣ್ಯ ಪ್ರದೇಶದ ಬಳಿ ಶವಸಂಸ್ಕಾರಕ್ಕೆ ಅಧಿಕಾರಿಗಳ ಅಡ್ಡಿ; ರಸ್ತೆ ಮೇಲೆ ಮೃತದೇಹವಿಟ್ಟು ಆಕ್ರೋಶ

ಅರಣ್ಯ ಪ್ರದೇಶದ ಬಳಿ ಶವಸಂಸ್ಕಾರಕ್ಕೆ ಅಧಿಕಾರಿಗಳ ಅಡ್ಡಿ ಹಿನ್ನೆಲೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುಂಬಾರದೊಡ್ಡಿಯ ರಸ್ತೆಯಲ್ಲಿಯೇ ಮೃತದೇಹವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಲಕ್ಷ್ಮಮ್ಮ ಎಂಬುವವರ ಶವವಿಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸ್ಮಶಾನವಿಲ್ಲದ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕೆ ಪರದಾಟ ನಡೆಸುವಂತಾಗಿದೆ. ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದರೆ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ರಸ್ತೆ ಮೇಲೆ ಮೃತದೇಹವಿಟ್ಟು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ಪ್ರೋತ್ಸಾಹ ಧನ ಮಂಜೂರಾತಿಗೆ ಒತ್ತಾಯಿಸಿ ಪ್ರತಿಭಟನೆ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್​ಗಳು ಧರಣಿ ನಡೆಸುತ್ತಿದ್ದಾರೆ. ಪ್ರೋತ್ಸಾಹ ಧನ ಮಂಜೂರಾತಿಗೆ ಒತ್ತಾಯಿಸಿ 7 ದಿನಗಳಿಂದ ಕಪ್ಪುಪಟ್ಟಿ ಧರಿಸಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಶುಶ್ರೂಷಕರಿಗೆ ಪ್ರೋತ್ಸಾಹ ಧನ, ಅಪಾಯ ಭತ್ಯೆ ವಿಳಂಬ ಮಾಡುತ್ತಿದ್ದಾರೆ. ತಕ್ಷಣವೇ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಹಣ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Coronavirus: ಲಂಡನ್, ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 6 ಜನರಿಗೆ ಕೊರೊನಾ ಸೋಂಕು

ವಿದೇಶಗಳಿಂದ ಬೆಂಗಳೂರಿಗೆ ಇಂದು 2,634ಕ್ಕೂ ಹೆಚ್ಚು ಜನ ಆಗಮನ; ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 43 ಸಿಬ್ಬಂದಿ ನಿಯೋಜನೆ

Published On - 9:35 pm, Mon, 17 January 22