AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಪ್ರಯಾಣದ ಮಧ್ಯದಲ್ಲಿ ಕೊವಿಡ್ ಪಾಸಿಟಿವ್ ಆಗಿ ಬಾತ್​ರೂಮ್​ನಲ್ಲಿ ಐಸೋಲೇಟ್ ಆದ ಮಹಿಳೆ; ಮುಂದೇನಾಯ್ತು?

ಅಮೇರಿಕಾದ ಮಹಿಳೆಯೊಬ್ಬರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಕೊವಿಡ್ ಪಾಸಿಟಿವ್ ಆಗಿದೆ. ಬಾತ್​ರೂಮ್​ನಲ್ಲೇ ಅವರು ಐಸೋಲೇಟ್ ಆಗಿದ್ದಾರೆ. ಆಮೇಲೇನಾಯ್ತು?

ವಿಮಾನ ಪ್ರಯಾಣದ ಮಧ್ಯದಲ್ಲಿ ಕೊವಿಡ್ ಪಾಸಿಟಿವ್ ಆಗಿ ಬಾತ್​ರೂಮ್​ನಲ್ಲಿ ಐಸೋಲೇಟ್ ಆದ ಮಹಿಳೆ; ಮುಂದೇನಾಯ್ತು?
ಪ್ರಾತಿನಿಧಿಕ ಚಿತ್ರ
TV9 Web
| Updated By: shivaprasad.hs|

Updated on: Dec 31, 2021 | 2:53 PM

Share

ಅಮೇರಿಕಾದ ಮಹಿಳೆಯೊಬ್ಬರಿಗೆ ವಿಮಾನ ಪ್ರಯಾಣದ ಮಧ್ಯದಲ್ಲಿಯೇ ಕೊವಿಡ್ ಪಾಸಿಟಿವ್ ವರದಿ ಬಂದಿದೆ. ನಂತರ ಅವರು ಬಾತ್​ರೂಮ್​ನಲ್ಲೇ ಐಸೋಲೇಟ್ ಆಗಿದ್ದಾರೆ. ಮಿಚಿಗನ್​ನ ಶಿಕ್ಷಕಿಯಾಗಿರುವ ಮರಿಸಾ ಫೋಟಿಯೋ ಅವರು ಚಿಕಾಗೋದಿಂದ ಐಸ್​ಲ್ಯಾಂಡ್​ಗೆ ಡಿಸೆಂಬರ್ 19ರಂದು ಪ್ರಯಾಣಿಸುತ್ತಿದ್ದರು. ಆದರೆ ಪ್ರಯಾಣದ ಮಧ್ಯದಲ್ಲಿ ಅವರಿಗೆ ಗಂಟಲು ನೋಯಲು ಪ್ರಾರಂಭವಾಗಿದೆ. ಯಾವುದಕ್ಕೂ ಇರಲಿ ಎಂದು ಅವರು ಬಾತ್​ರೂಮ್​ಗೆ ತೆರಳಿ ರ್‍ಯಾಪಿಡ್ ಟೆಸ್ಟ್ ಮಾಡಿದ್ದಾರೆ. ಆಗ ಕೊರೊನಾ ಇರುವುದು ಖಚಿತವಾಗಿದೆ. ವಿಮಾನ ಪ್ರಯಾಣಕ್ಕೂ ಮುನ್ನ ಫೋಟಿಯೋ ಎರಡು ಪಿಸಿಆರ್ ಟೆಸ್ಟ್​ಗಳನ್ನು ಬರೋಬ್ಬರಿ ಐದು ರ್‍ಯಾಪಿಡ್ ಟೆಸ್ಟ್​ಗಳನ್ನು ನಡೆಸಿದ್ದರಂತೆ. ಎಲ್ಲದರಲ್ಲೂ ನೆಗೆಟಿವ್ ವರದಿ ಬಂದಿತ್ತಂತೆ. ನಂತರ ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ ಅವರಿಗೆ ಗಂಟಲು ಕೆರೆತ ಶುರುವಾಗಿದೆ. ಆಗ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿದೆ.

ಮುಂದೇನಾಯ್ತು? ಮರಿಸಾ ಫೋಟಿಯೋಗೆ ಸಂಪೂರ್ಣ ವ್ಯಾಕ್ಸಿನೇಷನ್ ಆಗಿದೆ. ಅಲ್ಲದೇ ಬೂಸ್ಟರ್​ ಡೋಸ್ ಅನ್ನೂ ಪಡೆದಿದ್ದಾರೆ. ಆದರೆ ಲಸಿಕೆ ಪಡೆಯದ ವ್ಯಕ್ತಿಗಳೊಂದಿಗೆ ಅವರು ಕೆಲಸ ಮಾಡಬೇಕಾಗಿತ್ತು. ಹಾಗಾಗಿ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಅಟ್ಲಾಂಟಿಕ್ ಸಾಗರದ ಮೇಲೆ ವಿಮಾನ ಹಾರುತ್ತಿರುವಾಗ ಅವರಿಗೆ ಪಾಸಿಟಿವ್ ವರದಿ ಬಂದಿದೆ. ಬಾತ್​ರೂಮ್​ನಲ್ಲಿ ಟೆಸ್ಟ್​ ಮಾಡಿಕೊಂಡಿದ್ದ ಅವರಿಗೆ ಇದ್ದಕ್ಕಿದ್ದಂತೆ ಗಾಬರಿಯಾಗಿ ಅಳಲು ಪ್ರಾರಂಭಿಸಿದರಂತೆ. ಕಾರಣ, ತುಸು ಹೊತ್ತಿಗೂ ಮುನ್ನ ಅವರು ಕುಟುಂಬದೊಂದಿಗೆ ಊಟ ಮಾಡಿದ್ದರು. ತಮ್ಮಿಂದಾಗಿ ಎಲ್ಲರಿಗೂ ಸೋಂಕು ಬರುತ್ತದೇನೋ ಎಂದು ಫೋಟಿಯೋ ಗಾಬರಿಪಟ್ಟಿದ್ದರು.

ನಂತರ ವಿಮಾನದ ಸಿಬ್ಬಂದಿಗಳು ಫೋಟಿಯೋಗೆ ಸಹಾಯ ಮಾಡಿದರು. ತಮಗೂ ಗಾಬರಿಯಾಗಿತ್ತು, ಆದರೆ ಸಹಾಯ ಮಾಡುವುದು ತಮ್ಮ ಕರ್ತವ್ಯ ಎಂದು ಸಿಬ್ಬಂದಿಗಳು ನಂತರ ಹೇಳಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಮಾನದ ಸಿಬ್ಬಂದಿಗಳು ಮರಿಸಾ ಅವರಿಗೆ ಬೇರೆ ಆಸನ ಒದಗಿಸಲು ಪ್ರಯತ್ನಿಸಿದರು. ಆದರೆ ವಿಮಾನ ಭರ್ತಿಯಾಗಿದ್ದರಿಂದ ಯಾವುದೇ ಆಸನ ದೊರಕಲಿಲ್ಲ. ಬೇರೆಯವರ ಹತ್ತಿರ ಹೋಗಿ ಸಮಸ್ಯೆ ಮಾಡಬಾರದು ಎಂಬ ಉದ್ದೇಶದಿಂದ ಬಾತ್​ರೂಮನ್​ಲ್ಲೇ ಉಳಿದುಕೊಂಡೆ ಎಂದಿದ್ದಾರೆ ಫೋಟಿಯೊ.

ಬಾತ್​ರೂಮ್ ಹೊರಗೆ ಬೋರ್ಡ್ ಒಂದನ್ನು ತೂಗುಹಾಕಲಾಗಿತ್ತಂತೆ. ಅದರಲ್ಲಿ ಔಟ್ ಆಫ್ ಸರ್ವೀಸ್’ ಎಂದು ಬರೆಯಲಾಗಿತ್ತು. ವಿಮಾನ ಪ್ರಯಾಣದ ಉಳಿದ ಅವಧಿಯಲ್ಲಿ ಫೋಟಿಯೋಗೆ ಅದೇ ಆಸನವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಅಮೇರಿಕಾದಲ್ಲಿ ಟ್ರಾವೆಲ್ ನಿಯಮಾವಳಿಗಳಿಗೆ ಕಠಿಣ ಕ್ರಮಗಳನ್ನು ಹೇರಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಐಸ್​ಲ್ಯಾಂಡ್​ ತಲುಪಿದ ನಂತರ ಏನಾಯ್ತು? ವಿಮಾನವು ಐಸ್​ಲ್ಯಾಂಡ್ ತಲುಪಿದ ನಂತರ ಫೋಟಿಯೋ ಮತ್ತು ಅವರ ಕುಟುಂಬದವರು ಕೊನೆಯವರಾಗಿ ಇಳಿದರು. ಆಕೆಯ ಸಹೋದರ ಹಾಗೂ ತಂದೆಗೆ ಯಾವುದೇ ಲ್ಷಣಗಳು ಕಂಡುಬರದ ಕಾರಣ ಅವರು ಸ್ವಿಟ್ಜರ್​ಲ್ಯಾಂಡ್​ಗೆ ಸಂಪರ್ಕ ಕಲ್ಪಿಸುವ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಫೋಟಿಯೋ ಅವರಿಗೆ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ರ್‍ಯಾಪಿಡ್ ಹಾಗೂ ಪಿಸಿಆರ್ ಟೆಸ್ಟ್ ಮಾಡಲಾಯಿತು. ಅವೆರಡರಲ್ಲೂ ಪಾಸಿಟಿವ್ ಬಂದ ಕಾರಣ ಸಮೀಪದ ಹೋಟೆಲ್​ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇಡಲಾಯಿತು.

ಡಾಕ್ಟರ್ ದಿನಕ್ಕೆ ಮೂರು ಬಾರಿ ಅವರನ್ನು ಪರೀಕ್ಷಿಸುತ್ತಿದ್ದರು. ವಿಮಾನದಲ್ಲಿ ಗಾಬರಿಯಾಗಿತ್ತು. ಆದರೆ ನಂತರದಲ್ಲಿ ಅಷ್ಟೇನೂ ಕಷ್ಟವಾಗಲಿಲ್ಲ. ವಿಮಾನದ ಸಿಬ್ಬಂದಿಗಳು ಹಾಗೂ ಐಸ್​​ಲ್ಯಾಂಡ್​ನ ಜನರು ಬಹಳ ಅನುಕಂಪ ಹೊಂದಿರುವ ಜನರು ಎಂದು ಫೋಟಿಯೋ ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Amit Shah in Ayodhya ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ಹೊಸ ವರ್ಷದ ಪಾರ್ಟಿ ಮಾಡಬೇಕಾ?; ಸಂಜೆ 6ರಿಂದ ಬೆಂಗಳೂರಿನ ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲದ ರಸ್ತೆ ಬಂದ್