ತುಮಕೂರು: ದೇವರ ಉತ್ಸವ ನೋಡುತ್ತಿದ್ದವರ ಮೇಲೆ ನುಗ್ಗಿದ ಗೂಡ್ಸ್ ಆಟೋ; ಒಬ್ಬರ ಸಾವು, ನಾಲ್ವರ ಸ್ಥಿತಿ ಗಂಭೀರ
ದೊಡ್ಡಮ್ಮ, ನರಸಮ್ಮ, ಕುಮಾರ್ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಆಟೋ ಡ್ರೈವರ್ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಮಕೂರು: ದೇವರ ಉತ್ಸವ ನೋಡುತ್ತಿದ್ದವರ ಮೇಲೆ ಗೂಡ್ಸ್ ಆಟೋ ನುಗ್ಗಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ದಾಪುರ ಗೇಟ್ನಲ್ಲಿ ಶನಿವಾರ ನಡೆದಿದೆ. ಆಟೋ ನುಗ್ಗಿದ ರಭಸಕ್ಕೆ ಓರ್ವ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಗೇಟ್ನಲ್ಲಿ ಮಣ್ಣಮ್ಮ ದೇವರ ಉತ್ಸವ ನಡೆಯುತ್ತಿತ್ತು. ದೇವರ ಉತ್ಸವ ನೋಡುತ್ತಿದ್ದ ಗಂಗಾಧರ್ (40) ದುರ್ಮರಣವನ್ನಪ್ಪಿದ್ದಾರೆ.
ದೊಡ್ಡಮ್ಮ, ನರಸಮ್ಮ, ಕುಮಾರ್ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಆಟೋ ಡ್ರೈವರ್ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿ: ಚೀಟಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಸೆರೆ
ಚೀಟಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಸೆರೆ ಹಿಡಿಯಲಾಗಿದೆ. ಹುಬ್ಬಳ್ಳಿಯ ಗೋಕುಲ್ರೋಡ್ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಮಂಡ್ಯಕ್ಕೆ ಓಡಿಹೋಗಿದ್ದ ವಂಚಕ ರಮೇಶ್ ನಾಗಾಲೋಟಿ ಸೆರೆ ಹಿಡಿಯಲಾಗಿದೆ. ಚೀಟಿ ಹೆಸರಿನಲ್ಲಿ ಮಹಿಳೆಯರಿಂದ ಹಣ ಸಂಗ್ರಹಿಸಿದ ರಮೇಶ್, ಕೆಲವರಿಂದ ಸಾಲವಾಗಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದ. ಹಣ ಕಳೆದುಕೊಂಡ ಮಹಿಳೆಯರು ಠಾಣೆಗೆ ದೂರು ನೀಡಿದ್ದರು. ಇದೀಗ ಗೋಕುಲ್ರೋಡ್ ಪೊಲೀಸರಿಂದ ರಮೇಶ್ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇತರ ಅಪರಾಧ ಸುದ್ದಿಗಳು
ಮೈಸೂರು: ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಆಗಿ ಸ್ಕೂಟರ್ ಸವಾರ ದುರ್ಮರಣವನ್ನಪ್ಪಿದ ಘಟನೆ ಬಂಚಳ್ಳಿಹುಂಡಿಯ ನಂಜುಂಡೇಶ್ವರ ದೇವಸ್ಥಾನದ ಬಳಿ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಂಚಳ್ಳಿಹುಂಡಿಯಲ್ಲಿ ನಂದಗುಂದ ಗ್ರಾಮದ ಬೈಕ್ ಸವಾರ ಸುರೇಶ್ (40) ಮೃತಪಟ್ಟಿದ್ದಾರೆ.
ಕಲಬುರಗಿ: ಆಳಂದ, ಅಫಜಲಪುರ ತಾಲೂಕಿನ ವಿವಿಧೆಡೆ ಟ್ರಾನ್ಸ್ಫಾರ್ಮರ್ಗಳಲ್ಲಿ ಆಯಿಲ್ ಕದಿಯುತ್ತಿದ್ದ ವಿಜಯ್ ಪವಾರ್, ಚೋಟು ಕಾಳೆ, ಪರಮೇಶ್ವರ ಹೂಗಾರನನ್ನು ನರೋಣಾ ಠಾಣೆ ಪೋಲಿಸರು ಬಂಧಿಸಿದ್ದಾರೆ. 8 ಕ್ಯಾನ್ ಆಯಿಲ್, ಸಾಗಣೆಗೆ ಬಳಸುತ್ತಿದ್ದ ಜೀಪ್ ಜಪ್ತಿ ಮಾಡಲಾಗಿದೆ.
ರಾಯಚೂರು: ಇಲ್ಲಿನ ತಿಮ್ಮಾಪುರಪೇಟೆಯಲ್ಲಿ ಜೆಸ್ಕಾಂ ಜಾಗೃತ ದಳದ ಪಿಎಸ್ಐ ಲಕ್ಷ್ಮೀ ಮನೆಯಲ್ಲಿ 80 ಗ್ರಾಂ ಚಿನ್ನಾಭರಣ, 15 ಸಾವಿರ ನಗದು ಕಳ್ಳತನ ಮಾಡಲಾಗಿದೆ.
ಬೀದರ್: ಹುಮ್ನಾಬಾದ್ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ ಮೇಲೆ ಹಲ್ಲೆ ಮಾಡಿದ್ದ ಬಿಎಸ್ಪಿ ಮುಖಂಡ ಅಂಕುಶ್ ಗೋಖಲೆ, ಜಮೀರ್ ಖಾನ್, ರಾಜಕುಮಾರ ಶಿಂಧೆ, ದೇವೇಂದ್ರ ಗೌತಮ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ