ಕಾಂಗ್ರೆಸ್ ಶಾಸಕ ಡಾ. ರಂಗನಾಥ್
ಮೊಬೈಲ್ ನೋಡಿಕೊಂಡು ಬಸ್ ಚಲಾಯಿಸಿದ ಚಾಲಕ
ಮೊಬೈಲ್ ನೋಡಿಕೊಂಡು ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ ಓಡಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಜೊತೆಗೆ ಡ್ರೈವರ್ ಮೊಬೈಲ್ನಲ್ಲಿ ಮಾತನಾಡುತ್ತಿದ್ದನ್ನು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. KA27F0777 ನಂಬರ್ನ ಕೆಎಸ್ಆರ್ಟಿಸಿ ಬಸ್ ಇದಾಗಿದ್ದು ಬೆಂಗಳೂರಿನಿಂದ ತುಮಕೂರು, ಶಿರಾ ಮಾರ್ಗವಾಗಿ ಹಾನಗಲ್ ಗೆ ಹೊಗುತ್ತಿತ್ತು. ಈ ವೇಳೆ ಘಟನೆ ನಡೆದಿದೆ.
ಬಸ್ನಲ್ಲಿ ಪ್ರಯಾಣಮಾಡುತ್ತಿದ್ದ ಮಹದೇವ ಎಂಬುವವರ ಮೊಬೈಲ್ನಲ್ಲಿ ಚಾಲಕನ ಅಜಾಗ್ರತೆಯ ದೃಶ್ಯ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋ ನೋಡಿದ ಸಾಕಷ್ಟು ಮಂದಿ ಪ್ರಯಾಣಿಕರ ಜೀವದ ಜೊತೆ ಚಾಲಕ ಚೆಲ್ಲಾಟವಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಪ್ರಯಾಣಿಕ ಮಹದೇವ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ತುಮಕೂರು ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು
ಇನ್ನು ಮತ್ತೊಂದೆಡೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹಾ ಎಡವಟ್ಟು ನಡೆದಿದೆ. 2021ರ ಜುಲೈ 16ರಂದು ಮೃತಪಟ್ಟಿರುವ ಮೇಳೆಕೋಟೆಯ ಬಸಪ್ಪ(80) 2ನೇ ಡೋಸ್ ಕೊವಿಡ್ ಲಸಿಕೆ ಪಡೆದಿರುವುದಾಗಿ ಆರೋಗ್ಯ ಇಲಾಖೆಯಿಂದ ಸಂದೇಶ ಬಂದಿದೆ. ನಿನ್ನೆ ಕೊವಿಡ್ ಲಸಿಕೆ ಪಡೆದಿರುವುದಾಗಿ ಆರೋಗ್ಯ ಇಲಾಖೆ ಸರ್ಟಿಫಿಕೆಟ್ ಬಂದಿದೆ. ಮೃತನ ಲಸಿಕೆ ಸರ್ಟಿಫಿಕೆಟ್ ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. 6 ತಿಂಗಳ ಹಿಂದೆ ಮೃತಪಟ್ಟಿರುವ ವೃದ್ಧನಿಗೆ ಕೊರೊನಾ ಲಸಿಕೆ ಪಡೆದಿರುವುದಾಗಿ ಆರೋಗ್ಯ ಇಲಾಖೆಯಿಂದ ಸಂದೇಶ ಬಂದಿದೆ. ಆದ್ರೆ 2021ರ ಜುಲೈ 16ರಂದು ಬಸಪ್ಪ(80) ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್