ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್

ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನನ್ನದು 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು.

ಮಂಡ್ಯ ಲೋಕಸಭಾ ಉಪಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್
ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ
Follow us
TV9 Web
| Updated By: sandhya thejappa

Updated on: Jan 30, 2022 | 9:25 AM

ಮಂಡ್ಯ: ಲೋಕಸಭಾ ಉಪಚುನಾವಣೆಗೆ 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ ಎಂಬ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ (L R Shivarame Gowda) ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ (Viral Audio) ಆಗಿದ್ದು, ವೈರಲ್ ಆದ ಆಡಿಯೋದಲ್ಲಿ ಜೆಡಿಎಸ್ (JDS) ಮಹಿಳೆ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಎಲ್ಸಿ ಚುನಾವಣೆಗೆ 27 ಕೋಟಿ ಖರ್ಚು ಮಾಡಿದ್ದೆ. ಐದು ತಿಂಗಳಿಗೆ ಎಂಪಿ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ. ಮುಂದಿನ ನಾಗಮಂಗಲ ವಿಧಾನಸಭ ಚುನಾವಣೆಗೆ 30 ಕೋಟಿ ಖರ್ಚು ಮಾಡುತ್ತೇನೆ ಎಂದು ಮಾತನಾಡಿದ 37 ನಿಮಿಷ 54 ಸೆಂಕೆಡ್ ಆಡಿಯೋ ವೈರಲ್ ಆಗಿದೆ.

ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನನ್ನದು 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಎಲ್ಆರ್ ಶಿವರಾಮೇಗೌಡ, ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ನಾಗಮಂಗಲ ಜೆಡಿಎಸ್ ಟಿಕೆಟ್ ಮೇಲೆ ಶಿವರಾಮೇಗೌಡ ಕಣ್ಣಿಟ್ಟಿದ್ದಾರೆ. ನಾಗಮಂಗಲದ ಜೆಡಿಎಸ್ ಶಾಸಕರ ವಿರುದ್ಧವೂ ಆಡಿಯೋದಲ್ಲಿ ಚರ್ಚೆ ಮಾಡಿದ್ದಾರೆ. ನಾನು ಎರಡು ಸಲ ಎಂಎಲ್ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತನಂತ ಕೆಲಸ ಮಾಡಬಹುದು. ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ್ದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದರೂ, ನನಗುಗೂ ಕಂಟಕ ತಂದರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲಕೊಡಿ ಎಂದು ಮಾತನಾಡಿರುವುದು ವೈರಲ್ ಆದ ಆಡಿಯೋದಲ್ಲಿದೆ.

ಇದೇ ಆಡಿಯೋದಲ್ಲಿ ಮಾಜಿ ಸಂಸದ ಜಿ ಮಾದೇಗೌಡರ ಬಗ್ಗೆಯೂ ಚರ್ಚೆ ನಡೆದಿದೆ. ಐದು ಬಾರಿ ಕಾಂಗ್ರೆಸ್ನಿಂದ ನಿಂತು ಸೋತಿದ್ದೇನೆ. ಎಲ್ಲವೂ ಕಡಿಮೆ ಅಂತರದಿಂದ ಸೋತಿದ್ದು. ಜಿ ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ. ಜಿ. ಮಾದೇಗೌಡರು ಆಗ ಸಂಸದರಾಗಿದ್ದರು. ಅದರಿಂದಲೆ ಜಿ ಮಾದೇಗೌಡರ ವಿರೋಧದಿಂದ ಸೋತೆ ಎಂದು ಮಾತನಾಡಿದ್ದಾರೆ. ಇನ್ನು ಆಡಿಯೋದಲ್ಲಿ ನಾಗಮಂಗಲ ಎಂಎಲ್ಎ ಸುರೇಶ್ ಗೌಡ ಪರವಾಗಿ ಮಹಿಳೆ ಮಾತನಾಡಿದ್ದಾರೆ.

ಇದನ್ನೂ ಓದಿ

ಪರವಿರೋಧ ಚರ್ಚೆ, ವಾಗ್ದಾಳಿ ನಡುವೆ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ಸಿದ್ಧತೆ, ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ ಸಂಗನಬಸವಶ್ರೀ

ಹಾಲಿನಲ್ಲಿರುವಷ್ಟೇ ಕ್ಯಾಲ್ಸಿಯಂ ಎಲೆಕೋಸಿನಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ಗಮನಿಸಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್