ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಡುಗೆ ಅನಿಲ ಕೊಳವೆ ಮಾರ್ಗ ಅಳವಡಿಸುವ ವಿಷಯದಲ್ಲಿ ಸ್ವಪಕ್ಷೀಯರಿಂದ ಟೀಕೆಗೆ ಒಳಗಾಗಿರುವ ಮೈಸೂರು-ಕೊಡಗು ಸಂಸದೀಯ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ (Pratap simha) ಮೈಸೂರಿನ ಶಾಸಕರಿಗೆ ಸಿಂಹ ಸವಾಲು ಹಾಕಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ತಮ್ಮಕ್ಷೇತ್ರದಲ್ಲಿ ಬೆಳವಣಿಗೆಗಳು, ಅಭಿವೃದ್ಧಿ ಕಾರ್ಯಗಳ ಅಗಲಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು..! ಎಂದು ಘಂಟಾಘೋಷವಾಗಿ ಹೇಳಿರುವ ಸಂಸದ ಪ್ರತಾಪ್ ಸಿಂಹ, ಮೈಸೂರು ಮಹಾರಾಜರನ್ನು (mysore wadeyar) ಬಿಟ್ಟರೆ ನೆಕ್ಟ್ ನಾನೇ ಎಂದು ಘೋಷಿಸಿಕೊಂಡಿದ್ದಾರೆ.
ಮಹಾರಾಜರ ನಂತರ ಅತಿಹೆಚ್ಚು ಲೀಡ್‌ನಲ್ಲಿ ಗೆದ್ದಿರೋದು ನಾನು. ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರೋದು. ಶಾಸಕ ಎಲ್. ನಾಗೇಂದ್ರ ಅಭಿವೃದ್ಧಿ ಹರಿಕಾರ ಅನ್ನುವ ಭ್ರಮೆಯಲ್ಲಿದ್ದಾರೆ. 30 ಕೋಟಿ ರೂ. ಅನುದಾನ ತಂದಿಲ್ಲ. 300 ಕೋಟಿ ರೂ. ಕೆಲಸ ಅಂತ ಹೇಳುತ್ತಾರೆ. ಎಲ್ಲಿದೆ 300 ಕೋಟಿ ? ಯಾವ ರಸ್ತೆ ಮಾಡಿದ್ದೀರಿ ಅಂತಾ ತೋರಿಸಿ. ಚಾಮರಾಜ ಕ್ಷೇತ್ರದ ಕೆ.ಆರ್. ಆಸ್ಪತ್ರೆಯಲ್ಲಿ ಸೊಳ್ಳೆ, ನಾಯಿ ಕಾಟ ಇದೆ. ನಿಮ್ಮ ಕ್ಷೇತ್ರದ ವಿಜಯನಗರದಲ್ಲಿ ವಾಟರ್ ಟ್ಯಾಂಕ್ ಹಾಕಿಸಿದ್ದು ನಾನು. ಪಾಸ್ ಪೊರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನು. ಶಾಸಕರು ಗೋವಾಕ್ಕೆ ಹೋಗುವ ಫ್ಲೈಟ್ ತಂದಿದ್ದು ನಾನು. ಬೆಂಗಳೂರು- ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು. ಕೆ.ಆರ್. ಕ್ಷೇತ್ರದ ಕಸದ ಸಮಸ್ಯೆ ನಿವಾರಿಸಿದ್ದು ನಾನು. ಶಾಸಕರು ರಿಯಲ್ ಎಸ್ಟೇಟ್ ಮಾಡಲಿ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಹರಿಯಬಿಟ್ಟಿದ್ದಾರೆ.
ಯೋಜನೆ ರದ್ದು ಮಾಡುವಂತೆ ಪ್ರಧಾನಿಗೆ ಪತ್ರ ಬರೆಯಲಿ -ನಾಗೇಂದ್ರ-ರಾಮದಾಸ್ ಜೋಡಿಗೆ ಪ್ರತಾಪ್ ಸಿಂಹ ಸಲಹೆ:
ದಾರಿ ತಪ್ಪಿಸುವುದು, ಏನೇನೋ ಮಾತನಾಡುವುದು ಬೇಡ. ಪಾಲಿಕೆಯಲ್ಲಿ ಚರ್ಚೆಗೆ ಬಂದಿದ್ದರೆ ಎಲ್ಲ ಮಾಹಿತಿ ನೀಡುತ್ತಿದ್ದೆ ಎಂದಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸುಮ್ಮನೆ ಮಾತಾಡಿದರೆ ಉಗುಳು ಇರುತ್ತದೆ, ವಿಷಯ ಇರಲ್ಲ ಎಂದು ಕಟಕಿಯಾಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ಮೋದಿಗಿಂತ ನಾಗೇಂದ್ರ, ರಾಮದಾಸ್ ಅನುಭವಿಗಳು. ಇವರಿಬ್ಬರೂ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಿ. ಯೋಜನೆ ಸರಿಯಿಲ್ಲ, ನಾವು ನಿಮಗಿಂತ ಹಿರಿಯರೆಂದು ಹೇಳಲಿ. ಯೋಜನೆ ರದ್ದು ಮಾಡುವಂತೆ ಪ್ರಧಾನಿಗೆ ಪತ್ರ ಬರೆಯಲಿ ಎಂದು ತಮ್ಮ ವಿರುದ್ಧ ಸಿಡಿದೆದ್ದಿರುವ ನಾಗೇಂದ್ರ ಮತ್ತು ರಾಮದಾಸ್ಗೆ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.
Mysore MP Pratap Simha PressMeet | ಮೈಸೂರಿನಲ್ಲಿ ಸಂಸದ ಪ್ರತಾಪ್ಸಿಂಹ ಸುದ್ದಿಗೋಷ್ಠಿ
ಇದನ್ನೂ ಓದಿ:
Gas Pipeline: ಮೈಸೂರಲ್ಲಿ ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ: ಗ್ಯಾಸ್ ಸಂಪರ್ಕ ವಿಚಾರದಲ್ಲಿ ಹಗ್ಗಜಗ್ಗಾಟ
ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್: ಕೊನೆಗೆ ಜಮೀರ್ ಅಹ್ಮದ್ರನ್ನ ತಮ್ಮ ಡೆಪ್ಯುಟಿ ಮಾಡಲು ದುಂಬಾಲು