AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರವಿರೋಧ ಚರ್ಚೆ, ವಾಗ್ದಾಳಿ ನಡುವೆ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ಸಿದ್ಧತೆ, ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ ಸಂಗನಬಸವಶ್ರೀ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದಲ್ಲಿ 3ನೇ ಪೀಠ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜೆಸಿಬಿ, ಟ್ರ್ಯಾಕ್ಟರ್‌ ಮೂಲಕ ಜಾಗ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಸಂಗನಬಸವಶ್ರೀ, ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ.

ಪರವಿರೋಧ ಚರ್ಚೆ, ವಾಗ್ದಾಳಿ ನಡುವೆ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ಸಿದ್ಧತೆ, ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ ಸಂಗನಬಸವಶ್ರೀ
ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ ಸಂಗನಬಸವಶ್ರೀ
TV9 Web
| Edited By: |

Updated on: Jan 30, 2022 | 7:33 AM

Share

ಬಾಗಲಕೋಟೆ: ಪಂಚಮಸಾಲಿ ಸಮುದಾಯದ (panchamasali Lingayat) 3ನೇ ಗುರುಪೀಠ ಸ್ಥಾಪನೆಗೆ ದಿನಾಂಕ ನಿಗದಿಯಾಗಿದೆ. ಮುಂದಿನ ತಿಂಗಳು ಅಂದರೆ ಫೆಬ್ರುವರಿ 14ರಂದು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಯಾಗಲಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸ ಪರವಿರೋಧ ಚರ್ಚೆ, ವಾಗ್ದಾಳಿ ನಡುವೆ ಪೀಠ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದಲ್ಲಿ 3ನೇ ಪೀಠ ಸ್ಥಾಪನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಜೆಸಿಬಿ, ಟ್ರ್ಯಾಕ್ಟರ್‌ ಮೂಲಕ ಜಾಗ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಸಂಗನಬಸವಶ್ರೀ, ಜಾಗ ಸ್ವಚ್ಛಗೊಳಿಸಲು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ. ಸ್ವಾಮೀಜಿಗಳು ಕಸಕಂಟಿ, ಕಲ್ಲು ಸ್ವತಃ ತೆಗೆದು ಹಾಕುತ್ತಿದ್ದಾರೆ. 3ನೇ ಪೀಠಕ್ಕೆ ಪಣತೊಟ್ಟ ಪಂಚಮಸಾಲಿ ಸ್ವಾಮೀಜಿ ಒಕ್ಕೂಟ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಲ್ಲಿ ಫೆಬ್ರವರಿ 14ರಂದು 3ನೇ ಪೀಠದ ಸ್ವಾಮೀಜಿ ಪಟ್ಟಾಧಿಕಾರ ನಡೆಸಲಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದ ಬೃಹನ್ಮಠದ ಮಹದೇವ ಶಿವಾಚಾರ್ಯ ಶ್ರೀಗಳಿಗೆ ಪಟ್ಟಾಧಿಕಾರ ನೀಡಲಾಗುತ್ತೆ.

ಇನ್ನು ಪಂಚಮಸಾಲಿ ಒಕ್ಕೂಟದ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದು, ಪೆಬ್ರುವರಿ 14ಕ್ಕೆ ವೀರಶೈವ ಲಿಂಗಾಯ ಪಂಚಮಸಾಲಿ ಜಗದ್ಗುರು ಪೀಠದ ಹೆಸರಲ್ಲಿ ಪಟ್ಟಾಧಿಕಾರ ನಡೆಯಲಿದೆ. ಕಾರ್ಯಕ್ರಮಕ್ಕೆ ಬರುವಂತೆ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಚಿವ ನಿರಾಣಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲಾ ಪಕ್ಷದ ನಾಯಕರಿಗೂ ಆಹ್ವಾನ ನೀಡುತ್ತೇವೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರಿಗೂ ಆಹ್ವಾನ ನೀಡುತ್ತೇವೆ. ಅವರು ವಿರೋಧ ಮಾಡಿದರೂ ನಮ್ಮ ಆತ್ಮೀಯರು. ಆದ್ದರಿಂದ ಅವರಿಗೂ ಆಹ್ವಾನ ನೀಡುತ್ತೇವೆ. ಮೂರನೇ ಪೀಠ ನಮ್ಮ ಪೀಠ ಅಂತ ತಿಳಿದುಕೊಂಡು ಅವರು ಬರಬೇಕು. ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ವಿವಿಧ ಸಮುದಾಯದ 150ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಜರಿರುತ್ತಾರೆ ಎಂದು ತಿಳಿಸಿದ್ದಾರೆ.

ಮೂರನೇ ಪೀಠ ನಿರಾಣಿ ಅವರದ್ದು ಎಂದ ಯತ್ನಾಳ್ ಗೆ ಸಂಗನಬಸವ ಸ್ವಾಮೀಜಿ ತಿರುಗೇಟು ಕೊಟ್ಟಿದ್ದಾರೆ. ಇದು ನಿರಾಣಿ ಅವರ ಪೀಠವಲ್ಲ. ಇದು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ಪೀಠ. ಯಾಕೆ ಯತ್ನಾಳ್ ಹಾಗೂ ಬಸವಜಯಮೃತ್ಯುಂಜಯ ಸ್ವಾಮೀಜಿ ನಿರಾಣಿ ಬಗ್ಗೆ ಮಾತಾಡುತ್ತಾರೊ ಗೊತ್ತಿಲ್ಲ. ಮುರುಗೇಶ್ ನಿರಾಣಿ ಅವರ ಮೇಲೆ ಯಾಕೆ ಆಪಾದನೆ ಮಾಡುತ್ತೀರಿ. ಮುರುಗೇಶ್ ನಿರಾಣಿ ಯಾವ ಸಮಾಜಕ್ಕೆ ದ್ರೋಹ ಮಾಡಿದಾರೆ. ಅವರು ಎಲ್ಲ ಸಮಾಜದ ಪೂಜ್ಯರನ್ನು ಗೌರವದಿಂದ ಕಾಣುವ ಅಪರೂಪದ ವ್ಯಕ್ತಿ. ನಮ್ಮ ಸಮಾಜ ಕೃಷಿಯನ್ನು ಅವಲಂಭಿಸಿದ ಸಮಾಜ. ನಮ್ಮ ಸಮಾಜ ಯಾವ ರೀತಿ ಮುಂದೆ ಬರಬೇಕು ಅನ್ನೋದನ್ನು ನಿರಾಣಿ ಅವರನ್ನು ನೋಡಿ ಕಲಿಯಬೇಕು. ನಿರಾಣಿ ಅವರ ಪ್ರಯತ್ನ ಇರಬಹುದು. ಅವರ ಮೇಲೆ ಸುಳ್ಳು ಆರೋಪ ಮಾಡಬಾರದು. ಮೂರನೇ ಪೀಠ ಮೂರಾಬಟ್ಟೆಯಾಗೋದಿಲ್ಲ. ಮೂರನೇ ಪೀಠವನ್ನು ಯಶಸ್ವಿ ಮಾಡಿ ತೋರಿಸುತ್ತೇವೆ ಎಂದಿದ್ದಾರೆ.

Lingayat Panchamasali Third Peeta preparation 1

ಪರವಿರೋಧ ಚರ್ಚೆ, ವಾಗ್ದಾಳಿ ನಡುವೆ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ಸಿದ್ಧತೆ

ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಮೂರನೇ ಪೀಠ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮೂರನೇ ಪೀಠ ಸ್ಥಾಪನೆ ವಿಚಾರವನ್ನು ಬಹಿರಂಗಪಡಿಸುತ್ತಿದ್ದಂತೆ ಪರ ವಿರೋಧ ಹೇಳಿಕೆಗಳು ಕೇಳಿ ಬಂದಿದ್ದವು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ಇತರೆ ರಾಜಕಾರಣಿಗಳು ಪರ ವಿರೋಧ ಹೇಳಿಕೆಗಳನ್ನು ನೀಡಿದರು. ಇದರ ಮದ್ಯೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ನಮ್ಮ ಮೂರನೇ ಪೀಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಮೂರು ಪೀಠ ಮಾತ್ರವಲ್ಲ ಐದು ಪೀಠಗಳಾದರೂ ನಮ್ಮ ಅಭ್ಯಂತರವಿಲ್ಲ ಅಂತ ಹೇಳಿದೆ. ಆದರೆ ಸದ್ಯ ಆರೋಪ ಪ್ರತ್ಯಾರೋಪಗಳು ಮಾತ್ರ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

ಇದನ್ನೂ ಓದಿ: ಪಂಚಮಸಾಲಿ ಸಮಾಜದ 3ನೇ ಪೀಠದ ಕುರಿತು ಸ್ಫೋಟಕ ಹೇಳಿಕೆ ನೀಡಿದ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು