ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ದಿನಾಂಕ ನಿಗದಿ: ಫೆ 14ಕ್ಕೆ ಗುರುಪೀಠಾರೋಹಣ

ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ದಿನಾಂಕ ನಿಗದಿ: ಫೆ 14ಕ್ಕೆ ಗುರುಪೀಠಾರೋಹಣ
ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ

ಫೆಬ್ರುವರಿ 14ರಂದು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಯಾಗಲಿದೆ. ವಚನಾನಂದಶ್ರೀಗಳ ಸಾನ್ನಿಧ್ಯದಲ್ಲಿ ಅಲಗೂರು ಗ್ರಾಮದಲ್ಲಿ 3ನೇ ಗುರುಪೀಠಾರೋಹಣ ಕಾರ್ಯಕ್ರಮಗಳು ನಡೆಯಲಿವೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 25, 2022 | 10:01 PM

ಬಾಗಲಕೋಟೆ: ಪಂಚಮಸಾಲಿ ಸಮಾಜದ (panchamasali Lingayat) 3ನೇ ಗುರುಪೀಠ ಸ್ಥಾಪನೆಗೆ ದಿನಾಂಕ ನಿಗದಿಯಾಗಿದೆ. ಮುಂದಿನ ತಿಂಗಳು ಅಂದರೆ ಫೆಬ್ರುವರಿ 14ರಂದು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಯಾಗಲಿದೆ. ವಚನಾನಂದಶ್ರೀಗಳ ಸಾನ್ನಿಧ್ಯದಲ್ಲಿ ಅಲಗೂರು ಗ್ರಾಮದಲ್ಲಿ 3ನೇ ಗುರುಪೀಠಾರೋಹಣ ಕಾರ್ಯಕ್ರಮಗಳು ನಡೆಯಲಿವೆ. ಪೀಠಾಧಿಪತಿಗಳಾಗಿ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠಕ್ಕೆ ಮೂರನೇ ಗುರುಪೀಠದ ಸಂಘಟಕರು ಆಗಮಿಸಿದ್ದಾರೆ.

ಮೂರನೇ ಪೀಠ ಸ್ಥಾಪನೆಗೆ ಸ್ವಾಗತ ಕೋರಿದ ಮಠಾಧೀಶರರು ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆ‌ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಭೆ ಈಚೆಗೆ ನಡೆಯಿತು. ಹುಬ್ಬಳ್ಳಿಯ ನೀಲಕಂಠ ಅಸೂಟಿ ನಿವಾಸದಲ್ಲಿ ನಡೆದ ಸಭೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸ್ಥಾಪನೆಯಾಗುವುದಕ್ಕೆ ವಿವಿಧ ಮಠಾಧೀಶರು ಸ್ವಾಗತ ಕೋರಿದರು. ಬಂಡಿವಾಡ ವಿರಕ್ತಮಠದ ರೇವಣಸಿದ್ದೇಶ್ವರ ಮಹಾಸ್ವಾಮಿ, ಮನಗೂಳಿಯ ಹಿರೇಮಠದ ಶ್ರೀ ಸಂಗನಬಸವ ಮಹಾಸ್ವಾಮಿ, ಕುಚನೂರಿನ ಸಿದ್ಧಲಿಂಗ ಮಹಾಸ್ವಾಮಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು.

ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಮೂರನೇ ಪೀಠ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮೂರನೇ ಪೀಠ ಸ್ಥಾಪನೆ ವಿಚಾರವನ್ನು ಬಹಿರಂಗಪಡಿಸುತ್ತಿದ್ದಂತೆ ಪರ ವಿರೋಧ ಹೇಳಿಕೆಗಳು ಕೇಳಿ ಬಂದಿದ್ದವು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ಇತರೆ ರಾಜಕಾರಣಿಗಳು ಪರ ವಿರೋಧ ಹೇಳಿಕೆಗಳನ್ನು ನೀಡಿದರು. ಇದರ ಮದ್ಯೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ನಮ್ಮ ಮೂರನೇ ಪೀಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಮೂರು ಪೀಠ ಮಾತ್ರವಲ್ಲ ಐದು ಪೀಠಗಳಾದರೂ ನಮ್ಮ ಅಭ್ಯಂತರವಿಲ್ಲ ಅಂತ ಹೇಳಿದೆ. ಆದರೆ ಸದ್ಯ ಆರೋಪ ಪ್ರತ್ಯಾರೋಪಗಳು ಮಾತ್ರ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

ಮೂರನೇ ಪೀಠಾಧಿಪತಿಯಾಗಿ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪ್ರಸ್ತುತ ಅಸ್ತಿತ್ವದಲ್ಲಿರುವ ಎರಡು ಪೀಠಗಳ ಹೊರತಾಗಿಯೂ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಮುಂಬರುವ ಫೆಬ್ರವರಿ 14 ಕ್ಕೆ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದ ಪಂಚಮಸಾಲಿ ಸಮುದಾಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಮಖಂಡಿ (ಆಲಗೂರ) ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಏರಲಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವರಾದ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಸದ್ಯ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಪೀಠಾಧಿಪತಿಯಾಗಿದ್ದಾರೆ. ಈ ಮಠದ ಉಸ್ತುವಾರಿ ಜೊತೆಗೆ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಗಳಾಗಿದ್ದಾರೆ.

ಇದನ್ನೂ ಓದಿ: ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿ ಜಿ.ಪಿ.ಪಾಟೀಲ್ ಆಯ್ಕೆ: ಪ್ರತಿಧ್ವನಿಸಿದ 2ಎ ಮೀಸಲಾತಿ ಆಗ್ರಹ ಇದನ್ನೂ ಓದಿ: ಶೀಘ್ರದಲ್ಲೇ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಸ್ಥಾಪನೆ; ಪೀಠಾಧಿಪತಿಯಾಗಿ ಗದ್ದುಗೆ ಏರಲಿರುವ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ

Follow us on

Most Read Stories

Click on your DTH Provider to Add TV9 Kannada