ಪಂಚಮಸಾಲಿ ಸಮಾಜದ 3ನೇ ಪೀಠದ ಕುರಿತು ಸ್ಫೋಟಕ ಹೇಳಿಕೆ ನೀಡಿದ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ

ಪಂಚಮಸಾಲಿ ಸ್ವಾಮೀಜಿಗಳ ಮಧ್ಯೆ ಬಿರುಕು ಮೂಡಿದ್ದು,ಶೀತಲ ಸಮರ ಶುರುವಾಗಿದೆ.ಎರಡು ಪೀಠಗಳಿಗೆ ಸದ್ದಿಲ್ಲದೆ ಮುಂದಿನ ದಿನಗಳಲ್ಲಿ ಪರ್ಯಾಯ ಪೀಠ ಉದ್ಭವಿಸಿದರೂ ಅಚ್ಚರಿಯಿಲ್ಲ.

ಪಂಚಮಸಾಲಿ ಸಮಾಜದ 3ನೇ ಪೀಠದ ಕುರಿತು ಸ್ಫೋಟಕ ಹೇಳಿಕೆ ನೀಡಿದ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ
3ನೆ ಪೀಠದ ಸುಳಿವು ನೀಡಿದ ಸ್ವಾಮೀಜಿಗಳು
Follow us
TV9 Web
| Updated By: guruganesh bhat

Updated on:Sep 01, 2021 | 5:33 PM

ಬಾಗಲಕೋಟೆ: ಮುಂದಿನ ದಿನಮಾನಗಳಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ ನಿರ್ಮಾಣವಾಗಬಹುದು. ಈಗಾಗಲೇ ಒಂಬತ್ತು ಜಿಲ್ಲೆಗಳಲ್ಲಿ ಸಂಘಟನೆ ಆರಂಭವಾಗಿದೆ. ಜನರ ಒತ್ತಡ ಬಂದರೆ ಪರ್ಯಾಯ ಪೀಠ ರಚನೆ ಖಚಿತ. ಮುಂದಿನ‌ ದಿನಮಾನಗಳಲ್ಲಿ ಏನು‌ ಬೇಕಾದ್ರೂ ಆಗಬಹುದು ಎಂದು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಸಂಗನ ಬಸವಶ್ರೀ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಪಂಚಮಸಾಲಿ ಪರ್ಯಾಯ ಒಕ್ಕೂಟದ ಸ್ವಾಮೀಜಿಗಳು ನಡೆಸಿದ ಸಭೆಯ ನಂತರ ಅವರು ಈ ಸ್ಫೋಟಕ ಹೇಳಿಕೆ ನೀಡಿದರು.

ಪಂಚಮಸಾಲಿ ಸಮಾಜದ ಮನಗೂಳಿಯ ಮೊದಲನೇ ಶ್ರೀಗಳಾದ ಮಹಾಂತ ಶಿವಾಚಾರ್ಯರು ಪಂಚಮಸಾಲಿ ಸಮಾಜದ ಐದು‌ಪೀಠಗಳಾದ್ರೆ ತಪ್ಪೇನಿದೆ ಅಂತಿದ್ದರು.ಈಗಾಗಲೇ ಕೂಡಲಸಂಗನದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹಾಗೂ ಹರಿಹರಪೀಠದ ಶ್ರೀಗಳು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದ ಸಂಗನ ಬಸವ ಸ್ವಾಮೀಜಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ‌ರು.

ಪಂಚಮಸಾಲಿ 3ನೇ ಪೀಠ,  ಈ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ ರಾಜ್ಯದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯ ಒಂದು ಪ್ರಬಲ ಸಮುದಾಯ.ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪಂಚಮಸಾಲಿ ಸಮುದಾಯ ರಾಜಕೀಯವಾಗಿ ಚುನಾವಣೆ ವೇಳೆ ನಿರ್ಣಾಯಕ ಬಲ ಪಾತ್ರವಹಿಸುತ್ತದೆ. ಅಷ್ಟೊಂದು ಬೃಹತ್ ಜನಸಂಖ್ಯೆ ಹೊಂದಿದೆ. ಇದರಿಂದ ಪಂಚಮಸಾಲಿ ಸಮುದಾಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಪೀಠಗಳಿವೆ. ಇಬ್ಬರು ಪಂಚಮಸಾಲಿ ಪೀಠಾಧಿಪತಿಗಳಿದ್ದಾರೆ‌. ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬಸವಜಯಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಕ್ಕೆ ವಚನಾನಂದ ಸ್ವಾಮೀಜಿ ಪೀಠಾಧಿಪತಿಗಳಿದ್ದಾರೆ‌. ಆದರೆ ಒಂದು ಗಮನಿಸಬೇಕಾದ ವಿಚಾರ ಅಂದರೆ ಮೇಲ್ನೋಟಕ್ಕೆ ಎರಡು ಪೀಠದ ಸ್ವಾಮೀಜಿಗಳು ಒಂದೇ. ನಾವು ಸಮಾಜದ ಎರಡು ಕಣ್ಣುಗಳು ಅಂತ ಹೇಳಿಕೊಂಡರೂ ಒಳಗೊಳಗೆ ಭಿನ್ನಮತ ಇರೋದು ಆಗಾಗ ಅವರ ಹೇಳಿಕೆಗಳು, ಧೋರಣೆಗಳ ಮೂಲಕ ಸ್ಪಷ್ಟವಾಗಿ ಕಂಡು ಬರುತ್ತಿದೆ. ಜೊತೆಗೆ ಇಬ್ಬರು ಸ್ವಾಮೀಜಿಗಳು ರಾಜಕೀಯವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.ಈ ಹಿನ್ನೆಲೆ ಪಂಚಮಸಾಲಿ ಸಮುದಾಯದ ಇತರೆ 80 ಕ್ಕೂ ಹೆಚ್ಚು ಸ್ವಾಮೀಜಿಗಳು ಪಂಚಮಸಾಲಿ ಒಕ್ಕೂಟ ಮಾಡಿಕೊಂಡಿದ್ದು, ಅಲ್ಲಲ್ಲಿ ಸಭೆ ನಡೆಸುತ್ತಿದ್ದಾರೆ. ಸಮುದಾಯದ ಪ್ರಮುಖ ಮುಖಂಡರು,ರಾಜಕೀಯ ನಾಯಕರ ಒಳಬೆಂಬಲದ ಮೂಲಕ ಸಭೆ ನಡೆಸುತ್ತಿದ್ದು ಸದ್ದಿಲ್ಲದೇ ಪಂಚಮಸಾಲಿ ಮೂರನೇ ಪೀಠದ ಸಿದ್ದತೆ ನಡೆಯುತ್ತಿದೆ ಎಂಬ ಸೂಚನೆ ಹಾಗೂ ಮಾತುಗಳು ಚರ್ಚೆಯಲ್ಲಿವೆ.

ಇಂದು ಜಮಖಂಡಿಯಲ್ಲಿ ಪುನಃ ಸಭೆ ಇನ್ನೊಂದು ಕಡೆ ಈಗಾಗಲೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟವನ್ನು ಮತ್ತೆ ಬಸವಜಯಮೃತ್ಯುಂಜಯ ಸ್ವಾಮೀಜಿ ಚುರುಕುಗೊಳಿಸಿದ್ದಾರೆ. ಇದೇ ಬೆನ್ನಲ್ಲೇ ಈಗ ಪುನಃ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಸಭೆ ನಡೆಸಲಾಗಿದೆ. 2ಎ ಮೀಸಲಾತಿಗಾಗಿ ಪ್ರತ್ಯೇಕ ಹೋರಾಟಕ್ಕೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದ್ದು, ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ಬಾಮೀಜಿಯಿಂದ ದೂರ ಉಳಿದು ಪಂಚಮಸಾಲಿ 2 ಎ ಮೀಸಲಾತಿ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ‌. ಸಭೆಯಲ್ಲಿ ಬಬಲೇಶ್ವರ ಸ್ವಾಮೀಜಿ,ಮನಗೂಳಿ ಸಂಗನಬಸವ ಸ್ವಾಮೀಜಿ, ಕಮರಿಮಠದ ಸಿದ್ದಲಿಂಗ ಸ್ವಾಮೀಜಿ,ಯೋಗೇಶ್ವರಿ ಮಾತಾ,ಗುರುಬಸವದೇವರು ಸೇರಿದಂತೆ ೨೦ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಇರಲಿದ್ದಾರೆ. ಈ ಮೂಲಕ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ.

ಪಂಚಮಸಾಲಿ ಒಕ್ಕೂಟ,ಹಾಗೂ‌ ಮೀಸಲಾತಿ ಹೋರಾಟ ಪಂಚಮಸಾಲಿ ಮೂರನೇ ಪೀಠಕ್ಕೆ ಅಡಿಪಾಯವೇ ಪಂಚಮಸಾಲಿ ಒಕ್ಕೂಟದಿಂದ ಈಗಾಗಲೇ ಜೂನ್ ತಿಂಗಳಲ್ಲಿ ಜಮಖಂಡಿಯಲ್ಲಿ ನಂತರ ವಿಜಯಪುರ ಜಿಲ್ಲೆಯಲ್ಲೂ ಕೂಡ ಸಭೆ ನಡೆಸಲಾಗಿದೆ.ಸದ್ದಿಲ್ಲದೆ ರಾಜ್ಯಾದ್ಯಂತ ಸಭೆಗಳು ನಡೆಯುತ್ತಿವೆ.ಇದು ಮೂರನೇ ಪೀಠಕ್ಕೆ ಅಡಿಪಾಯ ಎಂದು ಹೇಳಲಾಗುತ್ತಿದೆ.ಈ ಮೂಲಕ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಲ್ಲಿ ಬಾರಿ ಬಿರುಕು ಸ್ಪೋಟಗೊಂಡಿದೆ.ಇಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಒಂದು ದಿಕ್ಕಾದರೆ ವಚನಾನಂದ ಸ್ವಾಮೀಜಿ ಇನ್ನೊಂದು ದಿಕ್ಕು. ಮೇಲಾಗಿ ಎರಡು ಪೀಠದ ಸ್ವಾಮೀಜಿಗಳ ರಾಜಕೀಯ ನಾಯಕರ ಓಲೈಕೆ ಬಹಿರಂಗವಾಗಿ ರಾಜಕೀಯ ಹೇಳಿಕೆ ಕಂಡು ಇತರೆ ಸ್ವಾಮೀಜಿಗಳು ರೋಸಿ ಹೋಗಿದ್ದಾರೆ‌. ಇನ್ನು ಬಸವಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಂಚಮಸಾಲಿ ಲಿಂಗಾಯತ ಕೆಲ ಪ್ರಮುಖ ಮುಖಂಡರ ವಿರೋಧ ಕಟ್ಟಿಕೊಂಡಿದ್ದಾರೆ. ವಚನಾನಂದ ಸ್ವಾಮೀಜಿಗಳ ನಡೆಯೂ ಇತರೆ ಸ್ವಾಮೀಜಿಗಳಿಗೆ ಸೇರಿಲ್ಲ. ಇದಕ್ಕಾಗಿ ಬೆಳಗಾವಿ,ಬಾಗಲಕೋಟೆ, ವಿಜಯಪುರ, ಕೊಪ್ಪಳ, ಹಾಗೂ ಮೈಸೂರು ಭಾಗದ ಸ್ವಾಮೀಜಿಗಳು,ಮಹಾರಾಷ್ಟ್ರ ಮೂಲದ ಕೆಲ ಪಂಚಮಸಾಲಿ ಸ್ವಾಮೀಜಿಗಳು ಸೇರಿದಂತೆ 80ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಒಕ್ಕೂಟದ ಮೂಲಕ ಮೂರನೇ ಪೀಠಕ್ಕೆ ಬುನಾದಿ ಹಾಕುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ರಾಜ್ಯ ಸರಕಾರದಲ್ಲಿ ಪ್ರಮುಖ ಸಚಿವರ ಪರೋಕ್ಷ ಬೆಂಬಲ ಕೂಡ ಇದ್ದು,ಹಿಂದಿನಿಂದಲೇ ಒಕ್ಕೂಟಕ್ಕೆ ಬೆಂಬಲ ನೀಡುತ್ತಿದ್ದಾರೆ.

ಒಟ್ಟಾರೆ ಪಂಚಮಸಾಲಿ ಸ್ವಾಮೀಜಿಗಳ ಮಧ್ಯೆ ಬಿರುಕು ಮೂಡಿದ್ದು,ಶೀತಲ ಸಮರ ಶುರುವಾಗಿದೆ.ಎರಡು ಪೀಠಗಳಿಗೆ ಸದ್ದಿಲ್ಲದೆ ಮುಂದಿನ ದಿನಗಳಲ್ಲಿ ಪರ್ಯಾಯ ಪೀಠ ಉದ್ಭವಿಸಿದರೂ ಅಚ್ಚರಿಯಿಲ್ಲ.

ವಿಶೇಷ ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

ಇದನ್ನೂ ಓದಿ: 

ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಪ್ರಬಲ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ; ಜಾತಿ ಗಣತಿ ಆಧರಿಸಿ ಬಜೆಟ್ ಮಂಡಿಸಿ: ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ

(Vijayapura Sangana Basava Swamiji of Hiremath hints to form a 3rd Peetha Panchamasaali Community)

Published On - 4:52 pm, Wed, 1 September 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?