ತುಮಕೂರು: ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಸಾಮಾಜಿಕ ಕಾರ್ಯಕರ್ತರು ವಶಕ್ಕೆ ಪಡೆದಿದ್ದಾರೆ. ತುಮಕೂರು ಕುಣಿಗಲ್ನ ದೊಡ್ಡಪೇಟೆಯ ಡಿಪೋದಿಂದ ಮದ್ದೂರು ಕಡೆ ಅಕ್ಕಿ ಅಕ್ರಮವಾಗಿ ಸರಬರಾಜು ಆಗುತ್ತಿತ್ತು. ರಾತ್ರೋರಾತ್ರಿ ಭರ್ಜರಿ ಬೇಟೆಯಾಡಿದ ಸಾಮಾಜಿಕ ಕಾರ್ಯಕರ್ತರು, ಚಾಲಕನನ್ನ ಹಿಡಿದು ಆಹಾರ ಇಲಾಖೆ ಮತ್ತು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಸುಮಾರು 80 ಅಕ್ಕಿ ಚೀಲಗಳು ಸಾಗಾಟವಾಗುತ್ತಿತ್ತು ಎಂದು ತಿಳಿದುಬಂದಿದೆ.
ಅಕ್ರಮ ಮರ ಸಾಗಾಟ:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಅಕ್ರಮವಾಗಿ ಮರದ ನಾಟಾ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ, ನಾಟಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಭರಣಿ ಮರದ ನಾಟಾಗಳನ್ನ ಓಮಿನಿಯಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆದಿದೆ. ಈ ವೇಳೆ ಮಾರು ಗೌಡ ಮತ್ತು ಶಶಿಧರ್ ನಾಯ್ಕ್ ಎಂಬುವವರು ಬಂಧನಕ್ಕೊಳಗಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಮಂಜುನಾಥ ನಾಯ್ಕ್, ರಾಮಾ ನಾಯ್ಕ್ ಪರಾರಿಯಾಗಿದ್ದಾರೆ. 15 ಸಾವಿರ ಮೌಲ್ಯದ ಭರಣಿ ಮರದ ನಾಟಾಗಳು ವಶಕ್ಕೆ ಪಡೆಯಲಾಗಿದೆ. ಹೊನ್ನಾವರ ಡಿಎಫ್ಓ ಕೆ ಗಣಪತಿ, ಆರ್ಎಫ್ಓ ಪ್ರವೀಣ್ ನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಇನ್ನಿಬ್ಬರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಕಾರು ಬಾಡಿಗೆಗೆ ಪಡೆದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್:
ಕಾರು ಬಾಡಿಗೆಗೆ ಪಡೆದು ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು, ಆರೋಪಿಗಳನ್ನ ಬಂಧಿಸಿ ಬಂಧಿತರಿಂದ 90 ಲಕ್ಷ ರೂ. ಮೌಲ್ಯದ 12 ಕಾರುಗಳು ಜಪ್ತಿ ಮಾಡಿದ್ದಾರೆ. ಖದೀಮರು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ