AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?

ವೈವಾಹಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ತಾಳ್ಮೆಗೆಡದೆ ನಿವಾರಿಸಿ ಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನಡೆಸಬೇಕು ಎನ್ನುವ ಸಂಕೇತವೆ ಈ ಸೇರು ಒದೆಯಿಸುವುದು ಹಾಗೂ ಮನೆ ತುಂಬಿಸಿಕೊಳ್ಳುವುದರ ಹಿಂದಿನ ಸದುದ್ದೇಶವಾಗಿದೆ

ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?
ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?
TV9 Web
| Edited By: |

Updated on: Jan 24, 2022 | 6:06 AM

Share

ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಸಂಬೋಧಿಸುವ ನವ ವಧು (bride) ಸೇರು ಅಕ್ಕಿ, ಬೆಲ್ಲ ಒದ್ದು ಒಳಗೆ ಕಾಲಿಡುತ್ತಾಳೆ. ಮದುಮಗಳು ಹೀಗೆ ಮನೆ ತುಂಬಿಸಿ ಕೊಳ್ಳುತ್ತಾರೆ ಯಾಕೆ? ಈ ಸಂಪ್ರದಾಯದ ಹಿಂದಿನ ಕತಯೇನು? ಸೇರಲ್ಲಿ ಅಕ್ಕಿ ಹಾಕಿ, ಮೇಲೆ ಬೆಲ್ಲದ ಅಚ್ಚು ಇಟ್ಟು, ಅದನ್ನು ಹೊಸ್ತಿಲ ಮೇಲೆ ಇಟ್ಟು ಯಾವ ಕಾರಣಕ್ಕೆ ನವ ವಧು ಅದನ್ನು ಒದ್ದು ಗೃಹ ಪ್ರವೇಶ ಮಾಡುತ್ತಾಳೆ? ( kick a pot filled with rice) ಈ ಶಾಸ್ತ್ರವನ್ನು ಯಾಕೆ ಈ ರೀತಿಯಾಗಿ ಮಾಡಿದ್ದಾರೆ? ಇದರ ಅರ್ಥವಾದರು ಏನು ಇರಬಹುದು ಎಂದು ಆಲೋಚಿಸಿ ನೋಡಿದಾಗ..

ಸೇರಿಗೆ ಕಾರಕ = ಶನಿ ಅಕ್ಕಿಗೆ ಕಾರಕ = ಚಂದ್ರ ಬೆಲ್ಲಕ್ಕೆ ಕಾರಕ = ಗುರು

ಬೆಲ್ಲ ಅಂದ್ರೆ ಮೃತ್ಯುಂಜಯ ನವವಧು ಮನೆಗೆ ಬಂದ ಮೇಲೆ ಯಾವುದೇ ಸಾವು ನೋವು ಸಂಭವಿಸದೆ ಇರಲಿ ಎಂದು ಒಂದು ಕಡೆಯಾದರೆ ಎಲ್ಲರ ಮನಸ್ಸು ಸಿಹಿಯಾಗಿರಲಿ ಎಂಬುದು ಮತ್ತೊಂದು ಭಾವ.

ಚಂದ್ರ + ಗುರು = ಗಜಕೇಸರಿ ಯೋಗ ಅಂದರೆ ಇವರ ಮನೆಯಲ್ಲಿ ಯಾವಾಗಲೂ ಗಜಕೇಸರಿ ಯೋಗ ತುಂಬಿರಲಿ ಎಂದು ಮದುಮಗಳ ಕಾಲಿನಿಂದ ಸೇರು ಒದೆಯಿಸುವ ಶಾಸ್ತ್ರವಿದೆ.

ನವವಧು = ಶುಕ್ರ ಸೇರಿಗೆ ಕಾರಕ = ಶನಿ ಅಕ್ಕಿ = ಚಂದ್ರ ಬೆಲ್ಲ= ಗುರು

ಒದೆಯುವ ಕಾಲಿನ ಪಾದ = ಶನಿ ಒದೆಯುವ ಕಾಲಿನ ಬೆರಳು = ಗುರು ಸೇರು ಅಂದರೆ ಶನಿ = ಮಾವನಿಗೆ ಕಾರಕ

ಸೇರಿನೊಳಗೆ ಇರುವ ಅಕ್ಕಿ, ಬೆಲ್ಲ ಅಂದರೆ = ಚಂದ್ರ, ಗುರು ಅತ್ತೆಗೆ ಹಾಗೂ ಉತ್ತಮ ಬಾಂಧವ್ಯಕ್ಕೆ ಕಾರಕ ಅತ್ತೆ ಮಾವನೊಂದಿಗೆ ನವವಧು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಸಂಕೇತ

ಶನಿ = ಎಂದರೆ ಋಣ, ರೋಗ, ದಾರಿದ್ರ್ಯ ಗುರು = ಎಂದರೆ ಪರಿಹಾರ ಹಾಗೂ ಅಭಿವೃದ್ಧಿ ಶುಕ್ರ = ಎಂದರೆ ಲಕ್ಷ್ಮೀ ಹಾಗೂ ಗೃಹ

ಋಣ, ರೋಗ, ದಾರಿದ್ರ್ಯಗಳನ್ನೂ ಪರಿಹಾರ ಎನ್ನುವ ಬೆರಳಿನಿಂದ ಒದ್ದು ಆ ಗೃಹದಲ್ಲಿ ಸಮೃದ್ಧಿ, ಪ್ರೀತಿ, ಉತ್ತಮ ಬಾಂಧವ್ಯ, ಅಭಿವೃದ್ಧಿ ಬೆಳಸಬೇಕು ಎನ್ನುವುದರ ಸಂಕೇತ. ಶನಿ + ಚಂದ್ರ = ಅತ್ತೆ, ಮಾವ ಹಾಗೂ ಗುರು ಹಿರಿಯರ ಸಲಹೆ ಹಾಗೂ ಆಶೀರ್ವಾದ ಇವು ಉತ್ತಮ ಬಾಂಧವ್ಯಕ್ಕೆ ಅಗತ್ಯ.

ಶನಿ = ಕರ್ಮ ಗುರು = ಬೆರಳು, ಅಭಿವೃದ್ಧಿ ಶುಕ್ರ = ವಧು ಈ ಹೆಣ್ಣು ಮಾಡುವ ಪ್ರತಿ ಕೆಲಸವು ಗಂಡನ ಮನೆಗೆ ಅಭಿವೃದ್ಧಿಯನ್ನು ತರಲಿ ಎಂಬ ಸಂಕೇತ.

ಶುಕ್ರ = ಹೆಣ್ಣು, ವೈವಾಹಿಕ ಜೀವನ ಶನಿ = ಅಡೆತಡೆ ಗುರು = ನಿವಾರಣೆ ಹಾಗೂ ತಾಳ್ಮೆ ಚಂದ್ರ = ಶುದ್ಧ ಮನಸ್ಸು ಹಾಗೂ ಆಕರ್ಷಣೆ

ವೈವಾಹಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ತಾಳ್ಮೆಗೆಡದೆ ನಿವಾರಿಸಿ ಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನಡೆಸಬೇಕು ಎನ್ನುವ ಸಂಕೇತವೆ ಈ ಸೇರು ಒದೆಯಿಸುವುದು ಹಾಗೂ ಮನೆ ತುಂಬಿಸಿಕೊಳ್ಳುವುದರ ಹಿಂದಿನ ಸದುದ್ದೇಶವಾಗಿದೆ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!