ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು

ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಅನಿಲ್ನನ್ನು ಹುಡುಕಿಕೊಂಡು ಬಾವಿ ಬಳಿ ಬಂದಾಗ ಘಟನೆ ಪತ್ತೆಯಾಗಿದೆ. ಅನಿಲ್ ರಕ್ಷಣೆಗೆ NDRF, ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ. ಪೈಪ್ ಮೂಲಕ ಆಕ್ಸಿಜನ್ ಸಪ್ಲೆ ಮಾಡಿದ್ರು ಯುವಕ ಬದುಕುಳಿದಿಲ್ಲ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು
ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ
Follow us
TV9 Web
| Updated By: ಆಯೇಷಾ ಬಾನು

Updated on:Jan 30, 2022 | 12:19 PM

ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಯುವಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಡಿಹಳ್ಳಿ ಬಳಿ 3 ಅಡಿ ಅಗಲ, 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಅನಿಲ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಬಾವಿಯಲ್ಲಿ ಬಿದ್ದಿದ್ದ ಮೊಬೈಲ್ ತೆಗೆಯಲು ಅನಿಲ್ ಹಗ್ಗ ಬಿಟ್ಟು ಕಿರು ಬಾಯಿಗೆ ಇಳಿದಿದ್ದ.

ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ ಐಗೆ ಮಹಿಳೆಯಿಂದ ಕಲ್ಲೇಟು ಬೆಂಗಳೂರು: ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ಐಗೆ ಕಲ್ಲಿನಿಂದ ಹೊಡೆದಿದ್ದ ವಿಕಲಚೇತನ ಮಹಿಳೆ ಮಂಜುಳಾ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜ.24ರಂದು ಸಂಜೆ ಹಲಸೂರು ಗೇಟ್ ಸಂಚಾರಿ ಠಾಣೆ ಎಎಸ್ಐ ನಾರಾಯಣ್ ಮೇಲೆ ಮಹಿಳೆ ಮಂಜುಳಾ ಕಲ್ಲಿನಿಂದ ಹಲ್ಲೆ ಮಾಡಿದ್ದರು. ಎಎಸ್ ಐ ಮುಖಕ್ಕೆ ಕಲ್ಲುತಾಗಿ ರಕ್ತ ಬಂದಿತ್ತು. ಈ ವೇಳೆ ಕೂಡಲೇ ವಾಹನದಿಂದ ಕೆಳಗಿಳಿದ ಎಎಸ್ಐ ನಾರಾಯಣ್ ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ವಿಕಲಚೇತನ ಮಹಿಳೆ ಮೇಲೆ ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇನ್ನು ಕಲ್ಲೇಟು ಹೊಡೆದ ವಿಕಲಚೇತನ ಮಹಿಳೆ ಮಂಜುಳಾಗೆ ಎಎಸ್ಐ ನಾರಾಯಣ್ ಬೂಟಿನಿಂದ ಒದ್ದಿದ್ದರು. ಕೂದಲೆಳೆದು ಎಳೆದಾಡಿ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದರು. ಘಟನೆ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆಗೆ ಟೋಯಿಂಗ್ ಮಾಡೋರು ಕಂಡ್ರೆ ಆಗಲ್ವಂತೆ. ಹೀಗಾಗಿ ಟೋಯಿಂಗ್ ನವರು ಕಂಡ್ರೆ ಸಾಕು ಕಲ್ಲಿನಿಂದ ಹಲ್ಲೆ ಮಾಡ್ತಿದ್ದರಂತೆ. ಅದೇ ರೀತಿ ಎಎಸ್ ಐ ನಾರಾಯಣ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸಿಟ್ಟಿಗೆದ್ದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೂಟಿನಿಂದ ಎಎಸ್ಐ ಹಲ್ಲೆ ನಡೆಸಿದ್ದಾರೆ.

ಘಟನೆ ಬಳಿಕ ಎಎಸ್ಐ ಗೆ ಕಲ್ಲೇಟು ಹೊಡೆದಿದ್ದ ಮಂಜುಳಾನನ್ನು ಎಸ್ಜೆ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಸಂಬಂಧ ಮಂಜುಳಾ ವಿರುದ್ದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್​​ಕೌಂಟರ್​​; ಒಟ್ಟು 5 ಭಯೋತ್ಪಾದಕರನ್ನು ಕೊಂದ ಭದ್ರತಾ ಪಡೆಗಳು

Published On - 8:36 am, Sun, 30 January 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ