ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್​​ಕೌಂಟರ್​​; ಒಟ್ಟು 5 ಭಯೋತ್ಪಾದಕರನ್ನು ಕೊಂದ ಭದ್ರತಾ ಪಡೆಗಳು

ಶನಿವಾರ ಬೆಳಗ್ಗೆ ದಕ್ಷಿಣ ಕಾಶ್ಮೀರದ ಹಾಸನಪೊರ ಬಿಜಭೇರದಲ್ಲಿ 53ವರ್ಷದ ಪೊಲೀಸ್ ಹೆಡ್​​ಕಾನ್​​ಸ್ಟೆಬಲ್​​ ಹತ್ಯೆಯಾಗಿತ್ತು. ಗನ್​ ಹಿಡಿದುಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದ.

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಎನ್​​ಕೌಂಟರ್​​; ಒಟ್ಟು 5 ಭಯೋತ್ಪಾದಕರನ್ನು ಕೊಂದ ಭದ್ರತಾ ಪಡೆಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 30, 2022 | 8:26 AM

ಜಮ್ಮು-ಕಾಶ್ಮೀರದ ಬುದ್​ಗಾಂವ್​ ಮತ್ತು ಪುಲ್ವಾಮಾದಲ್ಲಿ ರಕ್ಷಣಾ ಪಡೆಗಳು (Security Forces)  ನಡೆಸಿದ ಎರಡು ಪ್ರತ್ಯೇಕ ಎನ್​ಕೌಂಟರ್​​ನಲ್ಲಿ 5 ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಉಗ್ರರು ಪಾಕಿಸ್ತಾನ ಮೂಲದ ಲಷ್ಕರ್​ ಇ ತೊಯ್ಬಾ ಮತ್ತು ಜೈಷ್​ ಇ ಮೊಹಮ್ಮದ್​ ಉಗ್ರಸಂಘಟನೆಗೆ ಸೇರಿದವರು ಎಂದು ಕಾಶ್ಮೀರದ ಐಜಿ ವಿಜಯ್​ ಕುಮಾರ್​ ತಿಳಿಸಿದ್ದಾರೆ. ಈಗ ಸತ್ತ ಐದು ಉಗ್ರರರಲ್ಲಿ ಜೈಷ್​ ಇ ಮೊಹಮ್ಮದ್​ ಕಮಾಂಡರ್​ ಜಾಹೀದ್​ ವಾನಿ ಮತ್ತು ಪಾಕಿಸ್ತಾನದ ಉಗ್ರನೊಬ್ಬ ಸೇರಿದ್ದಾರೆ. ಈ ತಿಂಗಳಲ್ಲಿ ಒಟ್ಟು 11 ಎನ್​​ಕೌಂಟರ್​ ನಡೆಸಲಾಗಿದ್ದು, 21 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಅದರಲ್ಲಿ ಎಂಟು ಮಂದಿ ಪಾಕಿಸ್ತಾನದವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಶನಿವಾರ ಸಂಜೆ ಮೊದಲು ಪುಲ್ವಾಮಾದ ನೈರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯಿತು. ಅದು ರಾತ್ರಿ ಪೂರ್ತಿ ನಡೆದ ಎನ್​​ಕೌಂಟರ್ ಆಗಿದ್ದು, ಒಟ್ಟು ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರೆಲ್ಲರೂ ಜೈಷ್​ ಇ ಮೊಹಮ್ಮದ್​ ಸಂಘಟನೆಗೆ ಸೇರಿದವರೇ ಆಗಿದ್ದಾರೆ.  ಅಷ್ಟೇ ಅಲ್ಲ, ಉಗ್ರರು ಅಡಗಿದ್ದ ಆ ಪ್ರದೇಶದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಾದ ಬಳಿಕ ಮಧ್ಯ ಕಾಶ್ಮೀರದ ಬುದ್​ ಗಾಂವ್​ನಲ್ಲಿ ನಡೆದ ಪ್ರತ್ಯೇಕ ಎನ್​ಕೌಂಟರ್​​ನಲ್ಲಿ ಲಷ್ಕರ್​  ಇ ತೊಯ್ಬಾ ಸಂಘಟನೆಯ ಉಗ್ರನೊಬ್ಬನ ಹತ್ಯೆಯಾಗಿದೆ. ಈತನಿಂದಲೂ ಸಹ ಹಲವು ಮಾದರಿಯ ಶಸ್ತ್ರಾಸ್ತ್ರಗಳನ್ನು, ಎಕೆ 56 ರೈಫಲ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಸಿಬ್ಬಂದಿ ಹತ್ಯೆ ಶನಿವಾರ ಬೆಳಗ್ಗೆ ದಕ್ಷಿಣ ಕಾಶ್ಮೀರದ ಹಾಸನಪೊರ ಬಿಜಭೇರದಲ್ಲಿ 53ವರ್ಷದ ಪೊಲೀಸ್ ಹೆಡ್​​ಕಾನ್​​ಸ್ಟೆಬಲ್​​ ಹತ್ಯೆಯಾಗಿತ್ತು. ಗನ್​ ಹಿಡಿದುಬಂದ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದ. ಈ ಕಾನ್​ಸ್ಟೆಬಲ್​ ಹೆಸರು ಅಲಿ ಮೊಹಮ್ಮದ್​ ಗಾನಿ ಎಂದಾಗಿದ್ದು, ಇವರು ಬಿಜಭೇರದಲ್ಲಿರುವ ತಮ್ಮ ಮನೆ ಸಮೀಪವೇ ನಿಂತಿದ್ದಾಗ ಬಂದೂಕು ಧಾರಿ ಗುಂಡು ಹಾರಿಸಿದ್ದ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು.

ಪೊಲೀಸ್ ಕಾನ್​ಸ್ಟೆಬಲ್​ ಹತ್ಯೆಯನ್ನು ಖಂಡಿಸಿ ಟ್ವೀಟ್ ಮಾಡಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್​ ಜನರಲ್​ ಮನೋಜ್​ ಸಿನ್ಹಾ, ಹೆಡ್​ಕಾನ್​ಸ್ಟೆಬಲ್​ ಅಲಿ ಮೊಹಮ್ಮದ್​ ಗಾನಿ ಪ್ರಾಣತ್ಯಾಗ ಸುಮ್ಮನೆ ವ್ಯರ್ಥವಾಗಲು ಬಿಡುವುದಿಲ್ಲ. ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದರು. ಹಾಗೇ, ಸಂತಾಪ ಸೂಚಿಸಿದ್ದರು.

ಇದನ್ನೂ ಓದಿ: H-1B Visa: ಯುಎಸ್​ ಪೌರತ್ವ ಮತ್ತು ವಲಸೆ ಸೇವೆಗಳಿಂದ ಎಚ್​- 1ಬಿ ವೀಸಾಗಳ ಆರಂಭಿಕ ನೋಂದಣಿ ಮಾರ್ಚ್ 1ರಂದು ಪ್ರಾರಂಭ