ಹೊಟ್ಟೆ ತುಂಬ ಊಟಮಾಡಿದ ಬಳಿಕ ಹೊಡೆದಾಟ; ಸಿಲಿಂಡರ್​ ಗ್ಯಾಸ್​ ಎತ್ತಿ ರೆಸ್ಟೋರೆಂಟ್​ ಸಿಬ್ಬಂದಿಗೆ ಹೊಡೆಯಲು ಹೋದ ಗುಂಪು

ರೆಸ್ಟೋರೆಂಟ್​​ನ ಸಿಸಿಟಿವಿಯಲ್ಲಿ ಈ ವಿಡಿಯೋಗಳು ವೈರಲ್​ ಆಗಿವೆ. ಹೊಡೆದಾಟ, ಅದರಿಂದ ಉಂಟಾದ ಹಾನಿಗಳನ್ನು ಇದರಲ್ಲಿ ನೋಡಬಹುದಾಗಿದೆ. ಊಟಕ್ಕೆಂದು ಹೋಗಿದ್ದವರು ಅಲ್ಲಿ ಸಿಕ್ಕಿದ್ದನ್ನೆಲ್ಲ ಹಾಳುಗೆಡವಿದ್ದಾರೆ.

ಹೊಟ್ಟೆ ತುಂಬ ಊಟಮಾಡಿದ ಬಳಿಕ ಹೊಡೆದಾಟ; ಸಿಲಿಂಡರ್​ ಗ್ಯಾಸ್​ ಎತ್ತಿ ರೆಸ್ಟೋರೆಂಟ್​ ಸಿಬ್ಬಂದಿಗೆ ಹೊಡೆಯಲು ಹೋದ ಗುಂಪು
ರೆಸ್ಟೋರೆಂಟ್​​ನಲ್ಲಿ ಹೊಡೆದಾಟ
Follow us
TV9 Web
| Updated By: Lakshmi Hegde

Updated on:Jan 30, 2022 | 10:29 AM

ನೋಯ್ಡಾ: ಒಂದು ರೆಸ್ಟೋರೆಂಟ್​​ ಹೋಗಿ, ಬೇಕಾಗಿದ್ದನ್ನೆಲ್ಲ ಆರ್ಡರ್​ ಮಾಡಿಕೊಂಡು, ಭರ್ಜರಿ ಊಟಮಾಡಿದ ಒಂದಷ್ಟು ಮಂದಿ, ಮರುಕ್ಷಣ, ಅಲ್ಲಿನ ಸಿಬ್ಬಂದಿಗೆ ಮನಬಂದಂತೆ ಥಳಿಸಿದ್ದಾರೆ.  ಕೈಯಿಗೆ ಸಿಕ್ಕ ವಸ್ತುಗಳು ಅಂದರೆ, ಚಮಚ, ಲೋಟಗಳು ಕೊನೆಗೆ ಗ್ಯಾಸ್​ ಸಿಲಿಂಡರ್​ ಕೂಡ ಎತ್ತಿಕೊಂಡು ಹೊಡೆಯಲು ಹೋಗಿದ್ದಾರೆ. ಈ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ.   ಗ್ರೇಟರ್​ ನೊಯ್ಡಾದ (Greater Noida) ದಂಕೌರ್ ಎಂಬ ರೆಸ್ಟೋರೆಂಟ್​ಗೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದರು. ಹೀಗೆ ಊಟಕ್ಕೆ ಹೋದಾಗ ಸರ್ವ್ ಮಾಡುವವನನ್ನು ನಿಂದಿಸಿದ್ದಾರೆ. ಆ ಸರ್ವರ್​ ಅವರಿಗೆ ತಿರುಗುತ್ತರ ನೀಡಿದ್ದಾರೆ. ಅಷ್ಟಕ್ಕೇ ಕೋಪಗೊಂಡ ಇವರು ಆತನ ಮೇಲೆ ಕೈ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ರೆಸ್ಟೋರೆಂಟ್​ನ ಇತರ ಸಿಬ್ಬಂದಿ ಸರ್ವರ್​ ಸಹಾಯಕ್ಕೆ ಬಂದಿದ್ದಾರೆ. ಆಗ ಎರಡೂ ಗುಂಪುಗಳ ಮಧ್ಯೆ ಹೊಡೆದಾಟ ಮಿತಿಮೀರಿ ನಡೆದಿದೆ ಎಂದು ಹೇಳಲಾಗಿದೆ. 

ರೆಸ್ಟೋರೆಂಟ್​​ನ ಸಿಸಿಟಿವಿಯಲ್ಲಿ ಈ ವಿಡಿಯೋಗಳು ವೈರಲ್​ ಆಗಿವೆ. ಹೊಡೆದಾಟ, ಅದರಿಂದ ಉಂಟಾದ ಹಾನಿಗಳನ್ನು ಇದರಲ್ಲಿ ನೋಡಬಹುದಾಗಿದೆ. ಊಟಕ್ಕೆಂದು ಹೋಗಿದ್ದವರು ಅಲ್ಲಿ ಸಿಕ್ಕಿದ್ದನ್ನೆಲ್ಲ ಹಾಳುಗೆಡವಿದ್ದಾರೆ. ತಿಂಡಿಗಳು ಇದ್ದ ದೊಡ್ಡದೊಡ್ಡ ಪಾತ್ರೆಗಳನ್ನು ಕೆಡವಿದ್ದಾರೆ. ಒಂದು ಹಂತದಲ್ಲಿ ಸಿಲಿಂಡರ್ ಗ್ಯಾಸ್​ ಕೂಡ ಕೈಗೆ ತೆಗೆದುಕೊಂಡಿದ್ದಾರೆ. ರೆಸ್ಟೋರೆಂಟ್​ ಮಾಲೀಕ ಮಹೇಶ್​ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೇ, ಸಿಸಿಟಿವಿ ವಿಡಿಯೋವನ್ನು ಸಾಕ್ಷಿಯನ್ನಾಗಿ ನೀಡಿದ್ದಾರೆ. ಇವರೆಲ್ಲ ಕುಡಿದು ಬಂದಿದ್ದರು. ಇಲ್ಲಿಂದ ಹೋಗುವಾಗ ನನಗೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ತಮ್ಮ ಮೋಟರ್ ಬೈಕ್​, ಸ್ಕೂಟರ್​ಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ ಎಂದೂ ಹೇಳಿದ್ದಾರೆ.

ಗುರುವಾರ ನಡೆದ ಘಟನೆ ಇದು. ಅಂದು ಸಂಜೆ ಹೊತ್ತಿಗೆ ರೆಸ್ಟೋರೆಂಟ್​ಗೆ ಐವರು ಬಂದಿದ್ದರು. ಊಟ ಮುಗಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿದ್ದಲ್ಲದೆ, ದೊಡ್ಡ ದಾಂಧಲೆ, ಹೊಡೆದಾಟ ನಡೆಸಿದ್ದಾರೆ. ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ಫೂಟೇಜ್​​ಗಳನ್ನೂ ಸ್ಕ್ಯಾನ್​ ಮಾಡಲಾಗಿದೆ ಎಂದು ಗ್ರೇಟರ್​ ನೊಯ್ಡಾದ ಡಿಸಿಪಿ ಅಮಿತ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಭಯದಲ್ಲೇ ಕೆರೆ ಹಾವು ಮುಟ್ಟಿ ಸಂಭ್ರಮಿಸಿದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ 

Published On - 10:29 am, Sun, 30 January 22