Mann Ki Baat: ಇಂದು ವರ್ಷದ ಮೊದಲ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಮಾತು, ಬೆಳಗ್ಗೆ 11.30ಕ್ಕೆ ಪ್ರಸಾರ

ಈ ವರ್ಷದ ಮೊದಲ ಮನ್​  ಕೀ ಬಾತ್​​ ಬಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮನ್​ ಕೀ ಬಾತ್​​ನಲ್ಲಿ ಏನೆಲ್ಲ ವಿಚಾರಗಳನ್ನು ಮಾತನಾಡಬಹುದು ಎಂಬ ಬಗ್ಗೆ ಅಭಿಪ್ರಾಯ ಶೇರ್​ ಮಾಡಿಕೊಳ್ಳಿ ಎಂದು ದೇಶದ ನಾಗರಿಕರಿಗೆ ಹೇಳಿದ್ದರು.

Mann Ki Baat: ಇಂದು ವರ್ಷದ ಮೊದಲ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಮಾತು, ಬೆಳಗ್ಗೆ 11.30ಕ್ಕೆ ಪ್ರಸಾರ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Jan 30, 2022 | 9:29 AM

ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕೀ ಬಾತ್​ (Mann Ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 2022ರ ಮೊದಲ ಆವೃತ್ತಿಯ ಮನ್​ ಕೀ ಬಾತ್​ ಇದಾಗಿದ್ದು, ಬೆಳಗ್ಗೆ 11.30ರಿಂದ ಪ್ರಧಾನಿ ಮೋದಿ (PM Narendra Modi) ಮಾತನಾಡಲಿದ್ದಾರೆ. ಒಟ್ಟಾರೆ ಇಂದು ಪ್ರಸಾರವಾಗುವುದು 85ನೇ ಎಪಿಸೋಡ್​​ನ ಮನ್​ ಕೀ ಬಾತ್​. ಪ್ರತಿತಿಂಗಳ ಕೊನೇ ಭಾನುವಾರ ನರೇಂದ್ರ ಮೋದಿಯವರ ಮನ್​ ಕೀ ಬಾತ್ ರೇಡಿಯೋ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಾಜಕೀಯ ಹೊರತಾಗಿ ಅನೇಕ ಮಹತ್ವದ ವಿಚಾರಗಳ ಕುರಿತು ಮಾತನಾಡುವರು. ಇದು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲ ನೆಟ್​ವರ್ಕ್​​ಗಳಲ್ಲಿ, ಎಐಆರ್​ ನ್ಯೂಸ್​ ಮತ್ತು ಮೊಬೈಲ್​ ಆ್ಯಪ್​ನಲ್ಲಿ ಪ್ರಸಾರವಾಗಲಿದೆ. ಆಲ್​ ಇಂಡಿಯಾ ರೇಡಿಯೋದ ನ್ಯೂಸ್​ವೆಬ್​ಸೈಟ್​ ಮತ್ತು  newsonair ಮೊಬೈಲ್​ ಆ್ಯಪ್​​ನಲ್ಲೂ ಕೂಡ ಮನ್​ ಕೀ ಬಾತ್​ ಕೇಳಬಹುದು. ಅದರೊಂದಿಗೆ ಆಲ್​ ಇಂಡಿಯಾ ರೇಡಿಯೋ ನ್ಯೂಸ್​, ಡಿಡಿ ನ್ಯೂಸ್ ಪಿಎಂಒ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್​ ಚಾನಲ್​​ಗಳಲ್ಲಿ ಕೂಡ ನೇರ ಪ್ರಸಾರ ಆಗಲಿದೆ. ಈ ಬಗ್ಗೆ ಕಳೆದ ವಾರ ಟ್ವೀಟ್ ಮಾಡಿದ್ದ ಪ್ರಧಾನಿ ಕಾರ್ಯಾಲಯ, ಜನವರಿ 30ರಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ ಇದೆ. ಅವರ ಸ್ಮರಣೆಯ ನಂತರ ಬೆಳಗ್ಗೆ 11.30ಕ್ಕೆ ಪ್ರಧಾನಿ ಮೋದಿ ಮನ್​ ಕೀ ಬಾತ್​ ಉದ್ದೇಶಿಸಿ ಮಾತನಾಡುವರು ಎಂದು ಮಾಹಿತಿ ನೀಡಿತ್ತು. 

ಇಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹುತಾತ್ಮರ ದಿನ ಆಚರಣೆ ನಡೆಯುತ್ತಿದೆ. ಪ್ರಧಾನಿ ಮೋದಿ ಇಂದು ತಮ್ಮ ಮನ್​ ಕೀ ಬಾತ್​​ನಲ್ಲಿ ಮಹಾತ್ಮ ಗಾಂಧಿ ಬಗ್ಗೆ ಮಾತನಾಡಲಿದ್ದಾರೆ, ಪುಣ್ಯತಿಥಿಯಂದು ಅವರನ್ನು ಸ್ಮರಿಸಲಿದ್ದಾರೆ ಎಂದು ಹೇಳಲಾಗಿದೆ. ಮೋದಿಯವರ ಮನ್​ ಕೀ ಬಾತ್​​ ಕೇಳಲು ಹೆಚ್ಚೆಚ್ಚು ಜನರು ಪಾಲ್ಗೊಳ್ಳುವಂತೆ ಬೂತ್​ ಮಟ್ಟದಲ್ಲಿ ಸರಿಯಾಗಿ ವ್ಯವಸ್ಥೆ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷದ ಮೊದಲ ಮನ್​  ಕೀ ಬಾತ್​​ ಬಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮನ್​ ಕೀ ಬಾತ್​​ನಲ್ಲಿ ಏನೆಲ್ಲ ವಿಚಾರಗಳನ್ನು ಮಾತನಾಡಬಹುದು ಎಂಬ ಬಗ್ಗೆ ಅಭಿಪ್ರಾಯ ಶೇರ್​ ಮಾಡಿಕೊಳ್ಳಿ ಎಂದು ನಾಗರಿಕರಿಗೆ ಹೇಳಿದ್ದರು. ಜನವರಿ 30ರಂದು ಈ ವರ್ಷದ ಮೊದಲ ಮನ್​ ಕೀ ಬಾತ್​ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ಪೂರಕವಾಗಿ ಸ್ಫೂರ್ತಿದಾಯಕ ಕತೆಗಳು, ವಿಷಯಗಳನ್ನು ನೀವು ಹಂಚಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ನೀವು ನಿಮ್ಮ ಅಭಿಪ್ರಾಯವನ್ನು mygovindia ಅಥವಾ NaMo App ಮೂಲಕ ಹಂಚಿಕೊಳ್ಳಬಹುದು. ಹಾಗೇ, ಧ್ವನಿ ಸಂದೇಶವನ್ನು ರೆಕಾರ್ಡ್​ ಮಾಡಿ 1800-11-7800ಕ್ಕೆ ಕಳಿಸಬಹುದು ಎಂದಿದ್ದರು.

ಇದನ್ನೂ ಓದಿ: ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ

Published On - 9:19 am, Sun, 30 January 22