ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ

ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ
ರತನ್ ಟಾಟಾ

Ratan Tata Web Series: ರತನ್​ ಟಾಟಾ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರ ಪಾತ್ರದಲ್ಲಿ ನಟಿಸಲು ಖ್ಯಾತ ಮತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ವೆಬ್​ ಸರಣಿ ಬಗ್ಗೆ ಕೌತುಕ ನಿರ್ಮಾಣ ಆಗಿದೆ.

TV9kannada Web Team

| Edited By: Madan Kumar

Jan 30, 2022 | 9:03 AM

ಭಾರತದಲ್ಲೀಗ ವೆಬ್​ ಸಿರೀಸ್​ಗಳ (Web Series) ಟ್ರೆಂಡ್​ ಜೋರಾಗಿದೆ. ಅದೇ ರೀತಿ ಬಯೋಪಿಕ್​ಗಳು ಸಹ ಸೌಂಡು ಮಾಡುತ್ತಿವೆ. ಎಲ್ಲ ಭಾಷೆಯಲ್ಲಿಯೂ ಒಳ್ಳೊಳ್ಳೆಯ ಕಥೆಗಳನ್ನು ಆಧರಿಸಿ ವೆಬ್​ ಸರಣಿ ನಿರ್ಮಾಣ ಮಾಡಲಾಗುತ್ತಿದೆ. ನಿಜಜೀವನದಲ್ಲಿ ಸಾಧನೆ ಮಾಡಿದ ಅನೇಕರ ಬದುಕಿನ ವಿವರಗಳು ವೆಬ್​ ಸಿರೀಸ್​ ಮೂಲಕ ಬಿತ್ತರಗೊಳ್ಳುತ್ತಿದೆ. ಈಗ ರತನ್​ ಟಾಟಾ (Ratan Tata) ಅವರ ಜೀವನವನ್ನು ಆಧರಿಸಿ ಒಂದು ವೆಬ್​ ಸಿರೀಸ್​ ಮಾಡಲು ಪ್ಲ್ಯಾನ್​ ಸಿದ್ಧವಾಗುತ್ತಿದೆ. ಈ ಬಗ್ಗೆ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಕೋಟ್ಯಂತರ ಜನರಿಗೆ ರತನ್​ ಟಾಟಾ ಮಾದರಿ. ‘ಟಾಟಾ ಗ್ರೂಪ್​’ ಕಂಪನಿ ಮೂಲಕ ಅಪಾರ ಸಾಧನೆ ಮಾಡಿದ ಅವರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಹಾಗಾಗಿ ರತನ್​ ಟಾಟಾ ಮತ್ತು ಅವರ ಕುಟುಂಬದ (Ratan Tata Family) ಕುರಿತು ವೆಬ್​ ಸಿರೀಸ್​ ನಿರ್ಮಾಣ ಮಾಡಲು ಪ್ರೊಡಕ್ಷನ್​ ಕಂಪನಿಯೊಂದು ಮುಂದೆ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದೊಂದೇ ಬಾಕಿ ಇದೆ. ರತನ್​ ಟಾಟಾ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆಯು ರತನ್​ ಟಾಟಾ ಅವರ ಜೀವನವನ್ನು ಆಧರಿಸಿ ವೆಬ್​ ಸಿರೀಸ್​ ಮಾಡಲು ಸಿದ್ಧವಾಗಿದೆ. ‘The Tatas: How A Family Built A Business and A Nation’ ಪುಸ್ತಕದಲ್ಲಿ ರತನ್​ ಟಾಟಾ ಅವರ ಜೀವನದ ಬಗ್ಗೆ ವಿವರಗಳಿವೆ. ಆ ಪುಸ್ತಕದ ಹಕ್ಕುಗಳನ್ನು ‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆ ಖರೀದಿಸಿದೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ. ಖ್ಯಾತ ಲೇಖಕ, ಪತ್ರಕರ್ತ ಗಿರೀಶ್​ ಕುಬೇರ್​ ಅವರು ಈ ಪುಸ್ತಕ ಬರೆದಿದ್ದಾರೆ. ಇದರ ಹಕ್ಕುಗಳನ್ನು ತಾವು ಖರೀದಿಸಿರುವುದಾಗಿ ‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆಯ ಮುಖ್ಯಸ್ಥೆ ಪ್ರಬ್ಲೀನ್​ ಕೌರ್​ ಸಂಧು ಅವರು ಒಂದು ವೆಬ್​ಸೈಟ್​ಗೆ ಮಾಹಿತಿ ನೀಡಿದ್ದಾರೆ. ತಾವು ನಿರ್ಮಾಣ ಮಾಡಲಿರುವ ವೆಬ್​ ಸಿರೀಸ್​ನಲ್ಲಿ ರತನ್​ ಟಾಟಾ ಅವರ ಪೂರ್ವಜರ ಬಗ್ಗೆಯೂ ತೋರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮೂರು ಸೀಸನ್​ಗಳಲ್ಲಿ ಈ ವೆಬ್​ ಸರಣಿ ಮೂಡಿಬರಲಿದೆ ಎಂದು ವರದಿ ಆಗಿದೆ.

ಈ ಕುರಿತಂತೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಸ್ಕ್ರಿಪ್ಟ್​ ಕೆಲಸ ಪೂರ್ಣಗೊಂಡ ಬಳಿಕ ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ. ರತನ್​ ಟಾಟಾ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರ ಪಾತ್ರದಲ್ಲಿ ನಟಿಸಲು ಖ್ಯಾತ ಮತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಈ ವೆಬ್​ ಸರಣಿಯ ಬಗ್ಗೆ ಇಡೀ ದೇಶವೇ ಕುತೂಹಲ ಇಟ್ಟುಕೊಂಡಿದೆ. ಒಳ್ಳೆಯ ಕಲಾವಿದರ ಆಯ್ಕೆಯಿಂದ ತೂಕ ಹೆಚ್ಚಲಿದೆ ಅಂತ ಮೂಲಗಳು ತಿಳಿಸಿವೆ ಎಂದು ಬಾಲಿವುಡ್​ ಹಂಗಾಮ ವರದಿ ಪ್ರಕಟಿಸಿದೆ.

ಇದನ್ನೂ ಓದಿ:

ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

Follow us on

Related Stories

Most Read Stories

Click on your DTH Provider to Add TV9 Kannada