ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

Kapil Sharma Biopic: ‘ಫನ್ಕಾರ್​’ ಎಂಬುದು ಉರ್ದು ಶಬ್ದ. ಇದರ ಅರ್ಥ ಕಲಾವಿದ ಎಂದು. ಕಪಿಲ್​ ಶರ್ಮಾ ಓರ್ವ ಕಲಾವಿದ. ಈ ಕಾರಣಕ್ಕೆ ‘ಫನ್ಕಾರ್​’ ಎಂದು ಇಡಲಾಗಿದೆ. ಈ ಚಿತ್ರವನ್ನು ನಿರ್ದೇಶಕರು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ
ಕಪಿಲ್​ ಶರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on:Jan 15, 2022 | 7:28 AM

ಇತ್ತೀಚೆಗೆ ಚಿತ್ರರಂಗದಲ್ಲಿ ಬಯೋಪಿಕ್​ ಟ್ರೆಂಡ್​ ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಜನರ ಬಯೋಪಿಕ್​ಗಳನ್ನು ಮಾಡಲಾಗುತ್ತಿದೆ. ಇದರಲ್ಲಿ ಅನೇಕರು ಯಶಸ್ಸು ಕಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಕಾಮಿಡಿಯನ್​ ಕಪಿಲ್​ ಶರ್ಮಾ (Kapil Sharma) ಕುರಿತು ಈಗ ಬಯೋಪಿಕ್​ ಸಿದ್ಧಗೊಳ್ಳುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಕಪಿಲ್​ ಶರ್ಮಾ ಅವರ ಆರಂಭಿಕ ಜೀವನ ಹೇಗಿತ್ತು? ಅವರು ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಹೀಗೆ ಹಲವು ವಿಚಾರಗಳ ಬಗ್ಗೆ ಈ ಬಯೋಪಿಕ್​ನಲ್ಲಿ ಹೇಳಲಾಗುತ್ತದೆ. ‘ಫನ್ಕಾರ್​’ (Funkaar ) ಎನ್ನುವ ಶೀರ್ಷಿಕೆಯನ್ನು ಸಿನಿಮಾಗೆ ಇಡಲಾಗಿದೆ. ಮೃಗದೀಪ್​ ಸಿಂಗ್​ ಲಂಬಾ (Mrighdeep Singh Lamba) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಕಪಿಲ್​ ಶರ್ಮಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.  

‘ಫನ್ಕಾರ್​’ ಎಂಬುದು ಉರ್ದು ಶಬ್ದ. ಇದರ ಅರ್ಥ ಕಲಾವಿದ ಎಂದು. ಕಪಿಲ್​ ಶರ್ಮಾ ಓರ್ವ ಕಲಾವಿದ. ಈ ಕಾರಣಕ್ಕೆ ‘ಫನ್ಕಾರ್​’ ಎಂದು ಇಡಲಾಗಿದೆ. ಈ ಚಿತ್ರವನ್ನು ನಿರ್ದೇಶಕರು ಹೇಗೆ ಕಟ್ಟಿಕೊಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಮೃಗದೀಪ್​ ಸಿಂಗ್ ಅವರು ‘ಫುಕ್ರೇ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಸದ್ಯ, ಅವರು ‘ಫುಕ್ರೇ 3’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡ ನಂತರದಲ್ಲಿ ಬಯೋಪಿಕ್​ಅನ್ನು ಅವರು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಕಪಿಲ್​ ಶರ್ಮಾ ಪಂಜಾಬ್​ನ ಅಮೃತ್​ಸರದವರು. ಸಾಮಾನ್ಯ ಕುಟುಂಬದಿಂದ ಬಂದು, ಈಗ ‘ದಿ ಕಪಿಲ್​ ಶರ್ಮಾ ಶೋ’ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿರುವ ಹೆಚ್ಚುಗಾರಿಕೆ ಅವರದ್ದು. ಈ ಶೋಗೆ ಸಾಕಷ್ಟು ಸೆಲೆಬ್ರಿಟಿಗಳು ಅತಿಥಿಗಳಾಗಿ ಬಂದು ಹೋಗಿದ್ದಾರೆ.

2007ರಲ್ಲಿ ‘ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​’ನಲ್ಲಿ ಕಪಿಲ್​ ಶರ್ಮಾ ಗೆದ್ದಿದ್ದರು. ನಂತರ ಹಲವು ಕಾಮಿಡಿ ಶೋಗಳಲ್ಲಿ ಅವರು ಕಾಣಿಸಿಕೊಂಡರು. 2013ರಲ್ಲಿ ‘ಕಾಮಿಡಿ ನೈಟ್ಸ್​ ವಿತ್​ ಕಪಿಲ್​’ ಅನ್ನು ಆರಂಭಿಸಿದರು. ಈ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ವಾಹಿನಿ ಜತೆಗಿನ ಹಣದ ವ್ಯವಹಾರದಲ್ಲಿ ಹೊಂದಾಣಿಕೆ ಆಗದ ಕಾರಣ ಮೂರು ವರ್ಷದ ನಂತರ ಈ ಶೋ ಕ್ಯಾನ್ಸಲ್​ ಆಯಿತು. ಸ್ವಲ್ಪ ಸಮಯದ ನಂತರ (2016) ಬೇರೆ ಚಾನೆಲ್​ನಲ್ಲಿ ‘ದಿ ಕಪಿಲ್​ ಶರ್ಮಾ ಶೋ’ ಆರಂಭಿಸಿದರು ಅವರು. ಅಲ್ಲಿಂದ ಇಲ್ಲಿಯವರೆಗೂ ಅವರ ಶೋ ಖ್ಯಾತಿ ಗಳಿಸಿಕೊಂಡಿದೆ.  ಇದಲ್ಲದೇ, ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಕಪಿಲ್​ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?

ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್​ ಶರ್ಮಾ ಶೋ’ ಹಾಸ್ಯನಟ

Published On - 6:30 am, Sat, 15 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ