ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಎರಡನೇ ಹೀರೋಯಿನ್​ ಔಟ್​; ಇದಕ್ಕಿದೆ ಮಹತ್ವದ ಕಾರಣ

ನಾಗಾರ್ಜುನ ‘ದಿ ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರಂಭದಲ್ಲಿ ನಾಯಕಿಯಾಗಿ ಕಾಜಲ್​ ಅಗರ್​​ವಾಲ್​​​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಅಕ್ಕಿನೇನಿ ನಾಗಾರ್ಜುನ ಚಿತ್ರದಿಂದ ಎರಡನೇ ಹೀರೋಯಿನ್​ ಔಟ್​; ಇದಕ್ಕಿದೆ ಮಹತ್ವದ ಕಾರಣ
ನಾಗಾರ್ಜುನ

ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ತಮ್ಮ ಸಿನಿಮಾದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಚಿತ್ರದ ನಟಿಯ ಆಯ್ಕೆ ಮಾಡೋದು ನಿರ್ದೇಶಕರೇ ಆದರೂ ಅಕ್ಕಿನೇನಿ ನಾಗಾರ್ಜುನ ಅವರ ಸಲಹೆ ಪಡೆಯುತ್ತಾರೆ. ಈಗ ನಾಗಾರ್ಜುನ ಅವರ ಸಲಹೆಯಂತೆ ಹೀರೋಯಿನ್​ ಒಬ್ಬರಿಗೆ ಚಿತ್ರದಿಂದ ಗೇಟ್​ಪಾಸ್​ ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹೀಗೆ ಒಂದೇ ಚಿತ್ರದಿಂದ ಹೊರ ನಡೆದ ಎರಡನೇ ಹೀರೋಯಿನ್​ ಇವರಾಗಿದ್ದಾರೆ. ಅಷ್ಟಕ್ಕೂ ಹೀಗೆ ಹೊರ ಹೋದ ಹೀರೋಯಿನ್​ ಯಾರು? ಜಾಕ್ವೆಲಿನ್​ ಫರ್ನಾಂಡಿಸ್ (Jacqueline Fernandez)​. ಯಾವುದು ಆ ಸಿನಿಮಾ? ‘ದಿ ಘೋಸ್ಟ್​’ (The Ghost).

ನಾಗಾರ್ಜುನ ‘ದಿ ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಆರಂಭದಲ್ಲಿ ನಾಯಕಿಯಾಗಿ ಕಾಜಲ್​ ಅಗರ್​​ವಾಲ್​​​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಪ್ರೆಗ್ನೆನ್ಸಿ ಕಾರಣ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಕಾರಣಕ್ಕೆ ಈಗ ಜಾಕ್ವೆಲಿನ್​ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು. ಆದರೆ, 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಕಿಂಗ್​ಪಿನ್​ ಜತೆ ಅವರಿಗೆ ನಂಟಿದೆ ಎನ್ನಲಾಗಿದೆ. ಇದರಿಂದ ಅವರ ಖ್ಯಾತಿಗೆ ಕಪ್ಪುಚುಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಂಡರೆ ಸಿನಿಮಾಗೆ ಹಿನ್ನಡೆ ಆಗಬಹುದು ಎನ್ನುವ ಭಯ ಚಿತ್ರತಂಡವನ್ನು ಕಾಡಿದೆ. ಈ ಕಾರಣಕ್ಕೆ ಅವರನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಅಕ್ಕಿನೇನಿ ನಾಗಾರ್ಜುನ ಕೂಡ ಸಮ್ಮತಿ ನೀಡಿದ್ದಾರೆ.

ಸದ್ಯ, ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಅವರನ್ನು ಚಿತ್ರದಲ್ಲಿ ಮುಂದುವರಿಸಿದರೆ ಸಿನಿಮಾ ಮೈಲೇಜ್​ ಕಡಿಮೆ ಆಗಬಹುದು. ಇದು ಅವರನ್ನು ಚಿತ್ರತಂಡದಿಂದ ಹೊರಗಿಡಲು ಮುಖ್ಯಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿಲ್ಲ.

ಜಾಕ್ವೆಲಿನ್​ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಸಲ್ಮಾನ್​ ಖಾನ್​ ಬಳಗದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಮೂಲದ ಈ ಚೆಲುವೆಗೆ ಸುಕೇಶ್​ ಚಂದ್ರಶೇಖರ್​ ಜೊತೆಗಿನ ಸಹವಾಸವೇ ಮುಳುವಾಗಿದೆ. ಒಟ್ಟಾರೆ ಪ್ರಕರಣದಿಂದ ಅವರು ಮಾನಸಿಕವಾಗಿ ವಿಚಲಿತರಾಗಿದ್ದಾರೆ. ಹಾಗಾಗಿ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನೂ ಓದಿ: ಎಲ್ಲರ ಎದುರು ಸ್ವಾರ್ಥ ಮೆರೆದ ಅಕ್ಕಿನೇನಿ ನಾಗಾರ್ಜುನ; ಅಭಿಮಾನಿಗಳಿಂದ ಛೀಮಾರಿ

ಚಿತ್ರರಂಗದ ಅನಿಶ್ಚಿತತೆ ನಡುವೆ ಹೊಸ ಸಾಹಸಕ್ಕೆ ಮುಂದಾದ ಅಕ್ಕಿನೇನಿ ನಾಗಾರ್ಜುನ-ನಾಗ ಚೈತನ್ಯ

Click on your DTH Provider to Add TV9 Kannada