AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯುಸಿರಿರುವವರೆಗೂ ನೀನೇ ನನ್ನವಳು!: ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ

ಕೊನೆಯುಸಿರಿರುವವರೆಗೂ ನೀನೇ ನನ್ನವಳು!: ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ

ಅಕ್ಷಯ್​ ಪಲ್ಲಮಜಲು​​
|

Updated on: May 28, 2026 | 7:16 PM

Share

ದೆಹಲಿಯಿಂದ ವೈರಲ್ ಆಗಿರುವ ಈ ವಿಡಿಯೋದಲ್ಲಿ, ICUನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ತನ್ನ ಪತ್ನಿಗೆ ಪತಿಯೊಬ್ಬರು ಚುಮರಿ ಹೊದಿಸಿ, ಸಿಂಧೂರ ಇಟ್ಟು ಅಚಲ ಪ್ರೀತಿ-ಬದ್ಧತೆಯನ್ನು ತೋರಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಗೆ "ನಾನು ನಿನ್ನ ಜೊತೆ ಸದಾ ಇರುತ್ತೇನೆ" ಎಂಬ ಭರವಸೆ ನೀಡಿದ ಈ ಭಾವುಕ ಕ್ಷಣ, ಇಂದಿನ ಜಗತ್ತಿನಲ್ಲಿ ನಿಜವಾದ ಪ್ರೀತಿಯ ಮಹತ್ವವನ್ನು ಸಾರಿದೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದು ವೈರಲ್ ಆಗಿದೆ.

ದೆಹಲಿ, ಮೇ.28: “ಪ್ರೀತಿ ಅಂದರೆ ಹೀಗಿರಬೇಕು, ಕೊನೆಯುಸಿರಿರುವವರೆಗೂ ಜೊತೆಯಾಗಿ ಬಾಳಬೇಕು” ಎಂಬ ಮಾತಿಗೆ ಇಲ್ಲೊಂದು ಅತ್ಯಂತ ಭಾವುಕ ಹಾಗೂ ಕಣ್ಣೀರು ತರಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಐಸಿಯು (ICU) ಹಾಸಿಗೆಯ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತನ್ನ ಪ್ರೀತಿಯ ಪತ್ನಿಗೆ, ಪತಿ ಸಾಂಪ್ರದಾಯಿಕ ಚುಮರಿ (Chunari) ಹೊದಿಸಿ, ಹಣೆಗೆ ಸಿಂಧೂರ ಇಟ್ಟು ತನ್ನ ಪತಿ ಧರ್ಮ ಹಾಗೂ ಜೀವಮಾನದ ಒಡನಾಟದ ಭಾಷೆಯನ್ನು ಅತ್ಯಂತ ಭಕ್ತಿ-ಪ್ರೀತಿಯಿಂದ ನಿಭಾಯಿಸಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಆಸ್ಪತ್ರೆಯ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ವೈದ್ಯರು ಆಕೆಯ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಪತ್ನಿಯ ಆಸೆಯಂತೆ ಆಕೆಗೆ ಹೊಸ ಮದುಮಗಳಂತೆ ಸುಂದರವಾದ ಶಾಲು (Chunari) ಹೊದಿಸಿ, ಮುತ್ತೈದೆಯ ಸಂಕೇತವಾದ ಸಿಂಧೂರವನ್ನು ಆಕೆಯ ಹಣೆಗೆ ಇಟ್ಟು, “ನೀನು ಎಷ್ಟೇ ಕಷ್ಟದಲ್ಲಿದ್ದರೂ ನಾನು ನಿನ್ನ ಜೊತೆಯೇ ಇರುತ್ತೇನೆ” ಎಂಬ ಭರವಸೆ ನೀಡಿದ್ದಾನೆ. ಎಕ್ಸ್​​​ ಖಾತೆಯಲ್ಲಿ ಈ ಭಾವುಕ ಕ್ಷಣದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, “ಹಣ ಮತ್ತು ಆಸ್ತಿಯನ್ನು ಪ್ರೀತಿಸುವ ಇಂದಿನ ಜಗತ್ತಿನಲ್ಲಿ, ನಿಜವಾದ ಪ್ರೀತಿ ಅಂದರೆ ಏನು ಎಂಬುದನ್ನು ಈ ದಂಪತಿ ತೋರಿಸಿಕೊಟ್ಟಿದ್ದಾರೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More