ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ

TV9 Digital Desk

| Edited By: ಮದನ್​ ಕುಮಾರ್​

Updated on: Jan 14, 2022 | 11:54 AM

Katrina Kaif Vicky Kaushal: ಉತ್ತರ ಭಾರತದಲ್ಲಿ ಸಂಕ್ರಾಂತಿ ಹಬ್ಬವನ್ನು ಲೋಹ್ರಿ ಎಂದು ಆಚರಿಸುತ್ತಾರೆ. ಪಂಜಾಬ್​ ಮೂಲದವರಾದ ವಿಕ್ಕಿ ಕೌಶಲ್​ ಮನೆಯಲ್ಲೂ ಹಬ್ಬದ ಸಡಗರ ಜೋರಾಗಿದ್ದು, ಕತ್ರಿನಾ ಕೈಫ್​ ಅಡುಗೆ ಕಲಿಯುತ್ತಿದ್ದಾರೆ.

ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ
ಕತ್ರಿನಾ ಕೈಫ್​, ವಿಕ್ಕಿ ಕೌಶಲ್

ನಟಿ ಕತ್ರಿನಾ ಕೈಫ್​ (Katrina Kaif) ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಬಾಲಿವುಡ್​ನ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ನಾಯಕಿಯಾಗಿ ಮಿಂಚುತ್ತಿದ್ದಾರೆ. ಕಳೆದ ವರ್ಷ ಅಕ್ಷಯ್​ ಕುಮಾರ್​ ಜೊತೆ ನಟಿಸಿದ ‘ಸೂರ್ಯವಂಶಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಇಷ್ಟೆಲ್ಲ ಬೇಡಿಕೆ ಇರುವಾಗಲೇ ಅವರು ವಿಕ್ಕಿ ಕೌಶಲ್​ (Vicky Kaushal) ಜೊತೆ ಮದುವೆ ಆಗಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತು. ವಿವಾಹದ ಬಳಿಕ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಮೊದಲ ಸಂಕ್ರಾಂತಿ (Sankranti 2022) ಹಬ್ಬವನ್ನು ಆಚರಿಸುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕತ್ರಿನಾ ಅವರು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಗಂಡನ ಮನೆಯಲ್ಲಿ ಅವರು ಅಡುಗೆ ಕಲಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಕತ್ರಿನಾ ಕೈಫ್​ ಲಂಡನ್​ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್​ ಆಗಿದ್ದಾರೆ. ಈಗ ವಿಕ್ಕಿ ಕೌಶಲ್​ ಅವರನ್ನು ಮದುವೆಯಾಗಿ ಪಂಜಾಬ್​ನ ಸೊಸೆ ಆಗಿದ್ದಾರೆ. ಮದುವೆ ಬಳಿಕ ಅವರು ಪಂಜಾಬಿ ಸಂಪ್ರದಾಯವನ್ನು ಪಾಲಿಸಲು ಆರಂಭಿಸಿದ್ದಾರೆ. ಪಂಜಾಬಿ ಶೈಲಿಯ ಕೆಲವು ತಿನಿಸುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಅವರು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ವಿಕ್ಕಿ ಕೌಶಲ್​ ಅವರ ತಾಯಿ ವೀಣಾ ಕೌಶಲ್​ ಅವರು ಕತ್ರಿನಾ ಕೈಫ್​ಗೆ ಅಡುಗೆ ಹೇಳಿಕೊಡುತ್ತಿದ್ದಾರೆ. ರೆಸಿಪಿ ತಿಳಿದುಕೊಳ್ಳಲು ಯೂಟ್ಯೂಬ್​ನಲ್ಲಿ ಸಾಕಷ್ಟು ವಿಡಿಯೋಗಳನ್ನು ಕೂಡ ಕತ್ರಿನಾ ನೋಡುತ್ತಿದ್ದಾರೆ. ಇದರ ಜೊತೆಗೆ ಪಂಜಾಬಿ ಭಾಷೆಯನ್ನು ಕಲಿತುಕೊಳ್ಳಲು ಕೂಡ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿವೆ.

ಉತ್ತರ ಭಾರತದಲ್ಲಿ ಸಂಕ್ರಾಂತಿ ಹಬ್ಬವನ್ನು ಲೋಹ್ರಿ ಎಂದು ಆಚರಿಸುತ್ತಾರೆ. ಪಂಜಾಬ್​ ಮೂಲದವರಾದ ವಿಕ್ಕಿ ಕೌಶಲ್​ ಮನೆಯಲ್ಲೂ ಈ ಹಬ್ಬ ಆಚರಿಸಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಕತ್ರಿನಾ ಕೈಫ್​ ಭಾಗಿಯಾಗಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ವಿಕ್ಕಿ ಕೌಶಲ್​ ಅವರು ಎಲ್ಲರಿಗೂ ಲೋಹ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಜೋಡಿಯ ಮದುವೆ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ ಮದುವೆಯ ವಿಡಿಯೋ ಇನ್ನೂ ಲಭ್ಯವಾಗಿಲ್ಲ. ಒಟಿಟಿ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅವರು ತಮ್ಮ ಮದುವೆ ವಿಡಿಯೋ ಪ್ರಸಾರಕ್ಕೆ ಬಹುಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಭಾರಿ ವೈಭವದಿಂದ ನಡೆದ ಆ ಮದುವೆಯ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಕತ್ರಿನಾ ಕೈಫ್​ ಹಾಗೂ ವಿಜಯ್​ ಸೇತುಪತಿಗೆ ವಿಶೇಷ ಕ್ಲಾಸ್​; ಇದು ಹೊಸ ಸಿನಿಮಾ ಅಪ್​ಡೇಟ್​

ವಿಕ್ಕಿ ಕೌಶಲ್ ಬೈಕ್ ನಂಬರ್ ಪ್ಲೇಟ್ ಪ್ರಕರಣ; ಎಲ್ಲಕ್ಕೂ ಕಾರಣ ಒಂದೇ ಒಂದು ಬೋಲ್ಟ್ ಎಂದರೆ ನೀವು ನಂಬಲೇಬೇಕು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada