AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​​ ಸಿನಿಮಾನಲ್ಲಿ ಕುಣಿದು ಕುಪ್ಪಳಿಸಿದ ಕನ್ನಡಿಗರು

Raj B Shetty movie: ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಈ ಹಾಡು ವಿಶೇಷವಾಗಿ ರಾಜ್ ಬಿ ಶೆಟ್ಟಿಯ ಮೇಲೆ ಚಿತ್ರಿತಗೊಂಡಿರುವುದು ವಿಶೇಷ. ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಮತ್ತೊಬ್ಬ ಕನ್ನಡದ ನಿರ್ದೇಶಕರೂ ಇದ್ದಾರೆ.

ಬಾಲಿವುಡ್​​ ಸಿನಿಮಾನಲ್ಲಿ ಕುಣಿದು ಕುಪ್ಪಳಿಸಿದ ಕನ್ನಡಿಗರು
Bandar Movie Song
ಮಂಜುನಾಥ ಸಿ.
|

Updated on:May 28, 2026 | 6:41 PM

Share

ಕನ್ನಡದ ನಟ-ನಟಿಯರು ಬಾಲಿವುಡ್ (Bollywood)​ ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ತುಸು ಕಡಿಮೆ. ಬಾಲಿವುಡ್​ನ ಹಲವು ನಟ-ನಟಿಯರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಈ ಹಾಡು ವಿಶೇಷವಾಗಿ ರಾಜ್ ಬಿ ಶೆಟ್ಟಿಯ ಮೇಲೆ ಚಿತ್ರಿತಗೊಂಡಿರುವುದು ವಿಶೇಷ. ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಮತ್ತೊಬ್ಬ ಕನ್ನಡದ ನಿರ್ದೇಶಕರೂ ಇದ್ದಾರೆ.

‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಹಲವು ಕಲ್ಟ್ ಸಿನಿಮಾಗಳ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ‘ಬಂದರ್’ ಹೆಸರಿನ ಹೊಸ ಹಿಂದಿ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಬಾಬಿ ಡಿಯೋಲ್ ನಾಯಕ. ಇದೇ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಸಹ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ‘ಬಂದರ್’ ಸಿನಿಮಾದ ‘ಪಿಂಜರಾ’ ಹೆಸರಿನ ಹಾಡೊಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿ ರಾಜ್ ಬಿ ಶೆಟ್ಟಿ ಪಾತ್ರವೇ ಪ್ರಧಾನ.

ಜೈಲಿನಲ್ಲಿ ಚಿತ್ರೀಕರಣಗೊಂಡಿರುವ ಹಾಡು ಇದಾಗಿದ್ದು, ಜೈಲಿನ ಕೈದಿ ಆಗಿರುವ ರಾಜ್ ಬಿ ಶೆಟ್ಟಿ ಚಿತ್ರ ವಿಚಿತ್ರವಾಗಿ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾರೆ, ರಾಜ್ ಬಿ ಶೆಟ್ಟಿಯ ಜೊತೆಗೆ ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ನಟೇಶ್ ಹೆಗ್ಡೆ ಸಹ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರೂ ಸಹ ಕೈದಿಗಳ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ಸೇರಿ ಇತರೆ ಕೆಲ ಕೈದಿಗಳ ಜೊತೆಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

‘ಪಿಂಜರಾ’ ಹಾಡು ಸಹ ಬಹಳ ಭಿನ್ನವಾಗಿದ್ದು, ಪಿಂಜರಾ ಎಂದರೆ ಹಿಂದಿಯಲ್ಲಿ ಪಂಜರ ಅಥವಾ ಜೈಲು. ಹಾಡಿನಲ್ಲಿ ಸಂಸಾರ ಎಂಬುದು ಪಂಜರ ಎಂಬ ಸಾಲುಗಳಿವೆ. ‘ಪತ್ನಿ ಪಂಜರ, ಗರ್ಲ್​​ಫ್ರೆಂಡ್ ಪಂಜರ, ಮೊಬೈಲ್ ಪಂಜರ, ಟ್ಯಾಕ್ಸ್ ಪಂಜರ, ಇಎಂಐ ಪಂಜರ, ಧರ್ಮ ಪಂಜರ, ಜಾತಿ ಪಂಜರ’ ಹೀಗೆ ಸಾಗುತ್ತದೆ ಹಾಡು. ಹಾಡಿಗೆ ಬಳಸಲಾಗಿರುವ ಸಂಗೀತವೂ ಭಿನ್ನವಾಗಿದೆ. ಪಂಜರದಲ್ಲಿರುವ ಕೈದಿಗಳು ಹೊರಗಿನ ಪ್ರಪಂಚದವರು ತಮಗೆ ಗೊತ್ತಿಲ್ಲದೇ ಪಂಜರದಲ್ಲಿ ಬದುಕುತ್ತಿದ್ದಾರೆಂಬುದನ್ನು ಹಾಡು ಹೇಳುತ್ತಿದೆ.

‘ಬಂದರ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಗಿದ್ದು, ನಿಜ ಘಟನೆಯೊಂದರ ಮೇಲೆ ಆಧರಿತವಾಗಿದೆ. ಸೆಲೆಬ್ರಿಟಿ ವ್ಯಕ್ತಿಯೊಬ್ಬ ಸುಳ್ಳು ಅತ್ಯಾಚಾರದ ಕೇಸಿನಲ್ಲಿ ಜೈಲಿಗೆ ಹೋಗುವುದು ಅಲ್ಲಿಂದ ಹೇಗೆ ಬಿಡಿಸಿಕೊಳ್ಳುತ್ತಾನೆ. ಜೈಲಿನಲ್ಲಿ ಆತ ಎದುರಿಸುವ ಸಮಸ್ಯೆಗಳು ಯಾವುವು ಎಂಬಿತ್ಯಾದಿ ವಿಷಯಗಳನ್ನು ಸಿನಿಮಾದ ಕತೆ ಒಳಗೊಂಡಿದೆ. ಜೂನ್ 5 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:16 pm, Thu, 28 May 26

Follow Us
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು