ಎಲ್ಲರ ಎದುರು ಸ್ವಾರ್ಥ ಮೆರೆದ ಅಕ್ಕಿನೇನಿ ನಾಗಾರ್ಜುನ; ಅಭಿಮಾನಿಗಳಿಂದ ಛೀಮಾರಿ

ಎಲ್ಲರ ಎದುರು ಸ್ವಾರ್ಥ ಮೆರೆದ ಅಕ್ಕಿನೇನಿ ನಾಗಾರ್ಜುನ; ಅಭಿಮಾನಿಗಳಿಂದ ಛೀಮಾರಿ
ನಾಗಾರ್ಜುನ

ಪವನ್ ಕಲ್ಯಾಣ್‌ ಅವರಿಂದ ಹಿಡಿದು ನಾನಿವರೆಗೆ, ನಾರಾಯಣ ಮೂರ್ತಿಯಿಂದ ಹಿಡಿದು ರಾಮ್ ಗೋಪಾಲ್ ವರ್ಮಾವರೆಗೆ ಎಲ್ಲರೂ ಆಂಧ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಚಿರಂಜೀವಿ ಅವರು ಸರ್ಕಾರದ ಜತೆ ಮಾತುಕತೆ ನಡೆಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ.

TV9kannada Web Team

| Edited By: Rajesh Duggumane

Jan 06, 2022 | 2:58 PM

ಅಕ್ಕಿನೇನಿ ನಾಗಾರ್ಜುನ (Akkineni Nagarjuna)  ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರು ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಅವರು ನಟನೆ ಜತೆಗೆ ನಿರೂಪಣೆಯಲ್ಲೂ ಹೆಸರು ಮಾಡಿದ್ದಾರೆ. ತೆಲುಗು ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋ ನಡೆಸಿಕೊಡುವ ಮೂಲಕ ಮನೆ ಮಾತಾಗಿದ್ದಾರೆ. ಈಗ ಅವರು ನೀಡಿದ ಹೇಳಿಕೆಯೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ಕೂಡ ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸಿನಿಮಾ ​ ಟಿಕೆಟ್​ ವಿಚಾರದಲ್ಲಿ ಆಂಧ್ರ ಪ್ರದೇಶದಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಸಿನಿಮಾ ಟಿಕೆಟ್​ಗೆ ಸರ್ಕಾರ ದರ ನಿಗದಿ ಮಾಡಿದೆ. ನಗರ ವ್ಯಾಪ್ತಿಯಲ್ಲಿ ಇರುವ ಮಲ್ಟಿಪ್ಲೆಕ್ಸ್​ಗಳಗೆ ಟಿಕೆಟ್​ ಮೊತ್ತ 75 ರೂಪಾಯಿ ಕನಿಷ್ಠ ಹಾಗೂ 250 ಗರಿಷ್ಟ ಮೊತ್ತ ನಿಗದಿ ಮಾಡಿದೆ. ಎಸಿ ಹಾಗೂ ಎಸಿ ರಹಿತ ಚಿತ್ರಮಂದಿರಗಳ ಟಿಕೆಟ್​ ದರ 20-100 ರೂ ಅಂತರದಲ್ಲಿ ಇರಬೇಕು. ಪಂಚಾಯತ್​ ಭಾಗದಲ್ಲಿ ಟಿಕೆಟ್ ಕನಿಷ್ಠ ದರ 20 ರೂಪಾಯಿಗೂ ಕಡಿಮೆ ಇದೆ. ಇದು ಸಿನಿಮಾ ಕಲೆಕ್ಷನ್​ಗೆ ಹೊಡೆತ ನೀಡುತ್ತಿದೆ. ಇದಕ್ಕೆ ನಾಗಾರ್ಜುನ ಆಕ್ಷೇಪ ವ್ಯಕ್ತಪಡಿಸಿಲ್ಲ.

ಪವನ್ ಕಲ್ಯಾಣ್‌ ಅವರಿಂದ ಹಿಡಿದು ನಾನಿವರೆಗೆ, ನಾರಾಯಣ ಮೂರ್ತಿಯಿಂದ ಹಿಡಿದು ರಾಮ್ ಗೋಪಾಲ್ ವರ್ಮಾವರೆಗೆ ಎಲ್ಲರೂ ಆಂಧ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಚಿರಂಜೀವಿ ಅವರು ಸರ್ಕಾರದ ಜತೆ ಮಾತುಕತೆ ನಡೆಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮೋಹನ್ ಬಾಬು ಅವರು ಒಗ್ಗಟ್ಟಾಗಿರಲು ಮತ್ತು ಟಿಕೆಟ್ ದರದ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ, ನಾಗಾರ್ಜುನ ಭಿನ್ನ ನಿಲುವು ತಾಳಿದ್ದಾರೆ.

ನಾಗಾರ್ಜುನ ನಟನೆಯ ‘ಬಂಗಾರ್ರಾಜು’ ಚಿತ್ರ ಜನವರಿ 15ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್​ಗೂ ಮೊದಲು ಮಾತನಾಡಿರುವ ಅವರು, ‘ಈ ದರದಿಂದ ನಮ್ಮ ಸಿನಿಮಾಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿರುವಾಗ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎನ್ನುವ ಮಾತು ಕೇಳಿ ಬಂದಿದೆ. ಇದರಲ್ಲಿ ನಾಗಾರ್ಜುನ ಅವರ ಸ್ವಾರ್ಥ ಇದೆ ಎಂದು ಕೆಲವರು ಹೇಳಿದ್ದಾರೆ. ಅಭಿಮಾನಿಗಳು ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Akkineni Nagarjuna: ನಿಂತ ಜಾಗದಲ್ಲೇ ಸಾವಿರ ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ

Follow us on

Related Stories

Most Read Stories

Click on your DTH Provider to Add TV9 Kannada