ಕಪಿಲ್​ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?

ಕಪಿಲ್​ ಶರ್ಮಾಗೆ ಈ ವಿಚಾರ ತಿಳಿದು ಹೊರಗೆ ಇದ್ದ ಗಾರ್ಡ್ಸ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ನಂತರ ಅವರು ಸ್ಮೃತಿ ಇರಾನಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ, ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

ಕಪಿಲ್​ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?
ಸ್ಮೃತಿ ಇರಾನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 26, 2021 | 6:12 PM

ಕಪಿಲ್​ ಶರ್ಮಾ ನಡೆಸಿಕೊಡುತ್ತಿರುವ ‘ದಿ ಕಪಿಲ್​ ಶರ್ಮಾ ಶೋ’ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಸಿನಿಮಾಗೆ ಪ್ರಚಾರ ಮಾಡಿ ಹೋಗಿದ್ದಾರೆ. ಸೋನು ಸೂದ್, ಅಕ್ಷಯ್​ ಕುಮಾರ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಈ ಮೊದಲು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಕಪಿಲ್​ ಶರ್ಮಾ ಶೋನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಅವರಿಗೆ ಭಾರೀ ಮುಖಭಂಗವಾಗಿದೆ. ಅವರಿಗೆ ಸೆಟ್​ ಒಳಗೆ ತೆರಳೋಕೆ ಎಂಟ್ರಿ ಸಿಕ್ಕಿಲ್ಲ. ಹೀಗಾಗಿ, ಅವರು ದೆಹಲಿಗೆ ಮರಳಿದ್ದಾರೆ.

ಸ್ಮೃತಿ ಇರಾನಿ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡವರು. ನಂತರ ಅವರು ರಾಜಕೀಯಕ್ಕೆ ಬಂದು ಯಶಸ್ಸು ಕಂಡರು. ಈಗ ಅವರು ಲೇಖಕಿ ಕೂಡ ಆಗುತ್ತಿದ್ದಾರೆ. ಹಲವು ವರ್ಷಗಳ ಶ್ರಮದಿಂದ ‘ಲಾಲ್​ ಸಲಾಮ್​’ ಹೆಸರಿನ ಪುಸ್ತಕ ಬರೆದಿದ್ದಾರೆ. ಇದರ ಪ್ರಚಾರಕ್ಕಾಗಿ ಅವರು ಕಪಿಲ್​ ಶರ್ಮಾ ಶೋಗೆ ಬರಬೇಕಿತ್ತು. ಆದರೆ, ಭದ್ರತಾ ಸಿಬ್ಬಂದಿ ಅವರನ್ನು ಒಳಗೆಬಿಟ್ಟುಕೊಂಡಿಲ್ಲ.

ಒಂದು ಗಂಟೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದಾಗಿ ಸ್ಮೃತಿ ಅವರು ಹೇಳಿದ್ದರು. ದೆಹಲಿಯಿಂದ ಅವರು ಮುಂಬೈಗೆ ಬಂದಿದ್ದರು. ಆದರೆ, ಶೋಗೆ ಬರುವಾಗ ಅವರು ಏಕಾಂಗಿಯಾಗಿ ಬಂದಿದ್ದರು. ಯಾವುದೇ ಭದ್ರತಾ ಸಿಬ್ಬಂದಿಯನ್ನು ಜತೆಯಲ್ಲಿ ಇಟ್ಟುಕೊಂಡಿರಲಿಲ್ಲ. ಸೆಟ್​ ಬಳಿ ಬಂದು ‘ನಾನು ಸ್ಮೃತಿ ಇರಾನಿ. ಕಾರ್ಯಕ್ರಮಕ್ಕೆ ನಾನು ಇಂದು ಅತಿಥಿಯಾಗಿ ಬಂದಿದ್ದೇನೆ. ಹೀಗಾಗಿ ಒಳಗೆ ಬಿಡಿ’ ಎಂದು ಕೋರಿದ್ದಾರೆ. ಯಾವುದೇ ಭದ್ರತೆ ಇಲ್ಲದೆ ಬಂದಿದ್ದನ್ನು ನೋಡಿ ಸೆಟ್​ನ ಹೊರಗೆ ನಿಂತಿದ್ದ ಗಾರ್ಡ್ಸ್​​​ಗೆ ಅನುಮಾನ ಬಂದಿದೆ. ಸ್ಮೃತಿ ಪರಿಪರಿಯಾಗಿ ವಿವರಿಸಿದರೂ ಒಳಗೆ ಬಿಡೋಕೆ ನಿರಾಕರಿಸಿದ್ದಾರೆ. ಅರ್ಧಗಂಟೆ ಕಾದ ನಂತರ ಸಿಟ್ಟಿನಿಂದಲೇ ಅವರು  ದೆಹಲಿಗೆ ಮರಳಿದ್ದಾರೆ ಎಂದು ವರದಿ ಆಗಿದೆ.

ಕಪಿಲ್​ ಶರ್ಮಾಗೆ ಈ ವಿಚಾರ ತಿಳಿದು ಹೊರಗೆ ಇದ್ದ ಗಾರ್ಡ್ಸ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ನಂತರ ಅವರು ಸ್ಮೃತಿ ಇರಾನಿಗೆ ಕರೆ ಮಾಡಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ, ನಡೆದ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಮತ್ತೆ ಸ್ಮೃತಿ ಇರಾನಿ ಕಾರ್ಯಕ್ರಮಕ್ಕೆ ಬರೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Smriti Irani: ತೂಕ ಇಳಿಸಿಕೊಂಡ ಸ್ಮೃತಿ ಇರಾನಿ ಫೋಟೋ ವೈರಲ್; ಬಾಲಿವುಡ್ ನಟಿಯರಿಂದಲೂ ಮೆಚ್ಚುಗೆ

ಐಟಿ ದಾಳಿ ಬಗ್ಗೆ ಮಾತಾಡಿ ಸೋನು ಸೂದ್​ಗೆ ಕುಟುಕಿದ ಕಪಿಲ್​ ಶರ್ಮಾ; ರಿಯಲ್​ ಹೀರೋ ಪ್ರತಿಕ್ರಿಯೆ ಹೇಗಿತ್ತು?

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ