‘100’ ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್; ಯಾವಾಗ ತೆರೆಗೆ? ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

'100' ಓಟಿಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್; ಯಾವಾಗ ತೆರೆಗೆ? ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ
‘100’ ಚಿತ್ರದ ಪೋಸ್ಟರ್

ರಮೇಶ್ ಅರವಿಂದ್, ರಚಿತಾ ರಾಮ್ ಮೊದಲಾದವರು ನಟಿಸಿರುವ ‘100’ ಚಿತ್ರ ತನ್ನ ವಿಷಯ ವಸ್ತುವಿನಿಂದ ಗಮನ ಸೆಳೆದಿತ್ತು. ಇದೀಗ ಓಟಿಟಿ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ದೇಶದ ಮತ್ತಷ್ಟು ಜನರನ್ನು ತಲುಪಲು ತಯಾರಾಗಿದೆ.

TV9kannada Web Team

| Edited By: shivaprasad.hs

Jan 29, 2022 | 2:42 PM

ಇತ್ತೀಚೆಗೆ ಕನ್ನಡದ ಹಲವು ಚಿತ್ರಗಳು ಉತ್ತಮ ಓಟಿಟಿ (OTT) ಆಫರ್ ಗಿಟ್ಟಿಸಿಕೊಳ್ಳುತ್ತಿವೆ. ಅಲ್ಲದೇ ಓಟಿಟಿಯಲ್ಲಿ ಕನ್ನಡದ ಬೇಡಿಕೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಜೀ5 ನಲ್ಲಿ ತೆರೆಕಂಡ ‘ಭಜರಂಗಿ 2’ ಹಾಗೂ ‘ಗರುಡ ಗಮನ ವೃಷಭ ವಾಹನ’ ವೀಕ್ಷಣೆಯಲ್ಲಿ ದಾಖಲೆ ಬರೆದಿದ್ದಲ್ಲದೇ, ದೇಶಾದ್ಯಂತ ವೀಕ್ಷಕರನ್ನು ಸೆಳೆದಿತ್ತು. ಬಾಲಿವುಡ್ ಟಾಲಿವುಡ್ ಸೇರಿದಂತೆ ಇತರ ಚಿತ್ರರಂಗದ ತಾರೆಯರು ಈ ಚಿತ್ರಗಳನ್ನು ಇಷ್ಟಪಟ್ಟು, ಸಂತಸವನ್ನು ಹಂಚಿಕೊಂಡಿದ್ದರು. ಅಲ್ಲದೇ ವೀಕ್ಷಕರು, ಕನ್ನಡದ ಮತ್ತಷ್ಟು ಚಿತ್ರಗಳು ಓಟಿಟಿಯಲ್ಲಿ ತೆರೆಕಾಣಬೇಕು ಎಂದು ಆಶಿಸಿದ್ದರು. ಇದೀಗ ಕಾತರದಿಂದ ಕಾಯುತ್ತಿದ್ದವರಿಗೆ ಸಂತಸದ ಸುದ್ದಿ ಸಿಕ್ಕಿದೆ. ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ (Ramesh Aravind) ಅಕ್ಷನ್ ಕಟ್ ಹೇಳಿ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘100’ (100 Movie) ಚಿತ್ರಮಂದಿರಗಳಲ್ಲಿ ತೆರೆಕಂಡು ಎಲ್ಲರ ಗಮನ ಸೆಳೆದಿತ್ತು. ಇದೀಗ ಚಿತ್ರ ಓಟಿಟಿ ಬಿಡುಗಡೆಗೆ ಸಿದ್ಧವಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಮೂಡಿಬಂದಿದ್ದ ‘100’ ಸೈಬರ್ ಕ್ರೈಂ ಕುರಿತ ಕಥೆಯನ್ನು ಹೊಂದಿದ್ದ ಚಿತ್ರ. ಫ್ಯಾಮಿಲಿ ಮ್ಯಾನ್ ಆಗಿ, ಪೊಲೀಸ್ ಅಧಿಕಾರಿಯಾಗಿ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದರು. ರಚಿತಾ ರಾಮ್, ಪೂರ್ಣಾ ಮೊದಲಾದವರು ನಟಿಸಿದ್ದ ಈ ಚಿತ್ರ ನವೆಂಬರ್ 19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ವಿಮರ್ಶಕರಿಂದ, ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು.

‘100’ ಓಟಿಟಿ ಬಿಡುಗಡೆ ಯಾವಾಗ?

ಇದೀಗ ‘100’ ಚಿತ್ರ ಓಟಿಟಿಯಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಜೀ5 ಮೂಲಕ ತೆರೆಗೆ ಬರಲಿದೆ. ಫೆಬ್ರವರಿ 4ರಂದು ಚಿತ್ರ ‘ಜೀ5’ನಲ್ಲಿ ತೆರೆಗೆ ಬರಲಿದೆ ಎಂದು ರಮೇಶ್ ಅರವಿಂದ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರವು ಭಾಷೆಗಳನ್ನು ಮೀರಿ ವೀಕ್ಷಕರನ್ನು ತಲುಪಲಿದೆ. ಎಂ.ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಜೀ5 ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

‘100’ ಚಿತ್ರಕ್ಕೆ ಕನ್ನಡ ಖ್ಯಾತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಜಾಲಿ ಬಾಸ್ಟಿನ್​, ರವಿವರ್ಮಾ ಸಾಹಸ ನಿರ್ದೇಶನ ಮಾಡಿದ್ದು, ಪ್ರಕಾಶ್​ ಬೆಳವಾಡಿ, ಶೋಭರಾಜ್​, ರಾಜು ತಾಳಿಕೋಟೆ ಮುಂತಾದವರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಅವಕಾಶ ಸಿಗದಿದ್ದ ಪ್ರೇಕ್ಷಕರು ಫೆಬ್ರವರಿ 4ರಿಂದ ನೇರವಾಗಿ ಓಟಿಟಿ ಮೂಲಕ ‘100’ ಚಿತ್ರವನ್ನು ನೋಡಬಹುದಾಗಿದೆ.

ಇದನ್ನೂ ಓದಿ:

‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ

ಕಥೆ ಬರೆಯಲಿದ್ದಾರೆ ಅಲ್ಲು ಅರ್ಜುನ್​? ಕೊನೆಗೂ ಹೊರಬಿತ್ತು ದುಬೈ ಟ್ರಿಪ್​ನ ರಹಸ್ಯ

Follow us on

Related Stories

Most Read Stories

Click on your DTH Provider to Add TV9 Kannada