ಬ್ರಾ ಸೈಜ್​ ವಿಚಾರದಲ್ಲಿ ದೇವರನ್ನು ಎಳೆದು ತಂದ ಕಿರುತೆರೆ ನಟಿ ವಿರುದ್ಧ ಎಫ್​ಐಆರ್​ ದಾಖಲು

ಬ್ರಾ ಸೈಜ್​ ವಿಚಾರದಲ್ಲಿ ದೇವರನ್ನು ಎಳೆದು ತಂದ ಕಿರುತೆರೆ ನಟಿ ವಿರುದ್ಧ ಎಫ್​ಐಆರ್​ ದಾಖಲು
ಶ್ವೇತಾ ತಿವಾರಿ

ಫ್ಯಾಶನ್​ ಲೋಕದ ಬಗ್ಗೆ ​ ‘ಶೋ ಸ್ಟಾಪರ್’ ವೆಬ್​ ಸರಣಿ ಸಿದ್ಧಗೊಂಡಿದೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸೌರಭ್​ ರಾಜ್​ ಜೈನ್​ ಕೂಡ ಈ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ.

TV9kannada Web Team

| Edited By: Rajesh Duggumane

Jan 28, 2022 | 2:51 PM

ಇಂದು ಸೋಶಿಯಲ್​ ಮೀಡಿಯಾ ತುಂಬಾನೇ ಸ್ಟ್ರಾಂಗ್​ ಆಗಿದೆ. ಸೆಲೆಬ್ರಿಟಿಗಳು ನೀಡುವ ಹೇಳಿಕೆಗಳು ಕ್ಷಣಮಾತ್ರದಲ್ಲಿ ವೈರಲ್​ ಆಗಿ ಬಿಡುತ್ತವೆ. ಅದರಲ್ಲೂ ವಿವಾದಗಳು ಬಹುಬೇಗ ಉಗ್ರ ಸ್ವರೂಪ ಪಡೆದುಕೊಳ್ಳುತ್ತವೆ. ಈಗ ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ವಿಚಾರದಲ್ಲೂ ಹೀಗೆಯೇ ಆಗಿದೆ. ಅವರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಲ್ಲದೆ ಬ್ರಾ ವಿಚಾರ ಇಟ್ಟುಕೊಂಡು ಅವರು ದೇವರಿಗೆ ಅವಮಾನ ಮಾಡಿರುವುದನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ಶ್ವೇತಾ ತಿವಾರಿ (Shweta Tiwari ) ಅವರು ಇತ್ತೀಚೆಗೆ ಭೋಪಾಲ್​ಗೆ ತೆರಳಿದ್ದರು. ಹೊಸ ವೆಬ್​ ಸೀರಿಸ್​ ‘ಶೋ ಸ್ಟಾಪರ್’ (Show Stopper  Web Series) ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದರು. ಈ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ನಗೆ ಚಟಾಕಿ ಹಾರಿಸಿದ್ದಾರೆ. ಬ್ರಾ ಸೈಜ್​ ವಿಚಾರದಲ್ಲಿ ದೇವರನ್ನು ಎಳೆದು ತಂದಿದ್ದಾರೆ. ‘ನನ್ನ ಬ್ರಾ ಸೈಜ್​ ಅನ್ನು ದೇವರು ತೆಗೆದುಕೊಂಡಿದ್ದಾನೆ’ ಎಂದಿದ್ದರು ಶ್ವೇತಾ. ಕ್ಷಣಮಾತ್ರದಲ್ಲಿ ಈ ವಿಡಿಯೋ ವೈರಲ್​ ಆಗಿತ್ತು. ಎಲ್ಲರೂ ಶ್ವೇತಾ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಬಗ್ಗೆ ಗರಂ ಆಗಿದ್ದರು. ‘ಶ್ವೇತಾ ತಿವಾರಿ ಅವರ ಹೇಳಿಕೆಯನ್ನು ನಾನು ನೋಡಿದ್ದೇನೆ. ನಾನು ಇದನ್ನು ಖಂಡಿಸುತ್ತೇನೆ. ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದರು ನರೋತ್ತಮ್. ಆ ಬಳಿಕ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

ಫ್ಯಾಶನ್​ ಲೋಕದ ಬಗ್ಗೆ ​ ‘ಶೋ ಸ್ಟಾಪರ್’ ವೆಬ್​ ಸರಣಿ ಸಿದ್ಧಗೊಂಡಿದೆ. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದ ಸೌರಭ್​ ರಾಜ್​ ಜೈನ್​ ಕೂಡ ಈ ವೆಬ್​ ಸರಣಿಯಲ್ಲಿ ನಟಿಸಿದ್ದಾರೆ. ಸದ್ಯ, ಈ ವೆಬ್​ ಸರಣಿ ಬಗ್ಗೆಯೂ ಅನೇಕರು ಕಿಡಿಕಾರುತ್ತಿದ್ದಾರೆ.

ರಾಮ್​ ಚರಣ್​ ಪತ್ನಿಯ ವಿವಾದ 

ಉಪಾಸನಾ ಅವರು ನಟ ರಾಮ್​ ಚರಣ್​ ಪತ್ನಿ, ಅಪೋಲೋ ಫೌಂಡೇಷನ್​ನ ಉಪಾಧ್ಯಕ್ಷೆ, ಬಿ ಪಾಸಿಟಿವ್​ ಮ್ಯಾಗಜಿನ್​ನ ಎಡಿಟರ್​. ಅವರು ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ಸೋಶಿಯಲ್​ ವರ್ಕ್​ಗೆ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಈಗ ಸೋಶಿಯಲ್​ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದ ಗೋಪುರದ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಗೋಪುರದ ಮೇಲೆ ದೇವರ ಬದಲು ಜನರಿದ್ದಾರೆ. ಇದು ಎಡಿಟ್​ ಮಾಡಲಾದ ಫೋಟೋ. ಈ ಪೋಸ್ಟ್ ಇಷ್ಟಪಟ್ಟಿರುವ ಅವರು ಅದಕ್ಕೆ ಕ್ಯಾಪ್ಶನ್​ ನೀಡಿದ್ದಾರೆ. ‘ಪ್ರಗತಿಪರ, ಸಹಿಷ್ಣು ರಾಷ್ಟ್ರವನ್ನು ನಿರ್ಮಿಸಲು ಒಟ್ಟಾಗಿ ತೊಡಗೋಣ. ನನ್ನ ತಾಯಿ ಈ ಫೋಟೋ ಕಳಿಸಿದ್ದರು. ನನಗೆ ಇದು ಇಷ್ಟವಾಯಿತು. ಇದನ್ನು ಮಾಡಿದವರಿಗೆ ನಾನು ಮೆಚ್ಚುಗೆ ವ್ಯಕ್ತಪಡಿಸಬೇಕು’ ಎಂದು ಬರೆದುಕೊಂಡಿದ್ದಾರೆ ಅವರು. ‘ಹಿಂದೂಗಳ ದೇವಸ್ಥಾನಕ್ಕೆ ಈ ರೀತಿ ಮಾಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದೀರಿ. ಬೇರೆ ಧರ್ಮದವರ ಪುಣ್ಯಕ್ಷೇತ್ರಗಳ ಮೇಲೂ ಇದೇ ರೀತಿ ಮಾಡಿ, ಅದನ್ನು ಪೋಸ್ಟ್ ಮಾಡುವ ಧೈರ್ಯ ಇದೆಯೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ನಮ್ಮ ಸಂಸ್ಕೃತಿ ಬಗ್ಗೆ ಕೊಂಚವಾದರೂ ಗೌರವ ಕೊಡಿ. ಇದನ್ನು ನಾವು ಒಪ್ಪುವುದಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದರು.

ಇದನ್ನೂ ಓದಿ: ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ

ದೇವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ

Follow us on

Related Stories

Most Read Stories

Click on your DTH Provider to Add TV9 Kannada