ಕಥೆ ಬರೆಯಲಿದ್ದಾರೆ ಅಲ್ಲು ಅರ್ಜುನ್​? ಕೊನೆಗೂ ಹೊರಬಿತ್ತು ದುಬೈ ಟ್ರಿಪ್​ನ ರಹಸ್ಯ

ಕಥೆ ಬರೆಯಲಿದ್ದಾರೆ ಅಲ್ಲು ಅರ್ಜುನ್​? ಕೊನೆಗೂ ಹೊರಬಿತ್ತು ದುಬೈ ಟ್ರಿಪ್​ನ ರಹಸ್ಯ
ಅಲ್ಲು ಅರ್ಜುನ್

ಅಲ್ಲು ಅರ್ಜುನ್​ ಸದ್ಯ ದುಬೈ ಟ್ರಿಪ್​ನಲ್ಲಿದ್ದಾರೆ. ಅವರು ದುಬೈನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಜತೆಗೆ ಅವರು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ. ‘

TV9kannada Web Team

| Edited By: Rajesh Duggumane

Jan 29, 2022 | 1:22 PM

ಅಲ್ಲು ಅರ್ಜುನ್ (Allu Arjun)​ ಅವರು ಸದ್ಯ ‘ಪುಷ್ಪ’ ಸಿನಿಮಾ (Pushpa Movie) ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್​ ನೀಡಿದೆ. ಅಲ್ಲು ಅರ್ಜುನ್ ಟಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ​. ಅವರು ಬಾಲಿವುಡ್​​ನಲ್ಲೂ ಗಟ್ಟಿ ನೆಲೆ ಕಂಡುಕೊಳ್ಳೋಕೆ ಈ ಸಿನಿಮಾ ಸಹಕಾರಿಯಾಗಿದೆ. ‘ಶ್ರೀವಲ್ಲಿ..’ ಹಾಡಿಗೆ ಅವರು ಹಾಕಿದ ಐಕಾನಿಕ್​ ಸ್ಟೆಪ್​ಅನ್ನು ಎಲ್ಲರೂ ಅನುಕರಣೆ ಮಾಡುತ್ತಿದ್ದಾರೆ. ವೆಸ್ಟ್​ ಇಂಡೀಸ್​ ಕ್ರಿಕೆಟ್​ ಆಟಗಾರರಿಂದ ಹಿಡಿದು ಸಾಕಷ್ಟು ಮಂದಿ ಈ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಈ ಮೂಲಕ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬುತ್ತಿದೆ. ಈಗ ಅಲ್ಲು ಅರ್ಜುನ್​ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರು ಈಗ ಸಿನಿಮಾ ಕಥೆಯೊಂದನ್ನು ಬರೆಯಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಅಚ್ಚರಿ ಎಂದರೆ, ದುಬೈ ಟ್ರಿಪ್​ಗೂ ಅಲ್ಲು ಅರ್ಜುನ್​ ಕಥೆ ಬರೆಯುವುದಕ್ಕೂ (Allu Arjun Dubai Trip) ಒಂದು ಲಿಂಕ್​ ಇದೆ.

ಅಲ್ಲು ಅರ್ಜುನ್​ ಸದ್ಯ ದುಬೈ ಟ್ರಿಪ್​ನಲ್ಲಿದ್ದಾರೆ. ಅವರು ದುಬೈನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಜತೆಗೆ ಅವರು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಸದ್ಯ, ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ. ‘ಪುಷ್ಪ’ ಯಶಸ್ಸಿನ ಹಿನ್ನೆಲೆಯಲ್ಲಿ ಅವರು ಪ್ರವಾಸ ತೆರಳಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ, ಈ ವಿಚಾರದ ಬಗ್ಗೆ ಹೊಸದೊಂದು ಅಪ್​ಡೇಟ್​ ಬಂದಿದೆ.

ದುಬೈ ಮಾತ್ರವಲ್ಲದೆ, ಅಲ್ಲು ಅರ್ಜುನ್​ ಯುರೋಪ್​ ರಾಷ್ಟ್ರಗಳಿಗೂ ಭೇಟಿ ನೀಡಲಿದ್ದಾರೆ. ಪ್ರಕೃತಿ ಸೌಂದರ್ಯ ಸವಿಯಲು ಅಲ್ಲಿಗೆ ತೆರಳುತ್ತಾರೆ ಎಂದಾದರೆ ಈಗ ಹೇಳಿ ಮಾಡಿಸಿದ ಸಮಯ. ಈ ಕಾರಣಕ್ಕೆ ಇಲ್ಲಿಗೆ ಹೆಚ್ಚೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅಲ್ಲು ಅರ್ಜುನ್​ ಕೂಡ ಇದೇ ಪ್ಲ್ಯಾನ್​ ಮಾಡಿದ್ದಾರೆ. ಹಾಗಾದರೆ, ಅವರು ಯುರೋಪ್​ಗೆ ಭೇಟಿ ನೀಡುತ್ತಿರುವುದು ಏಕೆ? ಅದಕ್ಕೂ ಕಾರಣವಿದೆ.

ಮೂಲಗಳ ಪ್ರಕಾರ ಯುರೋಪ್​ಗೆ ತೆರಳಿ ಕಥೆ ಬರೆಯುವ ಆಲೋಚನೆಯಲ್ಲಿ ಅಲ್ಲು ಅರ್ಜುನ್​ ಇದ್ದಾರೆ. ಈ ಸಿನಿಮಾದಲ್ಲಿ ಅವರೇ ನಟಿಸುತ್ತಾರಾ ಅಥವಾ ಬೇರೆ ಹೀರೋಗೆ ಅವಕಾಶ ನೀಡುತ್ತಾರಾ ಎಂಬುದು ಸದ್ಯದ ಕುತೂಹಲ. ಒಂದೊಮ್ಮೆ ಅವರು ಕಥೆ ಬರೆದಿದ್ದೇ ಹೌದಾದಲ್ಲಿ ಅಲ್ಲು ಅರ್ಜುನ್​ ಟಾಲಿವುಡ್​ನಲ್ಲಿ ಕಥೆಗಾರನಾಗಿಯೂ ಗುರುತಿಸಿಕೊಳ್ಳಲಿದ್ದಾರೆ.

ಚೇ ಗುವಾರ ಅವರ ಮೋಟರ್​ ಸೈಕಲ್​ ಡೈರಿ ಆಧರಿಸಿ ಕಥೆ ಒಂದು ಸಿದ್ಧಗೊಂಡಿತ್ತು. ಈ ಕಥೆಗೆ ದಿಲ್​ ರಾಜು ಬಂಡವಾಳ ಹೂಡುವವರಿದ್ದರು. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ನಟಿಸಬೇಕಿತ್ತು. ಆರಂಭದಲ್ಲಿ ಕಥೆ ಕೇಳಿ ಒಪ್ಪಿದ್ದ ಅವರು ನಂತರ ಈ ಪ್ರಾಜೆಕ್ಟ್​​​ ಅನ್ನು ಕ್ಯಾನ್ಸಲ್​ ಮಾಡಿದ್ದರು. ಈಗ ಅಲ್ಲು ಅರ್ಜುನ್​ ಅವರು ಯುರೋಪ್​ನಲ್ಲಿ ಹೆಚ್ಚು ಸಮಯ ಕಳೆದು ಕಥೆ ಬರೆಯುವ ಆಲೋಚನೆಯಲ್ಲಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

Follow us on

Related Stories

Most Read Stories

Click on your DTH Provider to Add TV9 Kannada