ತಮನ್ನಾ ರೀತಿ ಡ್ಯಾನ್ಸ್ ಮಾಡ್ತಾರಾ ಈ ಸೆಲೆಬ್ರಿಟಿಗಳು? ಹೊಸ ಸವಾಲು ಹಾಕಿದ ‘ಮಿಲ್ಕಿ ಬ್ಯೂಟಿ’
ಸದ್ಯ ಬಿಡುಗಡೆ ಆಗಿರುವ ‘ಕೋಡ್ತೆ’ ಹಾಡಿನ ಲಿರಿಕಲ್ ವಿಡಿಯೋ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದರಿಂದ ತಮನ್ನಾ ಭಾಟಿಯಾ ಅವರಿಗೆ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತೆ ಎಂಬ ಕೌತುಕದ ಪ್ರಶ್ನೆ ಮೂಡಿದೆ.
ಗ್ಲಾಮರ್ ಮತ್ತು ನಟನೆಯಿಂದ ಅಭಿಮಾನಿಗಳ ಹೃದಯ ಕದ್ದಿರುವ ತಮನ್ನಾ ಭಾಟಿಯಾ (Tamannaah Bhatia) ಅವರು ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಅನೇಕ ಸಿನಿಮಾಗಳಲ್ಲಿ ಅವರು ಹೆಜ್ಜೆ ಹಾಕಿದ ಪರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದಲ್ಲಿನ ‘ಜೋಕೆ.. ನಾನು ಬಳ್ಳಿಯ ಮಿಂಚು’ ಹಾಡಿಗೆ (Tamannaah Bhatia Songs) ತಮನ್ನಾ ಭಾಟಿಯಾ ಅವರು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದರು. ಸಿನಿಮಾಗಳಲ್ಲಿ ಈ ರೀತಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕುವಂತೆ ತಮನ್ನಾಗೆ ಹಲವು ಆಫರ್ಗಳು ಬರುತ್ತಿವೆ. ಅವರು ಕುಣಿದರೆ ಹಾಡು ಸೂಪರ್ ಹಿಟ್ ಆಗೋದರಲ್ಲಿ ಅನುಮಾನವೇ ಬೇಡ ಎಂಬ ಅಭಿಪ್ರಾಯ ನಿರ್ಮಾಪಕರಿಗೆ ಇದೆ. ಈಗ ತಮನ್ನಾ ಅವರು ‘ಗನಿ’ (Ghani Movie) ಸಿನಿಮಾದ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅದರ ಝಲಕ್ ವೈರಲ್ ಆಗಿದೆ. ಈ ಸಿನಿಮಾಗೆ ವರುಣ್ ತೇಜ್ ಹೀರೋ. ಜಗಪತಿ ಬಾಬು ಮತ್ತು ಸಾಯಿ ಮಂಜ್ರೇಕರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ‘ಕೋಡ್ತೆ’ ಎಂಬ ಹಾಡಿನಲ್ಲಿ ತಮನ್ನಾ ಭಾಟಿಯಾ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
‘ಗನಿ’ ಸಿನಿಮಾಗೆ ತಮನ್ ಎಸ್. ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ‘ಕೋಡ್ತೆ’ ಹಾಡಿನ ಲಿರಿಕಲ್ ವಿಡಿಯೋ ಈಗ ಬಿಡುಗಡೆ ಆಗಿದೆ. ಇದರಲ್ಲಿ ತಮನ್ನಾ ಒಂದು ಸ್ಟೆಪ್ ಹಾಕಿದ್ದು, ಅದೇ ರೀತಿ ಡ್ಯಾನ್ಸ್ ಮಾಡಿ ತೋರಿಸುವಂತೆ ಈ ಸಿನಿಮಾದ ನಟ ವರುಣ್ ತೇಜ್ ಮತ್ತು ನಟಿ ಸಾಯಿ ಮಂಜ್ರೇಕರ್ ಅವರಿಗೆ ತಮನ್ನಾ ಸವಾಲು ಹಾಕಿದ್ದಾರೆ. ಇದನ್ನು ಅವರು #KodtheDanceChallenge ಎಂದು ಕರೆದಿದ್ದು, ಸದ್ಯ ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಒಂದು ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದರೆ ಆ ಚಿತ್ರ ಅರ್ಧ ಗೆದ್ದಂತೆಯೇ ಸರಿ. ಇತ್ತೀಚೆಗೆ ತೆರೆಕಂಡ ‘ಪುಷ್ಪ’ ಸಿನಿಮಾದ ಗೆಲವಿನ ಹಿಂದೆ ಆ ಚಿತ್ರದ ಹಾಡುಗಳ ಕೊಡುಗೆ ದೊಡ್ಡದಿದೆ. ‘ಹು ಅಂತೀಯಾ ಮಾವ ಊಹೂ ಅಂತೀಯಾ ಮಾವ’ ಎಂದು ಸಮಂತಾ ಕುಣಿದ ಪರಿಗೆ ಅಭಿಮಾನಿಗಳು ಫಿದಾ ಆದರು. ಹೀಗೆ ಸ್ಟಾರ್ ನಟಿಯರು ಐಟಂ ಸಾಂಗ್ನಲ್ಲಿ ಹೆಜ್ಜೆ ಹಾಕುವ ಟ್ರೆಂಡ್ ಈಗ ತುಂಬ ಕಾಮನ್ ಆಗಿದೆ. ತಮನ್ನಾಗೆ ‘ಕೋಡ್ತೆ’ ಹಾಡಿನಿಂದ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕು. ಸದ್ಯ ಬಿಡುಗಡೆ ಆಗಿರುವ ಈ ಹಾಡಿನ ಲಿರಿಕಲ್ ವಿಡಿಯೋ 30 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
View this post on Instagram
2005ರಿಂದಲೂ ಚಿತ್ರರಂಗದಲ್ಲಿ ತಮನ್ನಾ ಭಾಟಿಯಾ ಸಕ್ರಿಯರಾಗಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಹಾಗೂ ‘ಜಾಗ್ವಾರ್’ ಸಿನಿಮಾದ ಹಾಡುಗಳಲ್ಲಿ ಹೆಜ್ಜೆ ಹಾಕುವ ಮೂಲಕ ಕನ್ನಡ ಸಿನಿಪ್ರಿಯರನ್ನೂ ಅವರು ರಂಜಿಸಿದ್ದಾರೆ. ‘ಬಾಹುಬಲಿ’ ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಖ್ಯಾತಿ ಅವರಿಗೆ ಸಲ್ಲುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ.
ಇದನ್ನೂ ಓದಿ:
‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?
32ನೇ ವಸಂತಕ್ಕೆ ಕಾಲಿಟ್ಟ ತಮನ್ನಾ; ಮಿಲ್ಕಿ ಬ್ಯೂಟಿ ಕುರಿತು ನಿಮಗೆ ತಿಳಿದಿಲ್ಲದ ಸಂಗತಿಗಳು ಇಲ್ಲಿವೆ