ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ

ಹೊಸ ಸಿನಿಮಾ ಕುರಿತಂತೆ ಮಾತನಾಡಲು ಈಗಾಗಲೇ ಅಟ್ಲಿ ಮತ್ತು ಅಲ್ಲು ಅರ್ಜುನ್​ ಅವರು ಭೇಟಿ ಆಗಿದ್ದಾರೆ. ಅಟ್ಲಿ ಹೇಳಿರುವ ಕಥೆ ಅಲ್ಲು ಅರ್ಜುನ್​ಗೆ ಸಖತ್​ ಇಷ್ಟ ಆಗಿದೆ ಎನ್ನಲಾಗಿದೆ.

ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ
ಅಲ್ಲು ಅರ್ಜುನ್​, ಅಟ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on: Jan 24, 2022 | 8:39 AM

ನಟ ಅಲ್ಲು ಅರ್ಜುನ್​ ಅವರು ‘ಪುಷ್ಪ’ ಸಿನಿಮಾದ (Pushpa Movie) ಗೆಲುವಿನ ಬಳಿಕ ವೃತ್ತಿಜೀವನದಲ್ಲಿ ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಅವರ ಸಿನಿಮಾಗಳಿಗೆ ಮೊದಲಿನಿಂದಲೂ ದೇಶಾದ್ಯಂತ ಒಳ್ಳೆಯ ಬೇಡಿಕೆ ಇದೆ. ಅದರಲ್ಲೂ ‘ಪುಷ್ಪ’ ತೆರೆಕಂಡ ನಂತರ ಆ ಮಾತು ಮತ್ತೊಮ್ಮೆ ಸಾಬೀತಾಯಿತು. ಮೂಲತಃ ತೆಲುಗಿನಲ್ಲಿ ನಿರ್ಮಾಣವಾದ ಆ ಚಿತ್ರ ಇತರೆ ಭಾಷೆಗಳಿಗೂ ಡಬ್​ ಆಗಿ ಕಳೆದ ವರ್ಷ ಡಿ.17ರಂದು ತೆರೆಕಂಡಿತ್ತು. ಉತ್ತರದ ರಾಜ್ಯಗಳಲ್ಲೂ ಧೂಳೆಬ್ಬಿಸಿದ್ದು ‘ಪುಷ್ಪ’ ಹೆಚ್ಚುಗಾರಿಕೆ. ವಿಶ್ವಾದ್ಯಂತ ಈ ಸಿನಿಮಾ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ಕೇವಲ ಹಿಂದಿ ಡಬ್ಬಿಂಗ್​ ವರ್ಷನ್​ನಿಂದಲೇ 91 ಕೋಟಿ ರೂಪಾಯಿ ಗಳಿಸಿದೆ. ಇಷ್ಟೆಲ್ಲ ಸಾಧನೆಗೆ ಅಲ್ಲು ಅರ್ಜುನ್​ (Allu Arjun) ಅವರ ನಟನೆಯ ಮತ್ತು ಅಭಿಮಾನಿ ಬಳಗ ಕಾರಣ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲರಿಗೂ ಭಾರಿ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಅವರು ಹೊಸ ಚಿತ್ರಕ್ಕಾಗಿ ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಲಿದ್ದಾರೆ. ಆ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್​ ಪಡೆಯುತ್ತಾರೆ ಎನ್ನಲಾದ ಸಂಭಾವನೆ (Allu Arjun Remuneration) ಮೊತ್ತ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ.

‘ಪುಷ್ಪ’ ಗೆಲುವಿನ ಬಳಕ ಅಲ್ಲು ಅರ್ಜುನ್​ ಅವರು ಸಹಜವಾಗಿಯೇ ಸಂಭಾವನೆ ಏರಿಕೆ ಮಾಡಿಕೊಂಡಿದ್ದಾರೆ. ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಅವರು ಅಟ್ಲಿ ಜೊತೆಗಿನ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯು ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಈ ಹಿಂದೆ ‘ಕತ್ತಿ’, ‘2.0’ ಮುಂತಾದ ಹೈ ಬಜೆಟ್​ ಚಿತ್ರಗಳನ್ನು ನಿರ್ಮಾಣ ಮಾಡಿದ್ದು ಇದೇ ಲೈಕಾ ಪ್ರೊಡಕ್ಷನ್​ ಸಂಸ್ಥೆ.

ಕಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅಟ್ಲಿ ಅವರಿಗೆ ಸಲ್ಲುತ್ತದೆ. ಮೆರ್ಸೆಲ್​, ತೇರಿ, ಬಿಗಿಲ್​ ಮುಂತಾದ ಸಿನಿಮಾಗಳು ಅಟ್ಲಿ ಬತ್ತಳಿಕೆಯಿಂದ ಬಂದಂಥವು. ಈಗ ಅವರು ಶಾರುಖ್​ ಖಾನ್​ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್​ ಖಾನ್​ ಅವರಿಗೆ ಒಂದು ಗೆಲುವು ಕೊಡಿಸುವ ಜವಾಬ್ದಾರಿಯನ್ನು ಅಟ್ಲಿ ಹೆಗಲಿಗೆ ಹಾಕಲಾಗಿದೆ. ಆ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಲಯನ್​’ ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆ ಸಿನಿಮಾದ ಕೆಲಸಗಳು ಮುಗಿದ ಬಳಿಕ ಅಟ್ಲಿ ಅವರು ಅಲ್ಲು ಅರ್ಜುನ್​ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಇತ್ತ ಅಲ್ಲು ಅರ್ಜುನ್​ ಅವರು ‘ಪುಷ್ಪ’ ಸಿನಿಮಾದ ಎರಡನೇ ಪಾರ್ಟ್​ಗಾಗಿ ಸಜ್ಜಾಗುತ್ತಿದ್ದಾರೆ. ಮೊದಲ ಪಾರ್ಟ್​ಗೆ ಭರ್ಜರಿ ಗೆಲುವು ಸಿಕ್ಕಿರುವುದರಿಂದ ಎರಡನೇ ಪಾರ್ಟ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದೇಶಕ ಸುಕುಮಾರ್​ ಅವರು ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ಮುಗಿದ ಬಳಿಕವಷ್ಟೇ ಅಲ್ಲು ಅರ್ಜುನ್​ ಅವರು ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹೊಸ ಸಿನಿಮಾ ಕುರಿತಂತೆ ಮಾತನಾಡಲು ಈಗಾಗಲೇ ಅಟ್ಲಿ ಮತ್ತು ಅಲ್ಲು ಅರ್ಜುನ್​ ಅವರು ಭೇಟಿ ಆಗಿದ್ದಾರೆ ಎನ್ನಲಾಗಿದೆ. ಅಟ್ಲಿ ಹೇಳಿರುವ ಕಥೆ ಅಲ್ಲು ಅರ್ಜುನ್​ಗೆ ಸಖತ್​ ಇಷ್ಟ ಆಗಿದೆ. ಶೀಘ್ರದಲ್ಲೇ ಅವರು ಈ ಸಿನಿಮಾಗೆ ಸಹಿ ಮಾಡಲಿದ್ದಾರೆ ಎಂಬ ಗುಸುಗುಸು ಹರಡಿದೆ.

ಇದನ್ನೂ ಓದಿ:

‘ಬೇರೆಯವರ ಚಿತ್ರದಲ್ಲಿ ನಾನು 2ನೇ ಹೀರೋ​ ಆಗಲ್ಲ’; ಖಡಕ್​ ಉತ್ತರ ಕೊಟ್ಟ ಅಲ್ಲು ಅರ್ಜುನ್​

85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ