Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಮಿಕಾ ಫೋಟೋ ರಿವೀಲ್​ ಮಾಡಿದ ಸ್ಟಾರ್ ಸ್ಟೋರ್ಟ್ಸ್​​; ಪಂದ್ಯ ನಡೆಯುವಾಗ ಕೊಹ್ಲಿ ಮಗಳನ್ನು ತೋರಿಸಿದ ಕ್ಯಾಮೆರಾಪರ್ಸನ್​

Vamika Face Revealed: ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್​ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು.

ವಮಿಕಾ ಫೋಟೋ ರಿವೀಲ್​ ಮಾಡಿದ ಸ್ಟಾರ್ ಸ್ಟೋರ್ಟ್ಸ್​​; ಪಂದ್ಯ ನಡೆಯುವಾಗ ಕೊಹ್ಲಿ ಮಗಳನ್ನು ತೋರಿಸಿದ ಕ್ಯಾಮೆರಾಪರ್ಸನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 23, 2022 | 8:26 PM

ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್​ ಕೊಹ್ಲಿ (Virat Kohli) ಅವರ ಮಗಳು ವಮಿಕಾ (Vamika) ಜನಿಸಿ ಒಂದು ವರ್ಷದ ಮೇಲಾಗಿದೆ. ಆದರೆ, ಅವಳ ಫೋಟೋವನ್ನು ರಿವೀಲ್​ ಮಾಡಬಾರದು ಎಂದು ಈ ದಂಪತಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ವಮಿಕಾ ಮುಖವನ್ನು ಮುಚ್ಚಿಕೊಂಡೇ ಹೋಗುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಅವರು ಕೋರಿಕೊಂಡಿದ್ದಿದೆ. ಈಗ ವಮಿಕಾ ಅವಳ ಫೋಟೋವನ್ನು ಸ್ಟಾರ್​​ ಸ್ಪೋರ್ಟ್ಸ್​ ವಾಹಿನಿ ರಿವೀಲ್​ ಮಾಡಿದೆ! ಈ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ. ವಾಹಿನಿ ಬಗ್ಗೆ ಕೆಲವರಿಂದ ಟೀಕೆ ಕೂಡ ಬಂದಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್​ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಕ್ಯಾಮೆರಾಮೆನ್​ ವಮಿಕಾಳನ್ನು ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಇದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಒಂದು ವರ್ಷದ ಅವಧಿಯಲ್ಲಿ ಅವರು ಎಲ್ಲಿಯೂ ಮಗುವಿನ ಮುಖವನ್ನು ತೋರಿಸಿಲ್ಲ. ಅವಳಿಗೆ ಅನಗತ್ಯ ಪ್ರಚಾರ ನೀಡುವುದು ಬೇಡ ಹಾಗೂ ಸೋಶಿಯಲ್​ ಮೀಡಿಯಾದಿಂದ ಆಕೆಯನ್ನು ದೂರವೇ ಇಡಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ದಂಪತಿ ಆಕೆಯ ಫೋಟೋ ಹಂಚಿಕೊಂಡಿಲ್ಲ. ಇದನ್ನು ಮಾಧ್ಯಮದವರು ಹಾಗೂ ಪಾಪರಾಜಿಗಳು ಬೆಂಬಲಿಸುತ್ತಿದ್ದಾರೆ. ಆದಾಗ್ಯೂ ಕೆಲವರು ವಮಿಕಾಳ ಮುಖವನ್ನು ತೋರಿಸುವಂತೆ ಮನವಿ ಇಡುತ್ತಿದ್ದಾರೆ. ಅವರಿಗೆ ಅನುಷ್ಕಾ ವಿಶೇಷ ಪತ್ರ ಬರೆದಿದ್ದರು.

‘ನಮ್ಮ ಮಗುವಿಗೆ ಖಾಸಗಿತನ ನೀಡಿ. ಸೋಶಿಯಲ್​ ಮೀಡಿಯಾದಿಂದ ಮುಕ್ತವಾಗಿ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ಕೊಡಿ. ಅವಳು ಬೆಳೆದಂತೆ ನಾವು ಅವಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ಅವಳ ಚಿತ್ರಗಳನ್ನು ಪೋಸ್ಟ್ ಮಾಡದಿರಲು ಕೋರುತ್ತೇವೆ. ನಮ್ಮ ಫ್ಯಾನ್​ ಕ್ಲಬ್‌ಗಳು ಮತ್ತು ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ವಿಶೇಷ ಧನ್ಯವಾದಗಳು’ ಎಂದು ಅನುಷ್ಕಾ ಬರೆದುಕೊಂಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆಡಲು ವಿರಾಟ್​ ಕೊಹ್ಲಿ ಆ ದೇಶಕ್ಕೆ ತೆರಳಿದ್ದಾರೆ. ಅನುಷ್ಕಾ ಶರ್ಮಾ ಕೂಡ ವಿರಾಟ್​ ಜತೆಯಲ್ಲಿ ಇದ್ದಾರೆ. ವಿಮಾನ ನಿಲ್ದಾಣದಲ್ಲಿ ವಿರಾಟ್​ ಮಗುವನ್ನು ಕರೆದುಕೊಂಡು ಬಂದಿದ್ದರು. ಪಾಪರಾಜಿಗಳು ಫೋಟೋ ತೆಗೆಯೋಕೆ ಮುಂದಾದರು. ಮಗುವಿನ ಫೋಟೋವನ್ನು ತೆಗೆಯದಂತೆ ವಿರಾಟ್​ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪಾಪರಾಜಿಗಳು ಒಪ್ಪಿಗೆ ಸೂಚಿಸಿದ್ದರು. ಆದರೆ, ಈಗ ಅವಳ ಮುಖ ಹೊರಬಿದ್ದಿದೆ.

ಇದನ್ನೂ ಓದಿ: Vamika Birthday: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಮಗಳು ವಮಿಕಾಗೆ ಮೊದಲ ಹುಟ್ಟುಹಬ್ಬ; ಇಲ್ಲಿವೆ ಫೋಟೋಗಳು

Anushka Sharma: ಬಯೋಬಬಲ್ ನಡುವೆ ವಮಿಕಾ ಹುಟ್ಟುಹಬ್ಬ ಆಚರಣೆ; ಸಂಭ್ರಮ ಹೇಗಿತ್ತು?

Published On - 8:11 pm, Sun, 23 January 22

ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು
ಕಾರಿನಿಂದ ಗುದ್ದಿ ಕೊಲ್ಲಲು ಯತ್ನ: ಬಚಾವಾದ ಬಗ್ಗೆ ಮುರಳಿ ಪ್ರಸಾದ್ ಮಾತು
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?