85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?

85 ಲಕ್ಷ ರೂ. ಕಾರಿನ ಬಗ್ಗೆ ಮಾತಾಡಿ ಕಣ್ಣೀರು ಹಾಕಿದ ಅಲ್ಲು ಅರ್ಜುನ್​; ವೇದಿಕೆಯಲ್ಲಿ ನಡೆದಿದ್ದೇನು?
ಅಲ್ಲು ಅರ್ಜುನ್​

Pushpa Movie Success Meet: ‘ನೀವಿಲ್ಲದೇ ನಾನಿಲ್ಲ ಡಾರ್ಲಿಂಗ್​’ ಎಂದು ಹೇಳುತ್ತ ಅಲ್ಲು ಅರ್ಜುನ್​ ಆನಂದಭಾಷ್ಪ ಸುರಿಸಿದರು. ಆ ವೇಳೆ ನಿರ್ದೇಶಕ ಸುಕುಮಾರ್​ ಕೂಡ ಎಮೋಷನಲ್​ ಆದರು.

TV9kannada Web Team

| Edited By: Madan Kumar

Dec 29, 2021 | 9:36 AM

ನಟ ಅಲ್ಲು ಅರ್ಜುನ್​ (Allu Arjun) ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಪುಷ್ಪ’ ಸಿನಿಮಾ (Pushpa Movie) ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ. ಕರ್ನಾಟಕದಲ್ಲೂ ‘ಪುಷ್ಪ’ ಚಿತ್ರ ಉತ್ತಮ ಕಮಾಯಿ ಮಾಡಿದೆ. ನಿರ್ದೇಶಕ ಸುಕುಮಾರ್​ (Sukumar) ಅವರು ಈ ಸಿನಿಮಾ ಮೂಲಕ ಮತ್ತೊಂದು ಗೆಲುವು ಪಡೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ಮಂಗಳವಾರ (ಡಿ.27) ಸಕ್ಸಸ್​ ಮೀಟ್​ ಆಯೋಜಿಸಲಾಗಿತ್ತು. ಎಲ್ಲರೂ ನೆರೆದಿದ್ದ ಆ ಕಾರ್ಯುಕ್ರಮದಲ್ಲಿ ಅಲ್ಲು ಅರ್ಜುನ್​ ಅವರು ಸಖತ್​ ಎಮೋಷನಲ್​ ಆದರು. ಆ ವಿಡಿಯೋ ಕೂಡ ಈಗ ವೈರಲ್​ ಆಗುತ್ತಿದೆ.

ಅಲ್ಲು ಅರ್ಜುನ್ ಅವರು ‘ಪುಷ್ಪ’ ಸಿನಿಮಾದ ಥ್ಯಾಂಕ್ಸ್​ ಮೀಟ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಈ ವೇದಿಕೆಯಲ್ಲಿ ಅವರು 40 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದರು. ತಮ್ಮ ಗೆಲುವಿಗೆ ಕಾರಣರಾದ ಎಲ್ಲರನ್ನೂ ಅವರು ನೆನಪಿಸಿಕೊಂಡರು. ‘ಕಳೆದ ಎರಡು ವರ್ಷ ತುಂಬ ಕಠಿಣವಾಗಿತ್ತು. ನಿಮ್ಮೆಲ್ಲರಿಗೂ ಧನ್ಯವಾದ ಹೇಳಬೇಕು ಎಂದು ನಾನು ಈ ಕ್ಷಣಕ್ಕಾಗಿ ಕಾದಿದ್ದೆ. ಇನ್ಮುಂದೆ ನನ್ನ ಸಿನಿಮಾ ಸೋತರೂ ಸಹ ನಾನು ಥ್ಯಾಂಕ್ಸ್​ ಮೀಟ್​ ಆಯೋಜಿಸುತ್ತೇನೆ. ಯಾಕೆಂದರೆ ಸೋತ ಚಿತ್ರದ ಹಿಂದೆಯೂ ತಂಡದ ಶ್ರಮ ಇರುತ್ತದೆ’ ಎಂದು ಅಲ್ಲು ಅರ್ಜುನ್​ ಹೇಳಿದರು.

ಅಲ್ಲು ಅರ್ಜುನ್​ ಅವರ ವೃತ್ತಿಜೀವನದಲ್ಲಿ ನಿರ್ದೇಶಕ ಸುಕುಮಾರ್​ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಆ ಕಾರಣಕ್ಕಾಗಿ ಸುಕುಮಾರ್​ ಅವರನ್ನು ಕಂಡರೆ ಅಲ್ಲು ಅರ್ಜುನ್​ಗೆ ವಿಶೇಷ ಗೌರವ. ಅದನ್ನು ‘ಪುಷ್ಪ’ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ಅಲ್ಲು ಅರ್ಜುನ್​ ನೆನಪಿಸಿಕೊಂಡರು. ಆ ವೇಳೆ ಅವರು ಸಖತ್​ ಎಮೋಷನಲ್​ ಆಗಿದ್ದರು. ಸುಕುಮಾರ್​ ನಿರ್ದೇಶನ ಮಾಡಿದ್ದ ಅಲ್ಲು ಅರ್ಜುನ್​ ಅವರ ‘ಆರ್ಯ’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಆ ಗೆಲುವಿನ ಬಳಿಕ ಅಲ್ಲು ಅರ್ಜುನ್​ ಅವರು 85 ಲಕ್ಷ ರೂ. ಬೆಲೆಯ ಸ್ಪೋರ್ಟ್ಸ್​ ಕಾರು ಖರೀದಿಸಿದ್ದರು.

‘ಆ ಕಾರಿನ ಸ್ಟೇರಿಂಗ್​ ಹಿಡಿದಾಗ ನಾನು ಸುಕುಮಾರ್​ ಅವರನ್ನು ನೆನಪು ಮಾಡಿಕೊಂಡೆ. ಯಾಕೆಂದರೆ ನನ್ನ ಗೆಲುವಿಗೆ ಅವರೇ ಕಾರಣ’ ಎಂದು ಅಲ್ಲು ಅರ್ಜುನ್​ ಹೇಳಿದರು. ಅಲ್ಲದೇ, ಸುಕುಮಾರ್​ ಕಡೆಗೆ ತಿರುಗಿ ‘ನೀವಿಲ್ಲದೇ ನಾನಿಲ್ಲ ಡಾರ್ಲಿಂಗ್​’ ಎಂದು ಹೇಳುತ್ತ ಆನಂದಭಾಷ್ಪ ಸುರಿಸಿದರು. ಆ ವೇಳೆ ಸುಕುಮಾರ್​ ಕೂಡ ಎಮೋಷನಲ್​ ಆದರು.

‘ಪುಷ್ಪ’ ಚಿತ್ರದ 2ನೇ ಪಾರ್ಟ್​ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಆ ಚಿತ್ರವನ್ನು ಇನ್ನಷ್ಟು ಹೆಚ್ಚಿನ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಅಲ್ಲು ಅರ್ಜುನ್ ಹೇಳಿದ್ದಾರೆ.

ಇದನ್ನೂ ಓದಿ:

‘ಪುಷ್ಪ’ ಚಿತ್ರಕ್ಕಾಗಿ ಶ್ರಮಿಸಿದವರಿಗೆ ನಿರ್ದೇಶಕ ಸುಕುಮಾರ್​ ಕಡೆಯಿಂದ ಬಂಪರ್​ ಗಿಫ್ಟ್​ 

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Follow us on

Related Stories

Most Read Stories

Click on your DTH Provider to Add TV9 Kannada