‘ಪುಷ್ಪ’ ಚಿತ್ರಕ್ಕಾಗಿ ಶ್ರಮಿಸಿದವರಿಗೆ ನಿರ್ದೇಶಕ ಸುಕುಮಾರ್​ ಕಡೆಯಿಂದ ಬಂಪರ್​ ಗಿಫ್ಟ್​ 

‘ಪುಷ್ಪ’ ಚಿತ್ರಕ್ಕಾಗಿ ಶ್ರಮಿಸಿದವರಿಗೆ ನಿರ್ದೇಶಕ ಸುಕುಮಾರ್​ ಕಡೆಯಿಂದ ಬಂಪರ್​ ಗಿಫ್ಟ್​ 
ಅಲ್ಲು ಅರ್ಜುನ್​-ರಶ್ಮಿಕಾ

ಅಲ್ಲು ಅರ್ಜುನ್​ ಅವರು ಪುಷ್ಪರಾಜ್​ ಆಗಿ ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ. ಈ ಕಾರಣಕ್ಕೆ ಜನರು ಹೆಚ್ಚೆಚ್ಚು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ದೊಡ್ಡದೊಡ್ಡ ಸಿನಿಮಾಗಳಿಗೂ ಈ ಚಿತ್ರ ಟಫ್​ ಫೈಟ್​ ನೀಡಿದೆ.

TV9kannada Web Team

| Edited By: Rajesh Duggumane

Dec 29, 2021 | 6:16 PM

‘ಪುಷ್ಪ’ ಸಿನಿಮಾ (Pushpa Movie) ಡಿಸೆಂಬರ್​ 17ಕ್ಕೆ ರಿಲೀಸ್​ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸಿನಿಮಾ ನೋಡಿದ ಕೆಲವರು ಇದನ್ನು ತೆಗಳಿದರೆ, ಇನ್ನೂ ಕೆಲವರು ಹೊಗಳಿದ್ದರು. ಆದರೆ, ಬಾಕ್ಸ್​ ಆಫೀಸ್​ನಲ್ಲಿ ಸಿನಿಮಾ ಒಳ್ಳೆಯ ಗಳಿಕೆಯನ್ನೇ ಮಾಡುತ್ತಿದೆ. ಈ ಸಿನಿಮಾ ಕಲೆಕ್ಷನ್​ 250 ಕೋಟಿ ರೂಪಾಯಿ ಗಡಿ ದಾಟಿದೆ. ಈ ಗೆಲುವನ್ನು ನಿರ್ದೇಶಕ ಸುಕುಮಾರ್ ಸಂಭ್ರಮಿಸಿದ್ದಾರೆ. ಅಲ್ಲದೆ, ತಮ್ಮ ತಾಂತ್ರಿಕ ತಂಡದಿಂದ ಈ ಸಿನಿಮಾ ಸಾಧ್ಯವಾಯಿತು ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕಾಗಿ ಶ್ರಮ ವಹಿಸಿದ ಎಲ್ಲರಿಗೂ ದೊಡ್ಡ ಗಿಫ್ಟ್​ ನೀಡೋಕೆ ಸುಕುಮಾರ್​ ಮುಂದಾಗಿದ್ದಾರೆ.

ಅಲ್ಲು ಅರ್ಜುನ್​ ಅವರು ಪುಷ್ಪರಾಜ್​ ಆಗಿ ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ. ಈ ಕಾರಣಕ್ಕೆ ಜನರು ಹೆಚ್ಚೆಚ್ಚು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ದೊಡ್ಡದೊಡ್ಡ ಸಿನಿಮಾಗಳಿಗೂ ಈ ಚಿತ್ರ ಟಫ್​ ಫೈಟ್​ ನೀಡಿದೆ. ಈ ಕಾರಣಕ್ಕೆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ಗಳಿಸಿದೆ. ಇದೇ ಖುಷಿಗೆ ಚಿತ್ರದ ನಿರ್ದೇಶಕ ಸುಕುಮಾರ್​ ಅವರು ತಂಡದ ಸಿಬ್ಬಂದಿಗೆ 1 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದಾರೆ.

ಎಲ್ಲರಿಗೂ ಧನ್ಯವಾದ ಹೇಳೋಕೆ ಸುಕುಮಾರ್​ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಇಡೀ ಚಿತ್ರತಂಡ ಹಾಜರಿತ್ತು. ‘ಪುಷ್ಪ ಚಿತ್ರ ಮಾಡುವುದು ನಿಜಕ್ಕೂ ಕಷ್ಟಕರವಾಗಿತ್ತು. ನನ್ನ ತಾಂತ್ರಿಕ ತಂಡವಿಲ್ಲದೆ ಅದು ಸಾಧ್ಯವಿರಲಿಲ್ಲ. ಹೀಗಾಗಿ, ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ ಎಲ್ಲರಿಗೂ ನಾನು 1 ಲಕ್ಷ ರೂಪಾಯಿ ನೀಡುತ್ತಿದ್ದೇನೆ’ ಎಂದು ಸುಕುಮಾರ್ ಹೇಳಿದರು. ಸುಕುಮಾರ್ ಅವರ ಈ ಘೋಷಣೆಯು ನಟ ಅಲ್ಲು ಅರ್ಜುನ್ ಮತ್ತು ಅಭಿಮಾನಿಗಳ ಮನ ಗೆದ್ದಿದೆ.

2021ರಲ್ಲಿ ಹೆಚ್ಚು ಸದ್ದು ಮಾಡಿದ ಟಾಪ್​ 100 ಹಾಡುಗಳ ಪಟ್ಟಿಯಲ್ಲಿ ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ’ ನಂ.1 ಪಟ್ಟ ಪಡೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಈ ಗೀತೆಯನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಅತಿವೇಗವಾಗಿ ಹೆಚ್ಚು ವೀವ್ಸ್​ ಪಡೆಯುವಲ್ಲಿಯೂ ಈ ಹಾಡು ದಾಖಲೆ ಬರೆಯಿತು. ಈವರೆಗೂ ಈ ಗೀತೆಯ ತೆಲುಗು ವರ್ಷನ್​ 9.3 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ ಟ್ರೆಂಡ್​ ಮತ್ತು ಜನರ ಆಯ್ಕೆಯನ್ನು ಆಧರಿಸಿ ಈ ಹಾಡು ನಂ.1 ಸ್ಥಾನಕ್ಕೇರಿದೆ.

ಇದನ್ನೂ ಓದಿ: ‘ಪುಷ್ಪ’ ಗೆಲುವಿನ ಬಳಿಕ ರಶ್ಮಿಕಾಗೆ ಬಂಪರ್​ ಚಾನ್ಸ್​; ಮತ್ತೋರ್ವ ಸ್ಟಾರ್​ ನಟನಿಗೆ ಕೊಡಗಿನ ಕುವರಿ ಜೋಡಿ?

‘ಪುಷ್ಪ’ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1; ಏನಿದು ಹೊಸ ದಾಖಲೆ?

Follow us on

Related Stories

Most Read Stories

Click on your DTH Provider to Add TV9 Kannada