‘ಅರ್ಜುನ್​ ಗೌಡ’ ಸುದ್ದಿಗೋಷ್ಠಿಯಲ್ಲಿ ಪತಿ ಕೋಟಿ ರಾಮು ನೆನೆದು ಕಣ್ಣೀರು ಹಾಕಿದ ಮಾಲಾಶ್ರೀ

ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ‘ಅರ್ಜುನ್​ ಗೌಡ’ ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್​ ದೇವರಾಜ್​ ನಾಯಕ. ಈ ಸಿನಿಮಾದ ಪತ್ರಿಕಾಗೋಷ್ಠಿ ಇಂದು (ಡಿಸೆಂಬರ್ 28) ನಡೆದಿದೆ. ಸುದ್ದಿಗೋಷ್ಠಿ ವೇಳೆ ಮಾಲಾಶ್ರೀ ಕಣ್ಣೀರು ಹಾಕಿದ್ದಾರೆ.

TV9kannada Web Team

| Edited By: Rajesh Duggumane

Dec 28, 2021 | 8:38 PM

ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ ರಾಮು (Koti Ramu) ಅವರ ಹೆಸರಿನ ಜತೆ ‘ಕೋಟಿ’ ಎಂಬ ವಿಶೇಷಣ ಕೂಡ ಸೇರಿಕೊಂಡಿತ್ತು. ಸಿನಿಮಾ ಮೇಲೆ ಅವರಿಗೆ ಅಷ್ಟರಮಟ್ಟಿಗೆ ಪ್ರೀತಿ ಇತ್ತು. ಅನೇಕ ಸೂಪರ್​ ಹಿಟ್​ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ರಾಮು ನಿರ್ಮಿಸಿದ ಸಾಹಸ ಪ್ರಧಾನ ಚಿತ್ರಗಳು ಜನಮನ ಗೆದ್ದಿದ್ದು ಈಗ ಇತಿಹಾಸ. ಕೊರೊನಾದಿಂದ ಈ ವರ್ಷ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ರಾಮು ನಿಧನದಿಂದ ಅವರ ಪತ್ನಿ ಮಾಲಾಶ್ರೀ (Malashree) ಕಂಗೆಟ್ಟಿದ್ದರು. ಈಗ ಪತಿಯ ಕನಸನ್ನು ನನಸು ಮಾಡಲು ಅವರು ಮುಂದೆ ಬಂದಿದ್ದಾರೆ. ರಾಮು ನಿರ್ಮಾಣ ಮಾಡಿದ ಕೊನೇ ಸಿನಿಮಾ ‘ಅರ್ಜುನ್​ ಗೌಡ’ (Arjun Gowda Movie) ತೆರೆಕಾಣಿಸಲು ಮಾಲಾಶ್ರೀ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಪ್ರಜ್ವಲ್​ ದೇವರಾಜ್​ (Prajwal Devaraj) ನಾಯಕ. ಈ ಸಿನಿಮಾದ ಪತ್ರಿಕಾಗೋಷ್ಠಿ ಇಂದು (ಡಿಸೆಂಬರ್ 28) ನಡೆದಿದೆ. ಸುದ್ದಿಗೋಷ್ಠಿ ವೇಳೆ ಮಾಲಾಶ್ರೀ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಪತಿ ಕೋಟಿ ರಾಮು ನಿರ್ಮಾಣದ ಕೊನೇ ಚಿತ್ರ ರಿಲೀಸ್​ ಮಾಡಲಿರುವ ಮಾಲಾಶ್ರೀ; ಡಿ.31ಕ್ಕೆ ‘ಅರ್ಜುನ್​ ಗೌಡ’

Follow us on

Click on your DTH Provider to Add TV9 Kannada