‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ

‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ
ರಮೇಶ್ ಅರವಿಂದ್

Ramesh Aravind: ರಮೇಶ್​ ಅರವಿಂದ್​ ನಿರ್ದೇಶನ ಮಾಡಿರುವ ‘100’ ಚಿತ್ರವನ್ನು ಎಂ. ರಮೇಶ್​ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ಸೈಬರ್​ ಕ್ರೈಂ ಸಂಬಂಧಿತ ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ.

TV9kannada Web Team

| Edited By: Madan Kumar

Nov 10, 2021 | 2:41 PM

ರಮೇಶ್ ಅರವಿಂದ್​​ (Ramesh Aravind) ಅವರು ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಫೇಮಸ್​. ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಅವರು ಯಶಸ್ಸು ಕಂಡಿದ್ದಾರೆ. ಕಮಲ್​ ಹಾಸನ್​ ಅವರಂಥ ದಿಗ್ಗಜ ನಟನಿಗೂ ಆ್ಯಕ್ಷನ್​-ಕಟ್​ ಹೇಳಿರುವ ಅವರು ತೆರೆ ಹಿಂದೆಯೂ ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ರಮೇಶ್​ ಅರವಿಂದ್​ ನಿರ್ದೇಶನದ ಸಿನಿಮಾ ಎಂದರೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ಕುತೂಹಲ ಇದ್ದೇ ಇರುತ್ತದೆ. ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘100’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಕಥಾಹಂದರ ಹೊಂದಿರುವ ಈ ಸಿನಿಮಾ ನ.19ರಂದು ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಈಗ ಈ ಚಿತ್ರದ ಮೇಕಿಂಗ್​ ವಿಡಿಯೋ (100 movie making video) ಕೂಡ ಗಮನ ಸೆಳೆಯುತ್ತಿದೆ. ರಮೇಶ್​ ಅರವಿಂದ್​ ಜೊತೆಗೆ ರಚಿತಾ ರಾಮ್​ (Rachita Ram), ಪೂರ್ಣಾ ಕೂಡ ಮುಖ್ಯಪಾತ್ರಗಳನ್ನು ನಿಭಾಯಿಸಿದ್ದಾರೆ.

ಇತ್ತೀಚೆಗಷ್ಟೇ ‘100’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಜಾಲಿ ಬಾಸ್ಟಿನ್​, ರವಿವರ್ಮಾ ಸಾಹಸ ನಿರ್ದೇಶನ ಮಾಡಿದ್ದಾರೆ. ಆ ಮೂಲಕ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಪ್ರಕಾಶ್​ ಬೆಳವಾಡಿ, ಶೋಭರಾಜ್​, ರಾಜು ತಾಳಿಕೋಟೆ ಮುಂತಾದವರು ಪೋಷಕ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಎಂ. ರಮೇಶ್​ ರೆಡ್ಡಿ ಅವರು ‘100’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೈಬರ್​ ಕ್ರೈಂ ಸಂಬಂಧಿತ ವಿಷಯಗಳನ್ನು ಇಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ಹಾಗಾಗಿ ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ‘100’ ಸಿನಿಮಾ ಹೆಚ್ಚು ಕನೆಕ್ಟ್​ ಆಗಲಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ರಮೇಶ್​ ಅರವಿಂದ್​ ಅವರು ಪೊಲೀಸ್​ ಅಧಿಕಾರಿಯಾಗಿ, ಫ್ಯಾಮಿಲಿ ಮ್ಯಾನ್​ ಆಗಿ ಕಾಣಿಸಿಕೊಂಡಿದ್ದಾರೆ.

‘ರಮೇಶ್​ ಅರವಿಂದ್​ ಜೊತೆ ನಾನು ಮಾಡುತ್ತಿರುವ ಮೂರನೇ ಸಿನಿಮಾ ಇದು. ಅವರ ಜೊತೆ ಕೆಲಸ ಮಾಡುವಾಗ ನಾವು ಜಾಸ್ತಿ ಅಲರ್ಟ್​ ಆಗಿರಬೇಕು. ಯಾಕೆಂದರೆ ಅವರು ಪರ್ಫೆಕ್ಟ್​ ಆಗಿರುತ್ತಾರೆ’ ಎನ್ನುತ್ತಾರೆ ಕ್ಯಾಮರಾಮ್ಯಾನ್​ ಸತ್ಯ ಹೆಗಡೆ. ‘ಇದೊಂದು ಫ್ಯಾಮಿಲಿ ಥ್ರಿಲ್ಲರ್​ ಸಿನಿಮಾ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ಸಾಗುತ್ತದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿರುವ ಕುಟುಂಬದಲ್ಲಿ ಸೈಬರ್​ ಕ್ರೈಮ್​ ಕಾರಣದಿಂದ ಒಂದೇ ಒಂದು ಕಹಿ ಘಟನೆ ನಡೆದರೆ ಎಲ್ಲವೂ ಹಾಳಾಗಿ ಹೋಗುತ್ತದೆ. ಅಂಥ ಒಂದು ಕಥೆ ಈ ಚಿತ್ರದಲ್ಲಿದೆ. ಸೈಬರ್​ ಕ್ರೈಮ್​ನಿಂದಾಗಿ ಹಣಕಾಸಿನ ಮೋಸ ಮಾತ್ರವಲ್ಲದೇ ಜನರು ಭಾವನಾತ್ಮಕವಾಗಿಯೂ ತೊಂದರೆಗೆ ಒಳಗಾಗುತ್ತಿದ್ದಾರೆ. ಅದರಿಂದ ಏನೆಲ್ಲ ಅನಾಹುತಗಳು ಆಗಬಹುದು ಎಂಬುದು ಈ ಸಿನಿಮಾದಲ್ಲಿದೆ’ ಎಂದು ರಮೇಶ್​ ಅರವಿಂದ್​ ಹೇಳಿದ್ದಾರೆ.

ಇದನ್ನೂ ಓದಿ:

‘ಶಿವಾಜಿ ಸುರತ್ಕಲ್​ 2’ ಚಿತ್ರದಲ್ಲಿ ಮೇಘನಾ ಗಾಂವ್ಕರ್​ಗೆ ವಿಶೇಷ ಪಾತ್ರ; ರಮೇಶ್​ ಅರವಿಂದ್ ಜತೆ ​ನಟಿಸುವ ಚಾನ್ಸ್​

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

Follow us on

Related Stories

Most Read Stories

Click on your DTH Provider to Add TV9 Kannada