AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೇಮ್ಸ್​’ ಸಿನಿಮಾ ಶೂಟಿಂಗ್​ ವಿಡಿಯೋ ವೈರಲ್​; ಪುನೀತ್​ ನೋಡಿ ಭಾವುಕರಾದ ಫ್ಯಾನ್ಸ್​

James Shooting Video: ಚೇತನ್​ ಕುಮಾರ್​ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರುತ್ತವೆ. ಸಿನಿಮಾದಲ್ಲಿ ಅದ್ದೂರಿತನ ಇರುತ್ತದೆ. ‘ಜೇಮ್ಸ್​​’ನಲ್ಲೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲು ಸಿನಿಮಾದ ಮೇಕಿಂಗ್​ ವಿಡಿಯೋ ಒಂದು ವೈರಲ್​ ಆಗಿದೆ.

‘ಜೇಮ್ಸ್​’ ಸಿನಿಮಾ ಶೂಟಿಂಗ್​ ವಿಡಿಯೋ ವೈರಲ್​; ಪುನೀತ್​ ನೋಡಿ ಭಾವುಕರಾದ ಫ್ಯಾನ್ಸ್​
ಪುನೀತ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 15, 2022 | 7:09 PM

Share

James Shooting Video: ಪುನೀತ್​ ರಾಜ್​ಕುಮಾರ್​ಗೆ (Puneeth Rajkumar) ಸ್ಯಾಂಡಲ್​​ವುಡ್​ನಲ್ಲಿ (Sandalwood) ತುಂಬಾನೇ ಬೇಡಿಕೆ ಇತ್ತು. ಅವರು ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅವರು ಮೃತಪಟ್ಟಿದ್ದು ಸ್ಯಾಂಡಲ್​ವುಡ್ ಪಾಲಿಗೆ ದೊಡ್ಡ ನಷ್ಟ. ಪುನೀತ್​ ಒಪ್ಪಿಕೊಂಡಿದ್ದ ಹಲವು ಪ್ರಾಜೆಕ್ಟ್​ಗಳು ಅರ್ಧಕ್ಕೆ ನಿಂತಿವೆ. ಅವರು ಅಭಿನಯಿಸುತ್ತಿದ್ದ ‘ಜೇಮ್ಸ್​’ ಸಿನಿಮಾ (James Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಚೇತನ್​ ಕುಮಾರ್ (Chetan Kumar)​ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದರು. ಆದಾಗ್ಯೂ, ಜೇಮ್ಸ್​ ಸಿನಿಮಾ ರಿಲೀಸ್​ ಆಗುತ್ತಿದೆ. ಪುನೀತ್​ ಜನ್ಮದಿನದ ಅಂಗವಾಗಿ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಅದಕ್ಕೂ ಮೊದಲು ವಿಡಿಯೋ ಒಂದು ವೈರಲ್​ ಆಗಿದೆ.

ಚೇತನ್​ ಕುಮಾರ್​ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರುತ್ತವೆ. ಸಿನಿಮಾದಲ್ಲಿ ಅದ್ದೂರಿತನ ಇರುತ್ತದೆ. ‘ಜೇಮ್ಸ್​​’ನಲ್ಲೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲು ಸಿನಿಮಾದ ಮೇಕಿಂಗ್​ ವಿಡಿಯೋ ಒಂದು ವೈರಲ್​ ಆಗಿದೆ. ಪುನೀತ್​ ಅವರು ಫಾಲ್ಸ್ ಬಳಿ ನಿಂತಿದ್ದಾರೆ. ಈ ವೇಳೆ ಡ್ರೋನ್​ನಲ್ಲಿ ವಿಡಿಯೋ ಶೂಟ್​ ಮಾಡಲಾಗಿದೆ. ಜೇಮ್ಸ್ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ಇದಾಗಿದ್ದು, ಈಗ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಫ್ಯಾನ್ಸ್​ ‘ಮಿಸ್​ ಯೂ ಅಪ್ಪು’ ಎಂದಿದ್ದಾರೆ.

‘ಜೇಮ್ಸ್​ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್​ ಶೂಟಿಂಗ್​ ಮಾಡಲು ನ.8ರಿಂದ ಪುನೀತ್​ ರಾಜ್​ಕುಮಾರ್​ ಅವರು ಡೇಟ್ಸ್​​ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್​ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್​ ಆಗಲಿದೆ’ ಎಂದು ಚೇತನ್​ ಕುಮಾರ್​ ಈ ಮೊದಲು ಹೇಳಿದ್ದರು.

ಪುನೀತ್​ ಅವರ ಇನ್ನುಳಿದ ಭಾಗದ ದೃಶ್ಯಗಳಿಗೆ ಸಹೋದರ ಶಿವರಾಜ್​ಕುಮಾರ್​ ಧ್ವನಿ ನೀಡುವ ಸಾಧ್ಯತೆ ಇದೆ. ಶಿವಣ್ಣ ಧ್ವನಿ ನೀಡಿದರೆ ಡಬ್ಬಿಂಗ್​ ಕೆಲಸ ಪೂರ್ಣಗೊಳ್ಳಲಿದೆ. ಆಗ ಸಿನಿಮಾ ಬಿಡುಗಡೆ ಮಾಡಬಹುದು. ಈ ಬಗ್ಗೆ ಶಿವರಾಜ್​ಕುಮಾರ್​ ಅವರು ಪಾಸಿಟಿವ್​ ಆಗಿ ಮಾತನಾಡಿದ್ದರು. ‘ಈವರೆಗೂ ನನ್ನ ಬಳಿ ಆ ರೀತಿಯ ಯಾವುದೇ ಪ್ರಸ್ತಾಪ ಬಂದಿಲ್ಲ. ಒಂದು ವೇಳೆ ಬಂದರೆ ಖಂಡಿತ ಮಾಡುವುದರಲ್ಲಿ ತಪ್ಪಿಲ್ಲ. ನನ್ನ ತಮ್ಮನಿಗೆ ವಾಯ್ಸ್​ ಕೊಡಲು ನನಗೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದರು.

ಇದನ್ನೂ ಓದಿ: ‘ಪುನೀತ್​ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’; ಟೀಕಾಕಾರರಿಗೆ ರಾಧಿಕಾ ಪಂಡಿತ್​ ತಿರುಗೇಟು 

Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ ಖುಷ್ಬೂ

Published On - 4:01 pm, Wed, 10 November 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು