ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ

ಸಂತೋಷ್​ ಆನಂದ್​ರಾಮ್​ ಹಾಗೂ ಪುನೀತ್​ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಕಾಂಬಿನೇಷನ್​ನಲ್ಲಿ ಬಂದ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಎರಡೂ ಚಿತ್ರ ಹಿಟ್​ ಆಗಿತ್ತು.

ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ
ಸಂತೋಷ್ ಆನಂದ್​ರಾಮ್ ಮತ್ತು ಪುನೀತ್ ರಾಜಕುಮಾರ್

ಪುನೀತ್​ ರಾಜ್​ಕುಮಾರ್​ ಅವರು ನಿಧನ ಹೊಂದಿ ಒಂದು ತಿಂಗಳು ಆಗುತ್ತಾ ಬಂದಿದೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಸಮಾಧಿಗೆ ನಿತ್ಯ ಸಾವಿರಾರು ಜನರು ಈಗಲೂ ಭೇಟಿ ನೀಡುತ್ತಲೇ ಇದ್ದಾರೆ. ಮತ್ತೊಂದು ಕಡೆ ಪುನೀತ್​ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್​’ನ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾ ಮಾರ್ಚ್​ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈಗ ಪುನೀತ್​ ಬಯೋಪಿಕ್​ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೊಂದು ಆಲೋಚನೆ ಅಭಿಮಾನಿಗಳ ಕಡೆಯಿಂದಲೇ ಬಂದಿದೆ. ಇದಕ್ಕೆ ಖ್ಯಾತ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಪ್ರತಿಕ್ರಿಯೆ ನೀಡಿದ್ದಾರೆ.

ಸಂತೋಷ್​ ಆನಂದ್​ರಾಮ್​ ಹಾಗೂ ಪುನೀತ್​ ಎರಡು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇವರ ಕಾಂಬಿನೇಷನ್​ನಲ್ಲಿ ಬಂದ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಎರಡೂ ಚಿತ್ರ ಹಿಟ್​ ಆಗಿತ್ತು. ಇವರ ಕಾಂಬಿನೇಷನ್​ನಲ್ಲಿ ಮೂರನೇ ಸಿನಿಮಾ ಮೂಡಿ ಬರಬೇಕಿತ್ತು. ಅದಕ್ಕೂ ಮೊದಲೇ ಅವಘಡವೊಂದು ನಡೆದು ಹೋಗಿತ್ತು. ಪುನೀತ್​ ಹೃದಯಘಾತದಿಂದ ಮೃತಪಟ್ಟರು. ಈ ಕಾರಣಕ್ಕೆ ಹಲವು ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. ಈ ಮಧ್ಯೆ ಪುನೀತ್​ ಬಯೋಪಿಕ್​ ಬಗ್ಗೆ ಚರ್ಚೆ ನಡೆದಿದೆ.

ಪುನೀತ್​ ಸಣ್ಣ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಆಗಲೇ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಅವರು ಬಾಚಿಕೊಂಡರು. ನಂತರ ಹೀರೋ ಆಗಿಯೂ ಪುನೀತ್​ ಮಿಂಚಿದರು. ಸಾಮಾಜಿಕ ಕೆಲಸಗಳನ್ನು ಕೂಡ ಪುನೀತ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಪುನೀತ್​ ಬಗ್ಗೆ ತಿಳಿಯದೇ ಇರುವ ಹಲವು ವಿಚಾರಗಳು ಇವೆ. ಇದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ ಕಾರಣಕ್ಕೆ ಕೆಲವರು ಪುನೀತ್​​ ಬಯೋಪಿಕ್​ ಮಾಡಿ ಎನ್ನುವ ಬೇಡಿಕೆಯನ್ನು ಸಂತೋಷ್​ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸಂತೋಷ್​ ಆನಂದ್​ರಾಮ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಸಂತೋಷ್ ಆನಂದ್‌ರಾಮ್‌ ಅವರೇ ಅಪ್ಪು ಸರ್ ಬಗ್ಗೆ ಒಂದು ಬಯೋಪಿಕ್ ಮಾಡಿ. ನೀವು ಪುನೀತ್​ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೀರಿ. ಅವರ ಪ್ರೀತಿ ಮತ್ತು ಮೌಲ್ಯಗಳನ್ನು ನೋಡಿದ್ದೀರಿ. ದಯವಿಟ್ಟು ಬಯೋಪಿಕ್​ ಮಾಡಿ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸಂತೋಷ್ ಆನಂದ್‌ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಕಲ್ಪನೆಯನ್ನು ತೆರೆಯ ಮೇಲೆ ತರಲು ನನ್ನಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸುರಿಯುವ ಮಳೆಯಲ್ಲಿ ಪುನೀತ್ ಫೋಟೋ​ಗೆ ಕೈ ಮುಗಿದು ಕುಳಿತ ಅಭಿಮಾನಿ; ಇಲ್ಲಿದೆ ವೈರಲ್​ ವಿಡಿಯೋ

ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಮಹಾರಾಷ್ಟ್ರ ಅನಾಥಾಶ್ರಮದಲ್ಲಿ ಅನ್ನದಾನ

Click on your DTH Provider to Add TV9 Kannada