ಇಂತಹ ಅಭಿಮಾನಿಗಳನ್ನು ಯಾವತ್ತೂ ನಾನು ಕಂಡಿರಲಿಲ್ಲ; ರಾಘವೇಂದ್ರ ರಾಜ್ಕುಮಾರ್
ಬೆಂಗಳೂರಿನಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ ಪುನೀತ್ ಎಲ್ಲ ಕ್ಷೇತ್ರಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಅಭಿಮಾನಿಗಳನ್ನು ಯಾವತ್ತೂ ನಾನು ಕಂಡಿರಲಿಲ್ಲ ಎಂದಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಒಂದು ತಿಂಗಳು ಆಗುತ್ತಾ ಬಂದಿದೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಸಮಾಧಿಗೆ ನಿತ್ಯ ಸಾವಿರಾರು ಜನರು ಈಗಲೂ ಭೇಟಿ ನೀಡುತ್ತಲೇ ಇದ್ದಾರೆ. ಇಷ್ಟೊಂದು ಅಭಿಮಾನಿಗಳನ್ನು ಎಲ್ಲಿಯೂ ಕಂಡಿರಲಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ‘ಪುನೀತ್ ಎಲ್ಲ ಕ್ಷೇತ್ರಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹ ಅಭಿಮಾನಿಗಳನ್ನು ಯಾವತ್ತೂ ನಾನು ಕಂಡಿರಲಿಲ್ಲ. ಪುನೀತ್ರಾಜ್ಕುಮಾರ್ಗೆ ಅಣ್ಣನಾಗಿರುವುದು ನನ್ನ ಭಾಗ್ಯ. ಅವನು ನನ್ನ ತಮ್ಮನಲ್ಲ ನನ್ನ ಅಪ್ಪನೇನೋ ಎಂದು ಅನಿಸುತ್ತಿದೆ. ಪುನೀತ್ ಮೃತ್ಯುಂಜಯ’ ಎಂದು ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ಹೆಸರನ್ನು ಅಮರವಾಗಿಸಲು ಹಲವು ಕೆಲಸಗಳನ್ನು ಮಾಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ಇಂದು (ನ.21) ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಶಿವರಾಜ್ಕುಮಾರ್ ಚಾಲನೆ ನೀಡಿದ್ದರು.
ಇದನ್ನೂ ಓದಿ: ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ರಾಜ್-ಪುನೀತ್ ಜೀವನ ಚರಿತ್ರೆ; ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ